ಆಂಕರ್ ಅನುಶ್ರೀ & ಅರ್ಜುನ್ ಜನ್ಯ ನಡುವೆ ಬಿರುಕು... Anchor Anushree
ಆಂಕರ್ ಅನುಶ್ರೀ ಸರಿಗಮಪ ಕಾರ್ಯಕ್ರಮಕ್ಕೆ ಬಂದೇ ಇಲ್ಲ ಅನ್ನೋ ಕೊರಗು ಅಭಿಮಾನಿ ಬಳಗಕ್ಕೆ ಕಾಡುತ್ತಿದೆ. ಆಂಕರ್ ಅನುಶ್ರೀ ಇಲ್ಲದೆ ಸರಿಗಮಪ ಕಾರ್ಯಕ್ರಮದ ಕಳೆಯೇ ಕಡಿಮೆ ಆಗಿದೆ ಅಂತಿದ್ದಾರೆ ಅಭಿಮಾನಿಗಳು. ಯಾಕಂದ್ರೆ ಆಂಕರ್ ಅನುಶ್ರೀ ಅವರ ಖದರ್ ಹಂಗಿದೆ, ಕನ್ನಡ ವೀಕ್ಷಕರನ್ನು ಟಿವಿ ಪರದೆಯ ಮೇಲೆ ಹಿಡಿದಿಡುವ ಶಕ್ತಿ ಅವರಲ್ಲಿ ಇತ್ತು. ಹೀಗಿದ್ದಾಗಲೇ, ಆಂಕರ್ ಅನುಶ್ರೀ & ಅರ್ಜುನ್ ಜನ್ಯ ನಡುವೆ ಬಿರುಕು...
ಜೀ ಕನ್ನಡದ ಸರಿಗಮಪ ಕಾರ್ಯಕ್ರಮ ಕನ್ನಡಿಗರಿಗೆ ಒಂದು ಹೆಮ್ಮೆ ವಿಚಾರ. ಯಾಕೆ ಅಂದ್ರೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮ ದೇಶದ ಮೂಲೆ ಮೂಲೆಯಲ್ಲೂ ಹೆಸರು ಮಾಡುವ ಮೂಲಕ ಕನ್ನಡ ಹಾಡುಗಳ ಕಂಪು ಪಸರಿಸುತ್ತಿದೆ. ಇಂಥ ಮಹತ್ವದ ಕಾರ್ಯಕ್ರಮಕ್ಕೆ ಆಂಕರ್ ಅನುಶ್ರೀ ಮತ್ತಷ್ಟು ಹೆಮ್ಮೆ ಮೂಡಿಸಿದ್ದಾರೆ. ಆದರೆ ದಿಢೀರ್, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಆಂಕರ್ ಅನುಶ್ರೀ ನಿವೃತ್ತಿ ಪಡೆದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರ ಜೊತೆಯಲ್ಲೇ...

ಆಂಕರ್ ಅನುಶ್ರೀ & ಅರ್ಜುನ್ ಜನ್ಯ ನಡುವೆ...
ಹೌದು, ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಕಳೆದ ವಾರ ಆಂಕರ್ ಅನುಶ್ರೀ ಬಂದಿರಲಿಲ್ಲ. ಹೀಗಿದ್ದಾಗ ಆಂಕರ್ ಅನುಶ್ರೀ ಅವರು ನಿರೂಪಣೆಗೆ ಯಾಕೆ ಬಂದಿಲ್ಲ? ಅನ್ನೋ ಚರ್ಚೆಯೂ ಶುರುವಾಗಿತ್ತು. ಇಷ್ಟೆಲ್ಲದರ ನಡುವೆ ಮತ್ತೊಂದು ಸ್ಫೋಟಕ ವಿಚಾರ ಇದೀಗ ಸಂಚಲನವೇ ಸೃಷ್ಟಿ ಆಗುವಂತೆ ಮಾಡಿದೆ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ & ಅರ್ಜುನ್ ಜನ್ಯ ನಡುವೆ ಬಿರುಕು...
ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಆಂಕರ್ ಅನುಶ್ರೀ ನಿರೂಪಣೆ ಮಾಡಲು ಬಂದಿಲ್ಲವೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಕಿಡಿ ಹೊತ್ತಿಸಿದೆ. ಯಾಕಂದ್ರೆ ಅನುಶ್ರೀ ಅವರೇ ಇಲ್ಲದೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಡಲ್ ಆಗಿದೆ ಅಂತಾ ಸೋಷಿಯಲ್ ಮೀಡಿಯಾ ಮಂದಿ ಚರ್ಚೆ ಮಾಡುತ್ತಿದ್ದರು. ಇಂತಹ ಸಮಯದಲ್ಲೇ ಮಾಸ್ಟರ್ ಆನಂದ್ ಬಂದು ಕಳೆದ ವಾರ ಜೀ ಕನ್ನಡ ಸರಿಗಮಪ ಕಾರ್ಯಕ್ರಮ ನಡೆಸಿಕೊಟ್ಟರು.
ಆಂಕರ್ ಅನುಶ್ರೀ ಯಾಕೆ ಬಂದಿರಲಿಲ್ಲ?
ಹೀಗಿದ್ದಾಗ ಅರ್ಜುನ್ ಜನ್ಯ ಅವರ ಜೊತೆಗೆ ಆಂಕರ್ ಅನುಶ್ರೀ ಅವರಿಗೆ ಮನಸ್ಥಾಪ ಅಗಿತ್ತಾ? ಈ ಕಾರಣಕ್ಕೆ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಆಂಕರ್ ಅನುಶ್ರೀ ನಿರೂಪಣೆ ಮಾಡಲು ಬಂದಿರಲಿಲ್ಲವಾ? ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾ ಪೂರ್ತಿ ಹಬ್ಬಿಕೊಂಡು ಭಾರಿ ದೊಡ್ಡ ಕಿಡಿ ಹೊತ್ತಿಸಿದೆ.
ಇದೇ ಸಮಯದಲ್ಲಿ ಮತ್ತೆ ಆಂಕರ್ ಅನುಶ್ರೀ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ನಿರೂಪಣೆಗೆ ಮರಳಿ ಬಂದಿದ್ದು, ಅರ್ಜುನ್ ಜನ್ಯ ಅವರ ಜೊತೆಗೆ ಯಾವುದೇ ರೀತಿ ಮನಸ್ಥಾಪ ಆಗಿಲ್ಲ. ಆದರೆ ಇದೆಲ್ಲಾ ಗಾಳಿ ಸುದ್ದಿ ಎನ್ನಲಾಗಿದೆ. ಹೀಗಾಗಿ, ಇದೀಗ ಆಂಕರ್ ಅನುಶ್ರೀ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು...
ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್ 1 ಶೋಗಳನ್ನು ನಡೆಸಿಕೊಡುವುದು ಇದೇ ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ ಅಂತಾ ಜನ ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್‌ನ ದೊಡ್ಡ, ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಹೀಗಿದ್ದಾಗಲೇ ಮತ್ತೆ ಅನುಶ್ರೀ ಅವರು ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ರೀ ಎಂಟ್ರಿಯನ್ನ ಕೊಟ್ಟು ಈ ವಾರದಿಂದ ತಮ್ಮ ಅಬ್ಬರ ಮತ್ತೆ ಶುರು ಮಾಡಲಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.
ಅನುಶ್ರೀ ಅವರ ಮದುವೆ ಯಾವಾಗ...
ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನಗಳು. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ದೊಡ್ಡ ಸಾಧನೆ ಮಾಡಿ ಮನೆ ಮನೆಯಲ್ಲೂ ಮಾತಾಗಿದ್ದಾರೆ. ಹೀಗಿದ್ದಾಗ ಶೀಘ್ರದಲ್ಲೇ ಅವರ ಮದುವೆ ಅನ್ನೋ ಮಾತು ಓಡಾಡುತ್ತಿವೆ.












Click it and Unblock the Notifications