Yash Toxic: ಟಾಕ್ಸಿಕ್ ಬಗ್ಗೆ ಯಶ್ ತಾಯಿ ಪುಷ್ಪಾ ಹೇಳಿದ್ದೇನು, ನೆಗೆಟಿವ್ ಪ್ರಚಾರಕ್ಕೆ ಖಡಕ್ ಪ್ರತಿಕ್ರಿಯೆ
Yash Toxic: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಹಾಗೂ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಗ್ಗೆ ಯಶ್ ಅವರ ತಾಯಿ, ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಸಿನಿಮಾವನ್ನು ಶೇ 95 ಜನ ಮೆಚ್ಚಿಕೊಂಡಿದ್ದಾರೆ. ಇನ್ನೂ ಶೇ5ರಷ್ಟು ಜನ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಯಶ್ ಅವರನ್ನು ಬೇರೆ ರೀತಿ ನೋಡಬೇಕು ಎಂದುಕೊಂಡಿರುವವರು ಸಂಕೋಚದಲ್ಲೂ ಹೇಳುತ್ತಾರೆ. ಇನ್ನೂ ಕೆಲವರು ಉದ್ದೇಶಪೂರ್ವಕವಾಗಿ ಹೇಳುತ್ತಾರೆ ಎಂದೂ ಪುಷ್ಪಾ ಅವರು ಹೇಳಿದ್ದಾರೆ. Boss tvಗೆ ನೀಡಿದ ಸಂದರ್ಶನದಲ್ಲಿ ಪುಷ್ಪ ಅವರು ಮಾತನಾಡಿದ್ದಾರೆ.
ಯಶ್ ರಾಜಹುಲಿಯಲ್ಲಿ ಒಂದು ಡೈಲಾಗ್ ಹೇಳಿದ್ದಾನಲ್ಲ ಆ ತರ ಕಾಲು ಎಳೆಯುವವರು ಯಾವಾಗಿದ್ದರೂ ಕಾಲೆಳೆಯುತ್ತಾರೆ. ಅಂತಿಮವಾಗಿ ಜನರಿಗೆ ಸಿನಿಮಾ ಇಷ್ಟವಾಗಬೇಕು. ಆದರೆ ಕೆಲವರು ನೆಗೆಟಿವ್ ಮಾಡುತ್ತಿದ್ದಾರೆ. ಎಲ್ಲ ಸಮಯದಲ್ಲೂ ಯಶ್‌ಗೆ ಕೆಲವರು ನೆಗೆಟಿವ್ ಮಾಡಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ನೆಗೆಟಿವ್ ಮಾಡಿಲ್ಲ ಅಂತ ಇಲ್ಲ ಅಂತಲೂ ಪುಷ್ಪಾ ಅವರು ಹೇಳಿದ್ದಾರೆ.

ಏಣಿ ಹತ್ತುವಾಗ ಕೆಲವರು ಬೀಳಿಸುತ್ತಾರೆ. ಹತ್ತಿ ಹೋಗಿ ಮೇಲೆ ನಿಂತ ಮೇಲೆ ಶಭಾಸ್ ಎನ್ನುತ್ತಾರೆ. ಇದೆಲ್ಲವನ್ನು ದಾಟಿಕೊಂಡೇ ಯಶ್ ಬಂದಿದ್ದಾನೆ. ಇದೆಲ್ಲವು ಯಶ್‌ಗೆ ಲೆಕ್ಕಕ್ಕೆ ಬರಲ್ಲ ಬಿಡಿ. ಇದೆಲ್ಲವನ್ನು ದಾಟಿಕೊಂಡು ಹೋಗಿದ್ದಾನೆ. ಇನ್ನು ಬೇಕು ಎಂದರೆ ಕನ್ನಡಿಗರು ಉಳಿಸಿಕೊಳ್ಳಬೇಕು. 500 - 600 ಕೋಟಿ ಹಾಕಿ ನಿರ್ಮಾಪಕರು ಬಂದು ಸಿನಿಮಾ ಮಾಡಿದ ಮೇಲೆಯೂ ಜನ ಹಿಂಗ್ ಆಡಿಬಿಟ್ಟರೆ, ಯಾರು ಸಿನಿಮಾ ಮಾಡುತ್ತಾರೆ ಅಂತ ಯಶ್ ಅವರ ತಾಯಿ ಪ್ರಶ್ನೆ ಮಾಡಿದ್ದಾರೆ. ಕೆಲವರು ಎಲ್ಲರನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ ಎಂದು ಯಶ್ ಅವರ ತಾಯಿ ಪುಷ್ಪಾ ಅವರು ಹೇಳಿದ್ದಾರೆ.
ಇನ್ನೊಂದು ವಾರದ ನಂತರ ಜನರ ಅಭಿಪ್ರಾಯ ಸಂಪೂರ್ಣವಾಗಿ ತಿಳಿಯಲಿದೆ. ಯಶ್ ಅವರನ್ನು ಫ್ಯಾಮಿಲಿ ಮ್ಯಾನ್ ಅಂತ ಜನ ನೋಡುತ್ತಿದ್ದರು. ಯಶ್ ಅವರನ್ನು ನೋಡುವ ವಿಧಾನ ಬೇರೆ ಇತ್ತು. ಕಳಪೆ ಸಿನಿಮಾ ಮಾಡಿದ್ದಾರೆ ಎಂದು ಯಾರೂ ಹೇಳಿಲ್ಲ. ಗಾಂಧಿನಗರದಲ್ಲಿ ಹಳೆ ಹುಲಿಗಳಿಗೋಸ್ಕರ ಕೆಲವರು ಈ ರೀತಿ ಯಶ್ ಅವರ ಟಾಕ್ಸಿಕ್ ಸಿನಿಮಾದ ಬಗ್ಗೆ ನೆಗೆಟಿವ್ ಮಾಡುತ್ತಿದ್ದಾರೆ ಅಂತಲೂ ಎಂದಿದ್ದಾರೆ. ನೆಗೆಟಿವ್ ಮಾಡುವವರು ಎಷ್ಟು ದಿನಗಳ ಕಾಲ ನೆಗೆಟಿವ್ ಮಾಡಲು ಸಾಧ್ಯ. ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಟ್ಟದಕ್ಕೆ ಕಿವಿ ಜಾಸ್ತಿ ಅಂತಲೂ ಅವರು ಹೇಳಿದ್ದಾರೆ. ಇದೆಲ್ಲವೂ ಅವನ ಬಳಿ ನಡೆಯಲ್ಲ ಅಂತಲೂ ಪುಷ್ಪಾ ಅವರು ಹೇಳಿದ್ದಾರೆ.


Click it and Unblock the Notifications
