Yuva Rajkumar: ತಾತ ರಾಜ್‌ಕುಮಾರ್ ಅವರನ್ನೂ ಮೀರಿಸಿದ ಮೊಮ್ಮಗ ಯುವ ರಾಜ್‌ಕುಮಾರ್!
ಭಲೇ.... ಭಲೇ... ಭಲೇ.... ಈ ಡೈಲಾಗ್ ಅನ್ನ ನೀವು ಕೇಳಿದರೆ ನಿಮ್ಮ ಬಾಯಲ್ಲೂ ಇದೇ ಮಾತು ಬರುವುದರಲ್ಲಿ ಅನುಮಾನವೇ ಇಲ್ಲ. ಯಾರಿವರು ಇಷ್ಟೊಂದು ಚಂದವಾಗಿ ಡಾ.ರಾಜುಕುಮಾರ್ ಅವರ ಬಬ್ರುವಾಹನ ಸಿನಿಮಾದ ಡೈಲಾಗ್ ಹೊಡೆಯುತ್ತಿದ್ದಾರೆ? ಯಾರೀ ಚಂದದ ಕುಡಿ ಅಂತ ಕೇಳಿದ್ರಾ? ಅದನ್ನ ಹೇಳ್ತೀವಿ ಕೇಳಿ.
ದೊಡ್ಮನೆಯ ಕುಡಿ. ಚಂದನವನದ ಚಂದದ ಹುಡುಗ. ಡಾ. ರಾಜಕುಮಾರ್ ಅವರ ಮೊಮ್ಮಗ. ಹೌದು... ಹೀಗೆ ನಿರಂತರವಾಗಿ ಡೈಲಾಗ್ ಡೆಲಿವರಿ ಮಾಡ್ತಾಯಿರುವ ಈ ಹುಡುಗ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್. ಈ ವಿಡಿಯೋದಲ್ಲಿ ಯುವ ರಾಜಕುಮಾರ್ ಥೇಟ್ ತನ್ನ ತಾತನಂತೆ ಪಟಪಟಾ ಅಂತ ಡೈಲಾಗ್ ಹೇಳಿದ್ದಾರೆ. ಇದನ್ನು ಕಂಡು ಜನ ಬೆರಗಾಗಿದ್ದಾರೆ.

ದೊಡ್ಮನೆಯಲ್ಲಿ ಇಷ್ಟೊಂದು ಚೆನ್ನಾಗಿ ಅದರಲ್ಲೂ ಡಾ. ರಾಜುಕುಮಾರ್ ಅವರಂತೆ ಡೈಲಾಗ್ ಹೇಳುವ ಯುವರಾಜ್‌ಕುಮಾರನನ್ನು ಕಂಡು ಜನ ಆಶ್ಚರ್ಯಕೊಂಡಿದ್ದಾರೆ. ಅಷ್ಟಕ್ಕೂ ಯುವರಾಜುಕುಮಾರ್ ಡೈಲಾಗ್ ಹೇಳಿದ್ದು ಸರಳವಾಗಿದ್ದೇನು ಅಲ್ಲ. ಬಬ್ರುವಾಹನ ಸಿನಿಮಾದ ಕಷ್ಟಕರವಾದ ಡೈಲಾಗ್ ಇದು. ಇದನ್ನು ತುಂಬಾ ಸರಳವಾಗಿ ತಮ್ಮ ತಾತನ ಶೈಲಿಯಲ್ಲಿ ಯುವರಾಜುಕುಮಾರ್ ಹೇಳಿದ್ದಾರೆ. ಇದನ್ನು ಕೇಳಿ ವೇದಿಕೆ ಮುಂಭಾಗದಲ್ಲಿದ್ದ ಜನ ಚಪ್ಪಾಳೆ, ಶಿಳ್ಳೆ ಹೊಡೆದು, ಕೂಗಾಡುತ್ತಾ ಸಂತೋಷಪಟ್ಟಿದ್ದಾರೆ.
Yuva dialogue delivery >>>> Darshan dialogue delivery in kaatera @dasadarshan Yuva Munde Baccha Piglet #Yuva #YuvaRajkumarpic.twitter.com/W08uhpvKBp
— Broken Heart 💔 (@RajTheShowMan_) February 19, 2024
ಈ ಡೈಲಾಗ್ 1977ರಲ್ಲಿ ಡಾ.ರಾಜುಕುಮಾರ ಅವರು ಬಬ್ರುವಾಹನ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾದ್ದು. ಇದರಲ್ಲಿ ರಾಜುಕುಮಾರ್ ಬಬ್ರುವಾಹನ ಪಾತ್ರದಲ್ಲಿ ಅರ್ಜುನನಿಗೆ ಈ ಡೈಲಾಗ್ ಹೇಳುತ್ತಾರೆ.
''ಬಬ್ರುವಾಹನ: ಏನು ಪಾರ್ಥಾ, ಅಹ್ಹಹ.. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ.
ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ,
ನಿನ್ನ ಪುಣ್ಯವೆಲ್ಲಾ ಉರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ.
ಹುಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ.
ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವಾ
ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ..''
ಈ ಡೈಲಾಗ್ ಅನ್ನೇ ಯುವರಾಜುಕುಮಾರ್ ತಡವರಿಸದೇ ಹೇಳಿದ್ದಾರೆ.
ಮೊದಲ ಬಾರಿಗೆ ಅದರಲ್ಲೂ ವಿಶೇಷವಾಗಿ ಮೊದಲ ಸಿನಿಮಾದಲ್ಲಿ ನಾಯಕ ನಟನಾಗಿ ಹೊಂದಿಕೊಳ್ಳುವುದು ಹಾಗೂ ಸಂಭಾಷಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಾವಭಾವ, ಸಂಭಾಷಣೆಯ ಶೈಲಿ ಸಿನಿಮಾಕ್ಕೆ ಹೊಂದಿಕೊಳ್ಳುವಂತಿರಬೇಕು. ಎಂಥಹ ಸ್ಥಳವೇ ಆದರೂ ಭಯಪಡದೆ ತಡವರಿಸದೇ ಡೈಲಾಗ್ ಹೇಳುವುದು ಅಂದರೆ ಅದು ನಿಜಕ್ಕೂ ಒಂದು ಸಾಹಸವೇ ಸರಿ.

ಹೀಗಿರುವಾಗ ಯುವರಾಜುಕುಮಾರ್ ವೇದಿಕೆ ಮೇಲೆ ನಿಂತು ತಾತನಂತೆ ಗಟ್ಟಿಯಾಗಿ ಹಾಗೂ ಖಡಕ್ ಆಗಿ ಡೈಲಾಗ್ ಹೇಳಿದ್ದಾರೆ. ಇದನ್ನು ಹೇಳುತ್ತಿದ್ದಂತೆ ಜನ ಸಂತೋಷಪಟ್ಟಿದ್ದಾರೆ. ಯುವರಾಜುಕುಮಾರ್ ನಲ್ಲಿ ಡಾ.ರಾಜುಕುಮಾರ್ ಅವರನ್ನು ಕಂಡಿದ್ದಾರೆ.
ಡಾ. ರಾಜುಕುಮಾರ್ ಕನ್ನಡಿಗರ ಆಸ್ತಿ. ಕನ್ನಡಿಗರ ಗಂಗಧ ಗುಡಿ. ಇವರು ಮಾಡದ ಪಾತ್ರಗಳಿಲ್ಲ. ಜನ ಮೆಚ್ಚದೇ ಇರುವ ಹಾಡುಗಳಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಡಾ.ರಾಜುಕುಮಾರ ಅವರ ಪಾತ್ರ ತುಂಬಾ ದೊಡ್ಡದು. ನಿರರ್ಗಳವಾಗಿ ಎಷ್ಟೇ ಕಷ್ಟದ ಡೈಲಾಗ್ ಇದ್ದರೂ ಸುಲಭವಾಗಿ ಹೇಳುವ, ಅದಕ್ಕೆ ತಕ್ಕಂತೆ ಹಾವಭಾವ, ಹಾಡುಗಳನ್ನು ಹಾಡುವ ಕನ್ನಡಿಗರ ಕಣ್ಮಣಿ ರಾಜುಕುಮಾರ್ ಅವರು. ಇಂದಿಗೂ ಕೂಡ ಅವರು ಕನ್ನಡಿಗರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಆದರೀಗ ಅವರು ನಮ್ಮೊಂದಿಗಿಲ್ಲ.
ವಿಧಿಯಾಟಕ್ಕೆ ಅವರ ಪುತ್ರ ಹಾಗೂ ನಟ ಪುನೀತ್ ರಾಜುಕುಮಾರ್ ಕೂಡ ನಮ್ಮನ್ನಗಲಿ ಹೋದರು. ಈ ನೋವು ಕನ್ನಡಿಗರ ಮನದಲ್ಲಿ ಮಾಸದಂತೆ ಉಳಿದಿದೆ. ಅವರ ಮಾತು, ಅವರ ಹಾಡುಗಳು ಇಂದಿಗೂ ಜನ ಪ್ರೀತಿಸುತ್ತಾರೆ ಹಾಗೂ ನೆನಪಿಸಿಕೊಳ್ಳುತ್ತಾರೆ. ಓಲ್ಡ್ ಈಜ್ ಗೋಲ್ಡ್ ಆದರೂ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜುಕುಮಾರ್ ಅವರಂತೆ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಬ್ಬ ನಾಯಕ ನಟರನ್ನು ನೋಡಲು ಸಾಧ್ಯವೇ ಇಲ್ಲ.
ಆದರೀಗ ಅವರ ನಟನೆಗೆ ಹೋಲುವಂತ ಹಾಗೂ ದೊಡ್ಮನೆಯ ಕುಡಿ ಯುವರಾಜುಕುಮಾರ್ ಅವರು ಈ ಎಲ್ಲಾ ನೋವನ್ನು ಕನ್ನಡಿಗರ ಮನದಿಂದ ಕೊಂಚ ಕಡಿಮೆ ಮಾಡಿದ್ದಾರೆ. ಅವರ ಮಾತು, ಅವರ ಹಾವಾಭಾವ ಹಾಗೂ ಅವರ ಡೈಲಾಗ್ ಡೆಲಿವರಿ ಸ್ಟೈಲ್ ಕನ್ನಡಿಗರ ಮನ ಮುಟ್ಟಿದೆ. ಅಭಿಮಾನಿಗಳ ಮನದ ಬಾಗಿಲನ್ನು ತೆರೆಯುವಂತೆ ಮಾಡಿದೆ.
ಮುಂದಿನ ತಿಂಗಳು ಮೊದಲ ಸಿನಿಮಾ!
ಅಂದಹಾಗೆ ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರ, ಮುಂದಿನ ತಿಂಗಳು ಅಂದ್ರೆ ಮಾರ್ಚ್ ವೇಳೆಗೆ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಹೀಗಾಗಿ, ಸಿನಿಮಾ ರಿಲೀಸ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದೆ ಹೊಂಬಾಳೆ ಫಿಲ್ಮ್ಸ್. ಇದರ ಜೊತೆಯಲ್ಲೇ ಇದೀಗ ಯುವ ರಾಜ್‌ಕುಮಾರ್ ಅವರ, ಡೈಲಾಗ್ ವೈರಲ್ ಆಗುತ್ತಿದೆ. ಐತಿಹಾಸಿಕ ಪಾತ್ರಕ್ಕೆ ಯುವ ರಾಜ್‌ಕುಮಾರ್ ಸಖತ್ ಹೊಂದಾಣಿಕೆ ಆಗುತ್ತಾರೆ. ಹಾಗೇ ಅವರ ತಾತನ ಅಂದರೆ, ಕನ್ನಡಿಗರ ವರನಟ ಡಾ.ರಾಜ್ ರೀತಿಯೇ ಅಬ್ಬರಿಸುತ್ತಾರೆ ಅಂತಿದ್ದಾರೆ ಫ್ಯಾನ್ಸ್. ಈ ಎಲ್ಲಾ ನಿರೀಕ್ಷೆಗಳು ಮುಂದಿನ ತಿಂಗಳು ಅಂದ್ರೆ ಮಾರ್ಚ್ ವೇಳೆಗೆ ನಿಜವಾಗುವ ನಿರೀಕ್ಷೆ ಇದೆ.












Click it and Unblock the Notifications