Toxic Yash: ಗರ್ಭಿಣಿ ಕಿಯಾರಾಗಾಗಿ ಮಿಡಿಯಿತು ರಾಕಿಭಾಯ್ ಮನಸ್ಸು... ಯಶ್ ಮಾಡಿದ್ದೇನು?

ಬೆಂಗಳೂರು, ಜೂನ್ 19: ಕನ್ನಡದ KGF ಸರಣಿ ಸಿನಿಮಾಗಳ ಬಳಿಕ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ನಟ ಯಶ್ (Actor Yash) ಅವರು ಏನೇ ಮಾಡಿದರೂ ದೊಡ್ಡದಾಗಿ ಮಾಡುತ್ತಾರೆ. ದೊಡ್ಡ ಆಲೋಚನೆಯೊಂದಿಗೆ ಹೆಜ್ಜೆ ಹಾಕುತ್ತಾರೆ. ಇದೀಗ ಅವರ ನಟನೆ ಮತ್ತು ಸಹ ನಿರ್ಮಾಣದ 'ಟಾಕ್ಸಿಕ್' (Toxic film) ಸಿನಿಮಾ ಸೆಟ್‌ ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್‌ ಮಾಡಲಾಗಿದೆ. ನಟಿ ಕಿಯಾರಾ ಅಡ್ವಾನಿಗಾಗಿ (Kiara Advani)ನಟ ಯಶ್ ಅವರು ಸೆಟ್ ಶಿಫ್ಟ್‌ಗಾಗಿ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಶೂಟಿಂಗ್ ವೆಚ್ಚ ಕೊಂಚ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

'ಟಾಕ್ಸಿಕ್' ಸಿನಿಮಾ ಕನ್ನಡದ್ದು ಎನ್ನುವುದಕ್ಕಿಂತ ಭಾರತೀಯ ಸಿನಿಮಾ. ಇದು ಪ್ಯಾನ್ ವರ್ಡ್‌ ಸಿನಿಮಾ ಆಗಿ ತೆರೆಗೆ ತರಲು ಎರಡು ಭಾಷೆಗಳಲ್ಲಿ ರೆಡಿಯಾಗುತ್ತಿದೆ. ಇದರಲ್ಲಿ ನಟಿ ಕಿಯಾರಾ ಹಾಗೂ ನಟಿ ನಯನತಾರಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಹಾಲಿವುಡ್ ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ಗೀತು ಮೋಹನ್‌ದಾಸ್ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆ.

Yash Moves Toxic Shoot to Mumbai for Kiara Yash Shows True Leadership

ಇದೀಗ ಈ ಸಿನಿಮಾದ ನಟಿ ಕಿಯಾರಾಗಾಗಿ ಬೆಂಗಳೂರಿನ ಸೆಟ್‌ನಲ್ಲಿ ನಡೆಯಬೇಕಿದ್ದ ಚಿತ್ರೀಕರಣವು ಮುಂಬೈಗೆ ಸ್ಥಳಾಂತರಗೊಂಡಿದೆ. ಶೂಟಿಂಗ್ ಈಗಾಗಲೇ ಬೆಂಗಳೂರು, ಗೋವಾ, ಮುಂಬೈನಲ್ಲಿ ನಡೆದಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಶೂಟಿಂಗ್ ಮುಂದುವರಿಸಲು ಕಷ್ಟವೇನು? ಎಂದು ನಿಮ್ಮ ತಲೆಗೆ ಬರಬಹುದು...ಈಗ ಸೆಟ್‌ ಶೂಟಿಂಗ್ ಅನ್ನು ರಾಕಿಭಾಯ್ ಏಕೆ ಮುಂಬೈಗೆ ಶಿಫ್ಟ್ ಮಾಡಿಸಿದರೂ ಎಂಬ ಪ್ರಶ್ನೆ ಉತ್ತರ ಇಲ್ಲಿದೆ.

ನಟಿ ಕಿಯಾರಾ ಅವರು ಪ್ರೆಗ್ನೆಂಟ್ ಎಂಬ ವಿಚಾರ ಬಹಿರಂಗವಾಗಿದೆ. ಇಂತಹ ಸಂದರ್ಭದಲ್ಲಿ ಶೂಟಿಂಗ್‌ಗಾಗಿ ಅವರು ಟ್ರಾವೆಲ್ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ನಿರ್ಮಾಪಕ ಜೊತೆ ಮಾತನಾಡಿ ಮನವಿ ಮಾಡಿರುವ ಯಶ್ ಅವರು, ಬೆಂಗಳೂರಿನ ಸೆಟ್‌ನಲ್ಲಿ ಆಗಬೇಕಿದ್ದ ಶೂಟಿಂಗ್ ಮುಂಬೈಗೆ ಸ್ಥಳಾಂತರಿಸಿದ್ದಾರೆ. ಈ ಮೂಲಕ ನಟ ಯಶ್ ಅವರು ಉದಾರತೆ ಮೆರೆದಿದ್ದಾರೆ. ನಟಿ ಕಿಯಾರಾ ಅವರಿಗೆ ಅನುಕೂಲವಾಗುವಂತೆ ಮುಂಬೈನಲ್ಲಿ ಶೂಟಿಂಗ್ ನಡೆಸಲು ಟಾಕ್ಸಿಕ್ ಚಿತ್ರತಂಡ ಸಜ್ಜಾಗಿದೆ. ಯಶ್ ಅವರ ಈ ಸಹಾಯ ಗುಣ, ದೂರದೃಷ್ಟಿ, ಒಳಿತಿನಿ ಮನಸ್ಸಿಗೆ ಅವರ ಅಭಿಮಾನಿಗಳು 'ಸಲಾಂ ರಾಕಿಭಾಯ್' ಎಂದು ಹೇಳಿದ್ದಾರೆ. ಯಶ್ ಗುಣಕ್ಕೆ ಫಿದಾ ಆಗಿದ್ದಾರೆ.

ಯಶ್ ಇದ್ಯಾವುದನ್ನು ಮರೆತಿಲ್ಲ

ಈ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರು ಸಹ ಬಂಡವಾಳ ಹಾಕಿದ್ದಾರೆ. ಮತ್ತೊಂದೆಡೆ 'ರಾಮಾಯಣ' ಸಿನಿಮಾದಲ್ಲಿ 'ರಾವಣ' ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ಯಶ್ ಅವರು ಆ ಸಿನಿಮಾಗೂ ಬಂಡವಾಳ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಬ್ಯೂಸಿಯಾಗಿರುವ ನಟ ಯಶ್ ತಾವು ಎ‍ಷ್ಟೇ ಎತ್ತರಕ್ಕೆ ಬೆಳೆದರೂ ಮಾನವೀಯ, ಸಹಾಯ ಗುಣ, ಅಭಿಮಾನಿಗಳನ್ನು, ಸಹ ಕಲಾವಿದರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದನ್ನು ಅವರು ಮರೆತಿಲ್ಲ. ನಟಿ ಕಿಯಾರ ವಿಚಾರದಲ್ಲಿ ನಟ ಯಶ್ ಅವರ ನಡೆ ಪ್ರಶಂಸೆಗೆ ಕಾರಣವಾಗಿದೆ.

ಶೂಟಿಂಗ್ ಶಿಫ್ಟ್, ವೆಚ್ಚ ಹೆಚ್ಚಳ?

ಇನ್ನೊಂದೆಡೆ ಈಗಾಗಲೇ ಬೆಂಗಳೂರಿನಲ್ಲಿ ಶೂಟಿಂಗ್ ಗಾಗಿ ಸೆಟ್ ಹಾಕಲಾಗಿತ್ತು. ಅಲ್ಲಿ ಶೂಟಿಂಗ್ ಮಾಡದೇ ಮುಂಬೈನಲ್ಲಿ ಮಾಡಿದರೆ ಸಿನಿಮಾ ವೆಚ್ಚದ ಪ್ರಮಾಣ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಯಶ್ ಅವರು ಸಹ ಈ ಸಿನಿಮಾದ ನಿರ್ಮಾಪಕರಾಗಿರುವ ಕಾರಣ ಅಷ್ಟೇನು ಸಮಸ್ಯೆ ಆಗುವುದಿಲ್ಲ ಅಂತಲೂ ಹೇಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+