ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಸ್ಥಗಿತ ಅಂತಾ... Zee Kannada Saregamapa
ಹಾಡು ಹಾಡಬೇಕು, ಜೀವನದಲ್ಲಿ ಸಂಗೀತ ಕಲಿತು ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಗೆ, ಕೋಟಿ ಕೋಟಿ ಯುವಕ & ಯುವತಿಯರಿಗೆ ಬೆಂಬಲ ನೀಡುತ್ತಾ ಬಂದಿರುವುದೇ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಎನ್ನಬಹುದು. ಯಾಕಂದ್ರೆ ಹತ್ತಾರು ವರ್ಷಗಳಿಂದ ಕೂಡ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಕನ್ನಡಿಗರ ಮನಸ್ಸು & ಹೃದಯ ಎರಡವನ್ನೂ ಗೆದ್ದು ಬೀಗಿದೆ. ಹೀಗಿದ್ದಾಗಲೇ ದಿಢೀರ್....
ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಮೂಲಕ ಸಾಕಷ್ಟು ಯುವ ಪ್ರತಿಭೆಗಳು & ಬಡವರ ಮನೆ ಮಕ್ಕಳು ಬದುಕು ಕಟ್ಟಿಕೊಂಡು ಆರಾಮವಾಗಿ ಬದುಕುತ್ತಿದ್ದಾರೆ. ಹೀಗೆ ಕೋಟ್ಯಂತರ ಜನರ ನೆಚ್ಚಿನ ಕಾರ್ಯಕ್ರಮ ಆಗಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶದಲ್ಲೂ ಕನ್ನಡ ಕಾರ್ಯಕ್ರಮ 'ಜೀ ಕನ್ನಡ ಸರಿಗಮಪ' ನೋಡುತ್ತಾರೆ ಅಭಿಮಾನಿಗಳು. ಹೀಗಿದ್ದಾಗಲೇ, ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಸ್ಥಗಿತ ಅಂತಾ....

ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಸ್ಥಗಿತ?
ಹೌದು, ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಸ್ಥಗಿತ ಅಂತಾ ಇದೀಗ ಸುದ್ದಿ ಹಬ್ಬಿಸಲಾಗ್ತಿದೆ. ಇದಕ್ಕೆ ಕಾರಣವಾಗಿದ್ದು, ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಜ್ಯೂರಿ ಆಗಿದ್ದ ಸಂಗೀತ ವಿದ್ವಾಂಸ ಎಸ್. ಬಾಲಿ ಖ್ಯಾತಿಯ ಎಸ್. ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿ. ಇದೇ ಬಾಲಿ ಅವರು ಬಹುವಾದ್ಯ ಪರಿಣತರು ಕೂಡ ಆಗಿದ್ದರು.
ಈ ಸುದ್ದಿ ಕೇಳಿದ್ದ ಸಂಗೀತ ಪ್ರಿಯ ಕನ್ನಡಿಗರು ಕಣ್ಣೀರು ಹಾಕಿದ್ದರು. ಇದೇ ಕಾರಣಕ್ಕೇ ಈ ವಾರದ ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಸ್ಥಗಿತವಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಸುದ್ದಿ ಕೇವಲ ವದಂತಿ. ಯಾಕಂದ್ರೆ ಈಗಾಗಲೇ ಈ ವಾರದ ಸರಿಗಮಪ ಕಾರ್ಯಕ್ರಮದ ಪ್ರೋಮೋ ಕೂಡ ರಿಲೀಸ್ ಆಗಿದೆ. ಹೀಗಾಗಿ ಈ ವಾರ ಕೂಡ ಸರಿಗಮಪ ಕಾರ್ಯಕ್ರಮ ಪ್ರಸಾರವಾಗುವುದು ಗ್ಯಾರಂಟಿ!
ಕಿಚ್ಚ ಸುದೀಪ್ ಅವರು ಕಣ್ಣೀರು...
ಕಿಚ್ಚ ಸುದೀಪ್ ಅವರು ಇನ್ನು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಬಿಟ್ಟು ಹೊರ ಬರ್ತಿದ್ದಾರೆ. ಈ ಬಾರಿ ಬಿಗ್‌ಬಾಸ್ ಕಾರ್ಯಕ್ರಮ ಮುಗಿಸಿದ ನಂತರ ಮತ್ತೆ ನಿರೂಪಣೆ ಮಾಡಲ್ಲ ಎಂದಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ್ಯರಾಗಿದ್ದರು. ಈ ರೀತಿ ಕಿಚ್ಚ ಸುದೀಪ್ ಅವರು ಜೀ ಕನ್ನಡ ಕಾರ್ಯಕ್ರಮಕ್ಕೆ ಬಂದಿದ್ದನ್ನು ನೋಡಿ ಕೋಟ್ಯಂತರ ಕನ್ನಡಿಗರಿಗೆ ಆಶ್ಚರ್ಯ ಕೂಡ ಆಗಿತ್ತು. ಆದರೆ ಇದೇ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಕಣ್ಣೀರು ಹಾಕಿದ್ದಾರೆ. ಇದೇ ಪ್ರೋಮೋ ಈಗ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಅಭಿಮಾನಿಗಳು ಫುಲ್ ಖುಷ್!
ಅಂದಹಾಗೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಗತಿ ಅವರ ಅಭಿಮಾನಿಗಳಿಗೆ ಕೂಡ ಸಾಕಷ್ಟು ಖುಷಿ ನೀಡಿದೆ. ಮತ್ತೊಂದು ಕಡೆ ಹೀಗೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಟಿಆರ್‌ಪಿ ವಿಚಾರದಲ್ಲಿ ಕೂಡ ದೊಡ್ಡ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ. ಹಾಗೇ ಈ ವೇಳೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳು ಕೂಡ ಕಿಚ್ಚ ಸುದೀಪ್ ಅವರ ಮಾತುಗಳನ್ನ ಕೇಳಿ ಮತ್ತಷ್ಟು ಹುಮ್ಮಸ್ಸು ತುಂಬಿಕೊಂಡಿದ್ದು, ಭಾನುವಾರ ಕೂಡ ಕಿಚ್ಚ ಸುದೀಪ್ ಅವರು ಭಾಗವಹಿಸಿದ್ದ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಎಪಿಸೋಡ್ ಮುಂದುವರಿಯಲಿದೆ.
ಅಭಿಮಾನಿಗಳು ಹೇಳೋದು ಏನು?
ಒಟ್ನಲ್ಲಿ, ಆಂಕರ್ ಅನುಶ್ರೀ ಅಂದ್ರೆ ಮಾಸ್... ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್... ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆ ಸೂಪರ್ ಸ್ಟಾರ್ ಅಂತ ಕಣ್ಣುಮುಚ್ಕೊಕೊಂಡು ಹೇಳಬಹುದು ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತದೆ ಅನ್ನೋ ಕಾಮಿಡಿ ಟಿವಿ ಚಾನೆಲ್ ಆಫಿಸ್‌ನಲ್ಲಿ ಕಾಮನ್. ಯಾಕಂದ್ರೆ ಆಂಕರ್ ಅನುಶ್ರೀ ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ ಆಡ್ ಬಂದ್ರು ಜನ ಚಾನಲ್ ಚೇಂಜ್ ಮಾಡದೇ ಆಂಕರ್ ಅನುಶ್ರೀ ಅವರ ಮಾತಿಗಾಗಿ ಕಾಯುತ್ತಾರೆ. ಹೀಗಾಗಿ ಆಂಕರ್ ಅನುಶ್ರೀ ಇನ್ನೂ ಹತ್ತಾರು ವರ್ಷಗಳ ಕಾಲ ಹೀಗೆ ಆಂಕರಿಂಗ್ ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ!












Click it and Unblock the Notifications