Yuva Rajkumar: ಶ್ರೀದೇವಿ ಬೈರಪ್ಪಗೆ ಅನೈತಿಕ ಸಂಬಂಧ ಇದೆ; ಯುವ ಪರ ವಕೀಲರ ಶಾಕಿಂಗ್ ಆರೋಪಗಳೇನು
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ವಿಚ್ಛೇದನ ವಿಚಾರ ಈಗ ಬೀದಿ ರಂಪಾಟವಾಗಿದೆ. ಇಬ್ಬರೂ ಕೂಡ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದು ಶಾಕಿಂಗ್ ವಿಚಾರಗಳು ಬಹಿರಂಗವಾಗುತ್ತಿವೆ. ಯುವ ರಾಜ್‌ಕುಮಾರ್ ಪರ ವಕೀಲರು ಶ್ರೀದೇವಿ ಬೈರಪ್ಪ ಅವರಿಗೆ ಅನೈತಿಕ ಸಂಬಂಧ ಇತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜೂನ್ 6 ರಂದು ಇಬ್ಬರೂ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯುವ ರಾಜ್‌ಕುಮಾರ್ ಅರ್ಜಿ ಸಲ್ಲಿಸಿದ್ದು, ಶ್ರೀದೇವಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದು ಕಡೆ ಯುವ ಅವರಿಗೆ ಸಹನಟಿ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಆರೋಪಿಸಿದ್ದಾರೆ.

ವಿಚ್ಛೇದನ್ನಕ್ಕೆ ಅರ್ಜಿ ಸಲ್ಲಿಸಿರುವ ವಕೀಲ ಸಿರಿಲ್ ಪ್ರಸಾದ್ ಮಾತನಾಡಿದ್ದು, ಶ್ರೀದೇವಿ ಭೈರಪ್ಪ ಅವರ ವಿರುದ್ಧ ಅನೈತಿಕ ಸಂಬಂಧ, ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ.
ಶ್ರೀದೇವಿಗೆ ಬಾಯ್‌ಫ್ರೆಂಡ್ ಮೇಲೆ ಆಸಕ್ತಿ?
ಮಾಧ್ಯಮಗಳ ಕೊತೆ ಮಾತನಾಡಿದ ವಕೀಲ ಸಿರಿಲ್ ಪ್ರಸಾದ್, ಮಾನಸಿಕ ಮತ್ತು ದೈಕಿಕ ಹಲ್ಲೆ ಮೇಲೆ ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಶ್ರೀದೇವಿ ಬೇರೆ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ. ಮೊದಲು ಈ ಬಗ್ಗೆ ಲೀಗಲ್ ನೋಟಿಸ್ ಕೊಡಲಾಗಿತ್ತು ಎಂದು ಹೇಳಿದ್ದಾರೆ.
ಶ್ರೀದೇವಿ ಅವರಿಗೆ ರಾಧಯ್ಯ ಎನ್ನುವವರ ಜೊತೆ ಸಂಬಂಧ ಇತ್ತು. ಯುವ ಜೊತೆಗಿನ ಮದುವೆಗೂ ಮುನ್ನವೇ ಆಕೆಗೆ ಬೇರೆ ಸಂಬಂಧವಿತ್ತು. ಈ ಬಗ್ಗೆ ಲೀಗಲ್ ನೋಟಿಸ್ ಕೊಟ್ಟಿದ್ದು, ಅವರು ಉತ್ತರ ನೀಡಿಲ್ಲ. ಈಗ ಯುವ ಸಿನಿಮಾದ ಫೋಟೊ ಬಳಸಿ, ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಹಣಕಾಸಿನ ವಿಚಾರದಲ್ಲೂ ಮೋಸ
ರಾಜ್‌ಕುಮಾರ್ ಅಕಾಡೆಮಿಯಲ್ಲಿ ಶ್ರೀದೇವಿ ಪಾಲುದಾರರಾಗಿದ್ದರು. ಅಕಾಡೆಮಿಗೆ ಸೇರಿದ 3 ಕೋಟಿ ರೂಪಾಯಿ ಹಣ ಅವರ ಖಾತೆಗೆ ಹೋಗಿದೆ. ಯುವ ಕುಟುಂಬದ ಹೆಸರನ್ನು ಕೆಟ್ಟದಾಗಿ ಬಳಸಿಕೊಂಡಿದ್ದಾರೆ. ಅಕಾಡೆಮಿ ಹಣದಲ್ಲಿ ಮೈಸೂರಿನಲ್ಲಿ 20 ಸೈಟ್, ಬೆಂಗಳೂರಿನಲ್ಲಿ ಫ್ಲಾಟ್ ಕೂಡ ಖರೀದಿ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಬಳಿ ಎಲ್ಲದಕ್ಕೂ ಸಾಕ್ಷಿ ಇದೆ, ಇಮೇಲ್‌ಗಳು, ಮೆಸೇಜ್‌ಗಳು ನಮ್ಮ ಬಳಿ ಇವೆ. ಶ್ರಿದೇವಿ ಸ್ನೇಹಿತೆಯೇ ಆಕೆಗೆ ಯುವ ಬಾಳು ಹಾಳು ಮಾಡಬೇಡ ಎಂದು ಕಳಿಸಿರುವ ಮೆಸೇಜ್‌ಗಳು ಇವೆ ಎಂದರು.
ಬಾಯ್‌ಫ್ರೆಂಡ್‌ನಿಂದ ಮಗು ಪಡೆಯುತ್ತೇನೆ!
ರಾಜ್ ಕುಮಾರ್ ಅಕಾಡೆಮಿ ಬಿಟ್ಟು ಹೋಗುವಾಗ 'ನಿನ್ನ ಜೊತೆ ಜೀವಿಸುವ ಮನಸ್ಸಿಲ್ಲ' ಎಂದು ಹೇಳಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಇರಲು ಇಷ್ಟ ಇಲ್ಲ, ಯುಎಸ್‌ಗೆ ಬಾ ಎಂದು ಯುವರಾಜ್‌ಗೆ ಬಲವಂತ ಮಾಡಿದ್ದರು. 4 ರಿಂದ 4.5 ಕೋಟಿ ರೂಪಾಯಿ ಹಣ ತೆಗೆದುಕೊಂಡು ಹೋಗಿದ್ದಾರೆ. ಯುವ ಕುಟುಂಬದ ಹೆಸರಿನಲ್ಲಿ ಸಾಲ ಮಾಡಿ ಅನ್ಯಾಯ ಮಾಡಿದ್ದಾರೆ ಎಂದರು.
ರಾಧಯ್ಯ ಎನ್ನುವ ವ್ಯಕ್ತಿ ಜೊತೆ ಶ್ರೀದೇವಿ ಅಕ್ರಮ ಸಂಬಂಧ ಹೊಂದಿದ್ದರು. ಮದುವೆಯಾದ ಮೇಲೂ ಇಬ್ಬರು ಸಂಬಂಧ ಮುಂದುವರೆಸಿದ್ದರು. ರಾಧಯ್ಯ ಎನ್ನುವವರಿಗೆ ಇತ್ತೀಚೆಗೆ ಮದುವೆಯಾಗಿದೆ, ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ರಾಧಯ್ಯ ಶ್ರೀದೇವಿಯನ್ನು ಭೇಟಿಯಾಗುತ್ತಿದ್ದರು ಎಂದು ಹೇಳಿದ್ದಾರೆ.
ಯುವ ಅಮೆರಿಕಾಗೆ ಹೋಗಲು ಒಪ್ಪದೇ ಇದ್ದಾಗ, ರಾಧಯ್ಯ ಅವರ ಸಹಾಯದಿಂದ ಮಗು ಪಡೆಯುತ್ತೇನೆ ಎಂದು ಕೂಡ ಹೇಳಿರುವುದಾಗಿ ವಕೀಲರು ಆರೋಪಿಸಿದ್ದಾರೆ.












Click it and Unblock the Notifications