Get Updates
Get notified of breaking news, exclusive insights, and must-see stories!

₹40,000 ಕೊಟ್ರೆ ಮಾತ್ರ ಸಿನಿಮಾಗೆ ಪಾಸಿಟಿವ್ ರಿವ್ಯೂ ಕೊಡ್ತೇನೆಂದ ಯೂಟ್ಯೂಬರ್ ಗತಿ ಏನಾಯ್ತು ಗೊತ್ತಾ?

ಇದೀಗ ಸಿನಿರಂಗದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಹೆಚ್ಚಾಗುತ್ತಲಿದೆ. ಇದನ್ನೆಲ್ಲ ದಾಟಿಕೊಂಡು ಶ್ರಮಪಟ್ಟು ಮೇಲೆ ಬರುತ್ತಾರೆಂದರೆ ಸಾಕು ಅವರನ್ನು ತುಳಿಲಿಕ್ಕಾಗಿಯೇ ಕೆಲವೊಂದಿಷ್ಟು ಮಂದಿ ಕಾಯುತ್ತಿರುತ್ತಾರೆ. ಆದರೆ, ಕೊನೆಗೆ 'ಮಾಡಿದಷ್ಟು ನೀಡು ಭಿಕ್ಷೆ' ಎಂಬ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಹೇಳಿರುವಂತೆ ಕೇಡು ಬಯಸಿದವರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳಿವೆ. ಅಂತಹದ್ದೇ ಒಂದು ಘಟನೆ ಇದೀಗ ನಡೆದಿದೆ.

ಎಲ್ಲಾ ಕ್ಷೇತ್ರಗಳಂತೆ ಸಿನಿ ರಂಗದಲ್ಲೂ ಸ್ಪರ್ಧೆ ಹೆಚ್ಚಾಗುತ್ತಲಿದೆ. ಒಂದು ಸಿನಿಮಾ ಮಾಡಬೇಕಂದ್ರೆ ಸುಲಭದ ಮಾತಲ್ಲ. ಇಂತಹದ್ದರ ನಡುವೆ ಕಾಲೆಳೆಯುವವರು ಇರುತ್ತಾರೆ. ಇದನ್ನೆಲ್ಲಾ ಮೀರಿ ಹಾಕಿದ ಹಣವನ್ನು ವಾಪಸ್‌ ತೆಗೆಯಬೇಕಾಗುತ್ತದೆ. ಇಲ್ಲದಿದ್ದರೆ ನಷ್ಟದಿಂದ ಮನೆ-ಮಠ ಮಾರಿಕೊಳ್ಳುವಂತಹ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಸಿನಿಮಾ ಚಿತ್ರಿಕರಣವನ್ನು ವರ್ಷಾನುಗಟ್ಟಲೇ ಶ್ರಮವಹಿಸಿ ಮಾಡುತ್ತಾರೆ.

YouTuber Poola Chokka Naveen Arrested for Alleged Extortion Over Negative Movie Review

ಮೊದಲೆಲ್ಲ ಸಿನಿಮಾ ರಿವ್ಯೂ ಸಿಗಬೇಕೆಂದ್ರೆ ತುಂಬಾ ಕಷ್ಟಪಡಬೇಕಾಗಿತ್ತು. ಆದರೆ, ಈಗ ಹಾಗಲ್ಲ, ಮಾರ್ನಿಂಗ್ ಶೋ ಮುಗಿದ ಬಳಿಕವೇ ರಿವ್ಯೂ ಸಿಕ್ಕುಬಿಡುತ್ತದೆ. ಬಳಿಕ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್, ನೆಗೆಟಿವ್ ಕಾಮೆಂಟ್‌ಗಳು ಹರಡಲು ಆರಂಭವಾಗುತ್ತವೆ. ಇದೇ ರೀತಿ ಪ್ರೇಕ್ಷಕ ಪ್ರಭುಗಳಿಗೆ ಇಷ್ಟ ಆದರೂ ಸಹ ಸಿನಿಮಾವೊಂದರ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟ ಯೂಟ್ಯೂಬರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ ವಾರವಷ್ಟೇ ವರ್ಜಿನ್ ಬಾಯ್ಸ್ ಎಂಬ ತೆಲುಗು ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾ ಬಗ್ಗೆ ಪುಲಾ ಚೊಕ್ಕಾ ನವೀನ್ ಎಂಬ ತೆಲುಗು ಯೂಟ್ಯೂಬರ್ ನೆಗೆಟಿವ್ ರಿವ್ಯೂ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂಟ್ಯೂಬ್‌ನಲ್ಲಿ ಸಿನಿಮಾಗಳ ಬಗ್ಗೆ ತಮ್ಮ ವಿಮರ್ಶೆಯಿಂದ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದರು. ಆದರೆ, ಇದೀಗ ಆತ ಹೈದರಾಬಾದ್ ಪೊಲೀಸರ ಅತಿಥಿತಿಯಾಗಿದ್ದಾನೆ.

ತಮ್ಮ ಸಿನಿಮಾ ಬಗ್ಗೆ ಬೇಕು ಅಂತಾನೇ ನವೀನ್ ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದು, ಈ ಹಿನ್ನೆಲೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳಿಂದ ಉತ್ತಮ ರೆಸ್ಪಾನ್ಸ್ ಏನೋ ಇದೆ. ಆದರೆ, ಯೂಟ್ಯೂಬರ್ ನವೀನ್ ಮಾತ್ರ ನೆಗೆಟಿವ್‌ ರಿವ್ಯೂ ಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಗೀತಾನಂದ್, ಮಿಶ್ರ ಶರ್ಮಾ, ಶ್ರೀಹಾನ್ ಚಿತ್ರದ ತಾರಾಗಣದಲ್ಲಿ ಇದ್ದಾರೆ. ದಯಾನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಾಜ್‌ ಗುರು ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ರಾಜಾ ದಾರಪುನೇನಿ ಎಂಬುವವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಸಂತಸ ವ್ಯಕ್ತಪಡಿಸಿತ್ತು.

ಈ ವೇಳೆ ನಿರ್ಮಾಪಕರು ತಮ್ಮ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. "ನಾನು ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ದೇನೆ. ಪ್ರೇಕ್ಷಕ ಪ್ರಭುಗಳಿಗೆ ಸಿನಿಮಾ ಎಷ್ಟು ಇಷ್ಟ ಆಗಿದೆ ಎನ್ನುವುದು ನಮಗೆ ಗೊತ್ತಿದೆ. ಆದರೆ, ಪೂಲ ಚೊಕ್ಕ ನವೀನ್ ರೀತಿಯ ಕೆಲ ವಿಮರ್ಶಕರು ನಮ್ಮ ಬಳಿ ಹಣ ಕೇಳಿದ್ದರು. ಹಣ ಕೊಡದಿದ್ದಕ್ಕೆ ಇದನ್ನೇ ಗುರಿಯಾಗಿಸಿಕೊಂಡು ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ," ಎಂದು ಆರೋಪ ಮಾಡಿದರು.

"ಅವರು ನೆಗೆಟಿಬ್‌ ರಿವ್ಯೂ ಕೊಡುವ ಮೂಲಕ ನಮ್ಮ ಸಿನಿಮಾಗೆ ಹಿನ್ನಡೆ ಆಗುವಂತೆ ಮಾಡಿದ್ದಾರೆ. ಆತನ ಜೊತೆ ಮತ್ತೆ ಕೆಲ ಯೂಟ್ಯೂಬರ್‌ಗಳು ಸಿನಿಮಾ ಬಿಡುಗಡೆಗೂ ಮುನ್ನ ನೆಗೆಟಿವ್ ರಿವ್ಯೂ ಕೊಟ್ಟಿದ್ದರು. ಈಗಾಗಲೇ ಅವರ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿದ್ದೇವೆ. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ," ಎಂದು ಎಂದಿದ್ದರು ಅಂತಾ ಹೇಳಿದರು.

ಅದರಂತೆಯೇ ಇದೀಗ ರಾಜಾ ದಾರಪುನೇನಿ ನೀಡಿದ ದೂರು ಆಧರಿಸಿ ಯೂಟ್ಯೂಬರ್ ಪೂಲ ಚೊಕ್ಕ ನವೀನ್ ಬಂಧನ ಆಗಿದೆ ಎಂದು ವರದಿ ಆಗಿದೆ. 4O,OOO ರೂಪಾಯಿ ಕೊಟ್ರೆ ಪಾಸಿಟಿವ್ ರಿವ್ಯೂ ಕೊಡುತ್ತೇನೆ, ಇಲ್ಲದಿದ್ದರೆ ನೆಗೆಟಿವ್ ಕೊಡುತ್ತೇನೆ ಅಂತಾ ನವೀನ್ ಹೇಳಿದ್ದ ಎನ್ನುವ ಆರೋಪ ಕೇಳಿಬಂದಿದೆ. ಫಿಲ್ಮ್ ನಗರ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಬಿಟ್ಟಿವೆ. ಅಂತಹವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೂ, ಇದೀಗ ದುಡ್ಡು ಕೊಟ್ಟಿಲ್ಲ ಅಂತಾ ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ ಎಂದು ದೂರು ನೀಡಿದ ಆಧಾರದ ಮೇಲೆ ಯೂಟ್ಯೂಬರ್‌ನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+