Toxic Teaser: ಹಿಂಸೆ-ಕಾಮಗಳ ಮೇಲೋಗರ, ಯಶ್ ಟಾಕ್ಸಿಕ್ ಟೀಸರ್‌ನಲ್ಲಿ ಬಾಂಬು-ಬಂದೂಕಿನದ್ದೇ ಆಟ
Yash Toxic Teaser: ಕನ್ನಡ ಚಿತ್ರರಂಗದ ಸ್ಟಾರ್ ನಟ ಯಶ್ ಅವರು ಇಂದು (ಜನವರಿ 8) ಹುಟ್ಟುಹಬ್ಬ ಸಂಭ್ರದಲ್ಲಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇಂದೇ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ಎಲ್ಲಡೆ ಸದ್ದು ಮಾಡುತ್ತಿದೆ. ಹಾಗಾದ್ರೆ ವಿಶೇಷತೆ ಏನಿದೆ ಎಂದು ಇಲ್ಲಿ ತಿಳಿಯಿರಿ
ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಪ್ರಯುಕ್ತ ಚಿತ್ರತಂಡ ಅಭಿಮಾನಿಗಳು ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಟೀಸರ್ ಬಿಡುಗಡೆ ಮಾಡಿದೆ. ಇದು ಇದೀಗ ಸಿನಿಮಾ ಹೇಗಿರಬಹುದು ಎಂಬ ಕುತೂಹಲವನ್ನು ಹುಟ್ಟುಹಾಕಿದೆ. ಗೀತು ಮೋಹನ್ದಾಸ್ ನಿರ್ದೇಶನ ಮಾಡಿರುವ ಈ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದೆ.

ಇತ್ತೀಚೆಗಷ್ಟೇ 'ಟಾಕ್ಸಿಕ್' ಚಿತ್ರತಂಡ ಇದರಲ್ಲಿನ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತು. ನಂತರ ಸಿನಿಮಾದಲ್ಲಿ ನಟನೆ ಮಾಡಿರುವ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ನಟಿಯರ ಪೋಸ್ಟರ್ ಹಾಗೂ ಅವರ ಪಾತ್ರಗಳ ಬಗ್ಗೆ ರಿವೀಲ್ ಮಾಡಿತ್ತು. ಇದೀಗ ಟೀಸರ್ ಬಿಡುಗಡೆ ಮಾಡಿ ಸಿಸಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
RAYA
— Yash (@TheNameIsYash) January 8, 2026
Toxic : A Fairy Tale for Grown-Ups in cinemas worldwide on 19-03-2026https://t.co/VoJTFQCoH8#Nayanthara@humasqureshi @advani_kiara @rukminitweets #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere #SandeepSadashiva…
ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಟೈಟಲ್ ಟೀಸರ್ ಬಿಡುಗಡೆ ಆಗಿದ್ದು, ಅದರಲ್ಲಿ ಯಶ್ ಗ್ಯಾಂಗ್ ಸ್ಟರ್ ರೀತಿಯಲ್ಲಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟ ಯಶ್ ಅವರ ಹೊಸ ಸಿನಿಮಾ 'ಟ್ಯಾಕ್ಸಿಕ್' ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ರಿಲೀಸ್ ಆದ ಟ್ಯಾಕ್ಸಿಕ್ ಚಿತ್ರದ ಟೀಸರ್ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಟೀಸರ್ ವಿಶೇಷತೆ: 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಹಾಲಿವುಡ್ ಶೈಲಿಯ ಮೇಕಿಂಗ್ ಕಂಡುಬಂದಿದೆ. ಯಶ್ ಇಲ್ಲಿ ಬೋಲ್ಡ್ ಆ್ಯಂಡ್ ಮಾಸ್ ಲುಕ್‌ನಲ್ಲಿ ಎಂಟ್ರಿಕೊಟ್ಟಿರುವುದು ಕಂಡುಬಂದಿದೆ. 2 ನಿಮಿಷ 51 ಸೆಕೆಂಡುಗಳ ಟೀಸರ್‌ನಲ್ಲಿ ಯಶ್ ಒಂದೇ ಒಂದು ಡೈಲಾಗ್ ಹೊಡೆದಿದ್ದು. ಅದು "ಡ್ಯಾಡ್ ಈಸ್ ಹೋಮ್" ಎಂಬ ಡೈಲಾಗ್ ಆಗಿದೆ. ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಬಂದೂಕು ಹಿಡಿದು ಈ ಡೈಲಾಗ್ ಹೊಡೆದು ಗಮನ ಸೆಳೆದಿದ್ದಾರೆ.
ಯಶ್ ಪಾತ್ರದ ಪರಿಚಯ: ಇದರಲ್ಲಿ ಯಶ್ ಭುಜದ ಮೇಲೆ ಡಿಫರೆಂಟ್ ರೈಫಲ್ ಹಿಡಿದುಕೊಂಡು ಬ್ಲ್ಯಾಕ್ ಅಂಡರ್ ಬ್ಲ್ಯಾಕ್ ಲುಕ್‌ನಲ್ಲಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಅವರು 'ರಾಯ' ಪಾತ್ರದದಲ್ಲಿ ಕಾಣಿಸಿಕೊಂಡಿದ್ದು, ಗಮನ ಸೆಳದಿದ್ದಾರೆ. ಇನ್ನೂ ಇಂದು ಬಿಡುಗಡೆಯಾದ ಟೀಸರ್‌ನಲ್ಲಿ ಹಿಂಸೆ-ಕಾಮಗಳ ಮೇಲೋಗರ, ಬಾಂಬು-ಬಂದೂಕಿನ ಸದ್ದನ್ನು ಕೇಳಬಹುದು ಹಾಗೂ ನೋಡಬಹುದು.
ಇನ್ನೂ ಈಗಾಗಲೇ ಹಿಂದಿಯಲ್ಲಿ "ಧುರಂಧರ್' ಸಿನಿಮಾ ಬಿಡುಗಡೆಯಾಗು ಸೂಪರ್ ಹಿಟ್ ಆಗಿದೆ. ಇನ್ನೂ 'ಧುರಂದರ್ 2' ವಿರುದ್ಧ 'ಟಾಕ್ಸಿಕ್' ತೆರೆ ಕಾಣುತ್ತಿದೆ. ಈ ಹಿನ್ನೆಲೆ ಈ ಎರಡು ಸಿನಿಮಾಗಳ ನಡುವೆ ದೊಡ್ಡ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಯಶ್ ನಡೆದುಬಂದ ಹಾದಿ: ಕನ್ನಡದ ಸ್ಟಾರ್ ನಟ ಯಶ್ ಅವರು ಹುಟ್ಟಿದ್ದು ಜನವರಿ 8, 1986ರಲ್ಲಿ. ಹಾಸನ ಅವರ ಹುಟ್ಟೂರಾಗಿದೆ. ಚಲನಚಿತ್ರಗಳಲ್ಲಿ ಅಭಿನಯಿಸುವ ಮೊದಲು ಅವರು ಧಾರವಾಹಿಗಳಲ್ಲಿ ನಟಿಸಿದ್ದರು. 2007ರಲ್ಲಿ ಜಂಭದ ಹುಡುಗಿ ಸಿನಿಮಾ ಮೂಲಕ ನಟ ಯಶ್ ಸಿನಿ ಜಗತ್ತಿಗೆ ಕಾಲಿಟ್ಟರು. ನಂತರ ಮೊಗ್ಗಿನ ಮನಸ್ಸು. ಗೂಗ್ಲಿ, ಕಿರಾತಕ, ಮಾಸ್ಟರ್ ಪೀಸ್, ರಾಜಾಹುಲಿ,ರಾಮಾಚಾರಿ, ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದರು. ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗವನ್ನು ಇಡೀ ಭಾರತ ತಿರುಗಿ ನೋಡುವಂತೆ ಮಾಡಿದರು.
ಯಶ್ ಮೊದಲ ಹೆಸರೇನು?: ಮಾಹಿತಿ ಪ್ರಕಾರ ನವೀನ್ ಕುಮಾರ್ ಅವರಿಗೆ ಯ ಅಕ್ಷರದಿಂದ ಬರುವ ಹೆಸರನ್ನು ಇಡಲು ಸೂಚಿಸಲಾಗಿತ್ತು. ಇದೇ ಕಾರಣದಿಂದ ನವೀನ್‌ಗೆ ಯಶ್ವಂತ್ ಎಂದು ಹೆಸರು ಇಡಲಾಯಿತು. ಸಿನಿಮಾರಂಗಕ್ಕೆ ಕಾಲಿಡುವಾಗ ಅವರಿಗೆ ಯಶ್ ಎಂಬ ಹೆಸರಿನೊಂದಿಗೆ ಪರಿಚಯ ಆಗುವಂತೆ ಹಲವರು ಸೂಚನೆ ನೀಡಿದ್ದರು. ಈಗ ಯಶ್ ರಾಕಿಂಗ್ ಸ್ಟಾರ್ ಯಶ್ ಆಗಿ ಇಡೀ ಜಗತ್ತಿಗೆ ಪರಿಚಯ ಆಗಿದ್ದಾರೆ. ಈ ಮೂಲಕ ಅವರು ಇಡೀ ಭಾರತವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಸದ್ದು ಮಾಡುತ್ತಿದ್ದಾರೆ.












Click it and Unblock the Notifications