Yash Toxic Teaser: ಯಶ್‌ Daddy's Home ಡೈಲಾಗ್‌ಗೆ ಫ್ಯಾನ್ಸ್‌ ಫಿದಾ

Yash Toxic Teaser: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬಕ್ಕೆ ಟಾಕ್ಸಿಕ್ ಚಿತ್ರತಂಡವು ಭರ್ಜರಿ ಗಿಫ್ಟ್‌ ನೀಡಿದೆ. ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಕಮೆಂಟ್‌ಗಳ ಸುರಿಮಳೆ ಆಗಿದೆ. ಕನ್ನಡಿಗರು ಸೇರಿದಂತೆ ದೇಶದ ವಿವಿಧ ಭಾಷೆಗಳ ಅಭಿಮಾನಿಗಳು ಈ ಟೀಸರ್ ನೋಡಿ ಸಂಭ್ರಮಿಸಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 3 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.

ಟಾಕ್ಸಿಕ್ ಕನ್ನಡ ಸಿನಿಮಾ ಎಂದು ಅನಿಸುತ್ತಲ್ಲೇ ಇಲ್ಲ. ಇದು ಹಾಲಿವುಡ್ ಸಿನಿಮಾ ರೀತಿಯಲ್ಲಿ ಇದೆ. ಈ ಟೀಸರ್‌ಗೆ ರಿಯಾಕ್ಟ್‌ ಮಾಡಿರುವ ಹಲವರು ವರ್ಷಗಳ ನಂತರ ಯಶ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ. ಯಶ್ ಅಭಿಮಾನಿಗಳಿಗೆ ಈ ಸಿನಿಮಾ ನಿರಾಸೆ ಮೂಡಿಸಿಲ್ಲ ಎನ್ನುವ ಭರವಸೆ ಇದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಟಾಕ್ಸಿಕ್‌ಗೆ ವೋಟ್ - ಎಲ್ಲಾ ದಾಖಲೆಗಳು ಕ್ಲೋಸ್. ರೆಕಾರ್ಡ್ ಬ್ರೇಕರ್ ಎನ್ನುವಂತಹ ಕಮೆಂಟ್‌ಗಳನ್ನು ಅವರ ಅಭಿಮಾನಿಗಳು ಮಾಡಿದ್ದಾರೆ.

Yash Toxic Teaser Daddy s Home Dialogue Sends Fans into Frenzy

ಇನ್ನು ಟಾಕ್ಸಿಕ್ ಟೀಸರ್‌ನಲ್ಲಿ 2:31 ನಿಮಿಷದಲ್ಲಿ ಬರುವ Daddy's Home ಎನ್ನುವ ಯಶ್ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಕಿ , ರಾಯ,

ಮುಂದೆ ರಾವಣ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಜಗತ್ತೇ ನನ್ನದು ಎನ್ನುವ ಡೈಲಾಗ್ ಅನ್ನು ಯಶ್ ಅವರು ತುಂಬಾ ಗಂಭೀರವಾಗಿ ಪರಿಗಣಿಸಿರುವಂತೆ ಇದೆ. ಟಾಕ್ಸಿಕ್ ಟೀಸರ್ ನೋಡಿದ ಮೇಲೆ ಈ ಅನುಭವ ಆಗುತ್ತಿದೆ. ಸಿಇಒ ಆಫ್ ಬಾಕ್ಸ್‌ ಆಫೀಸ್ ಎನ್ನುವ ಅಭಿಮಾನದ ಕಮೆಂಟ್ ಸುರಿಮಳೆ ಈ ಟೀಸರ್‌ಗೆ ಬಂದಿದೆ.

ಶ್ರಾವಣ ಕಳುದ್ರೆ ನಮ್ ಹುಡುಗ ಟಾಪ್‌ಅಲ್ಲಿ ಬರ್ತಾನೆ

ಇನ್ನು ನಟ ಯಶ್ ಅವರು ನಟಿಸಿದ್ದ ಕಿರಾತಕ ಸಿನಿಮಾದ "ಶ್ರಾವಣ ಕಳುದ್ರೆ ನಮ್ ಹುಡುಗ ಟಾಪ್‌ಅಲ್ಲಿ ಬರ್ತಾನೆ" ಎನ್ನುವ ಡೈಲಾಗ್‌ನೆನಪಿಸಿಕೊಂಡಿದ್ದಾರೆ. ಯಶ್ ಅವರು ಟಾಪ್‌ನಲ್ಲಿ ಬರ್ತಿದ್ದಾರೆ ಎಂದು ಸಂಭ್ರಮಿಸಿದ್ದಾರೆ. ಬರೋವರಿಗೂ ಮಾತ್ರ ಬೇರೆಯವರ ಹವಾ.. ಬಂದ ಮೇಲೆ ರಾಕಿ ದೇ ಹವಾ ಎನ್ನುವ ಡೈಲಾಗ್ ಅನ್ನೂ ಕಮೆಂಟ್ ಮಾಡಿದ್ದಾರೆ. ಎಲ್ಲಾ ಡಿ ಬಾಸ್ ಅಭಿಮಾನಿ ಕಡೆಯಿಂದ ಟಾಕ್ಸಿಕ್ ಚಿತ್ರಕ್ಕೆ ಶುಭವಾಗಲಿ❤🎉, ಕಿಚ್ಚಸುದೀಪ್ ಅಭಿಮಾನಿಗಳ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಯಶ್ ಸರ್ ಎನ್ನುವ ಕಮೆಂಟ್ ಸಹ ಮಾಡಲಾಗಿದೆ. ಹೆಮ್ಮೆಯ ಕನ್ನಡಿಗ 💛♥️ ಇಡೀ ಭಾರತೀಯ ಸಿನಿಮಾ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಅಭಿಮಾನಿಗಳು ಮಾಡಿದ್ದಾರೆ.

ಯಶ್ ತುಂಟನಾಗಿ ಬದಲಾಗಿದ್ದಾರೆ!

ಇನ್ನು ಈ ಟೀಸರ್‌ನ ಕಾರ್‌ಒಳಗಿನ ದೃಶ್ಯಕ್ಕೆ ಹಲವು ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಯಶ್ ನಟಿಸಿದ್ದಾರೆ ಎನ್ನುವ ಭರವಸೆಯ ಮೇಲೆ ಕುಟುಂಬದೊಂದಿಗೆ ಟೀಸರ್ ನೋಡಲು ಪ್ರಾರಂಭಿಸಿದೆ ಎಂದು, ಯಶ್ ದಿನದಿಂದ ದಿನಕ್ಕೆ ತುಂಟನಾಗಿ ಬದಲಾಗುತ್ತಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಅಭಿಮಾನಿಗಳು ಮಾಡಿದ್ದಾರೆ. ಕೇಳಿದ್ವಪ್ಪಾ ಚನ್ನಾಗ್ ಇರುತ್ತೆ ಅಂತ. ಆದರೆ ಹಿಂಗೆಲ್ಲ ಇರುತ್ತೆ ಅಂತ ಗೊತ್ತಿರ್ಲಿಲ್ಲ.. ಆದರೂ ಬಾಂಬ್ ತರ ರೆಡಿ ಮಾಡವ್ರೆ ಟೀಸರ್‌ ಅಂತ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಯಶ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದ್ದು ಸಂಭ್ರಮದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+