ಕಾಂಪೌಂಡ್ ಕಿರಿಕ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅವರಿಗೆ ಭಾರಿ ಹಿನ್ನಡೆ! Actor Yash
ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತು ಮಾತನಾಡುವ ರೀತಿ ಮಾಡಿದ್ದು ಯಶ್ ಅವರ ಕೆಜಿಎಫ್ ಸಿನಿಮಾ. ಕನ್ನಡ ಸಿನಿಮಾ ಅಭಿಮಾನಿಗಳ ಪಾಲಿನ ರಾಕಿಂಗ್ ಸ್ಟಾರ್ ಯಶ್ ಅವರು ರಾಕಿಭಾಯ್ ಆಗಿ ಹಾಲಿವುಡ್ ಅಂಗಳದಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ. ಟಾಕ್ಸಿಕ್ ಟೀಸರ್ ನೋಡಿ ಹಾಲಿವುಡ್ ಮಂದಿ ಕೂಡ ಚಪ್ಪಾಳೆ ತಟ್ಟಿದ್ದಾರೆ. ಆದರೆ ಇಷ್ಟೆಲ್ಲಾ ಗೆಲುವು ಹಾಗೂ ಖುಷಿ ನಡುವೆ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅವರು ಕಾಂಪೌಂಡ್ ವಿಚಾರದಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಇದೇ ವಿಚಾರ ದೊಡ್ಡ ಸೌಂಡ್ ಮಾಡುತ್ತಿರುವಾಗಲೇ, ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅವರಿಗೆ ಭಾರಿ ಹಿನ್ನಡೆ ಆಗಿದೆ.
ಹೌದು, ಯಶ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು ಸಿನಿಮಾ ಇಂಡಸ್ಟ್ರಿಯ ಸ್ಟಾರ್‌ಗಳು ಕೂಡ ಯಶ್ ಅವರಿಗೆ ಅಭಿಮಾನಿಗಳೇ ಆಗಿದ್ದಾರೆ. ಆದರೆ ಯಶ್ ತಾಯಿ ಪುಷ್ಪ ಅವರು ಸೈಟ್‌ಗೆ ಹಾಕಿದ್ದ ಕಾಂಪೌಂಡ್ ವಿಚಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದು ಗಮನ ಸೆಳೆದಿತ್ತು. ಈ ಹಿಂದೆ ಕೂಡ ಇದೇ ರೀತಿ ಹಾಸನದಲ್ಲಿ ಜಮೀನು ವಿಚಾರವಾಗಿ ಕಿರಿಕ್ ಆಗಿದ್ದಾಗ ಖುದ್ದು ನಟ ಯಶ್ ಅವರೇ ಹೋಗಿದ್ದು, ಅಲ್ಲಿನ ಸಮಸ್ಯೆ ಸರಿ ಮಾಡಲು ಪ್ರಯತ್ನಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇಷ್ಟೆಲ್ಲದರ ನಡುವೆ ಮತ್ತೆ ಇದೀಗ ಹಾಸನದಲ್ಲಿ ಯಶ್ ಅವರ ತಾಯಿ ಪುಷ್ಪಮ್ಮ ಅವರು ಸೈಟ್ ವಿಚಾರದಲ್ಲಿ ಕಾನೂನು ಸಮರ ಶುರು ಮಾಡಿದ್ದರು. ಆದರೆ ಈಗ ನಟ ಯಶ್ ತಾಯಿ ಪುಷ್ಪ ಅವರಿಗೆ ಭಾರಿ ಹಿನ್ನಡೆ ಆಗಿದೆ.

ಕಾನೂನು ಹೋರಾಟದಲ್ಲಿ ಹಿನ್ನಡೆ
ರಾಕಿಭಾಯ್ ನಟ ಯಶ್ ಅವರ ತಾಯಿ ಅವರಿಗೆ ಸೇರಿದ್ದು ಎನ್ನಲಾದ ಸೈಟಿಗೆ ಕಟ್ಟಲಾಗಿದ್ದ ಕಾಂಪೌಂಡ್ ಒಡೆದು ಹಾಕಲಾಗಿತ್ತು. ಹಾಸನದಲ್ಲಿ ಯಶ್‌ರ ತಾಯಿ ಪುಷ್ಪ ಅವರಿಗೆ ಸೇರಿದ ಮನೆಗೆ ಹೊಂದಿಕೊಂಡು 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಅನ್ನ ಹಾಕಿಸಿದ್ದರು. ಇದೇ ವಿಚಾರವಾಗಿ ಕಿರಿಕ್ ಆಗಿ ಕೊನೆಗೆ ದೇವರಾಜು ಎನ್ನುವವರು ಜೆಸಿಬಿ ಬಳಸಿ ಒಡೆದು ಹಾಕಿದ್ದರು. ಈ ವಿಚಾರವಾಗಿ ನಟ ಯಶ್ ಅವರ ತಾಯಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಕೊಟ್ಟು, ಕೋರ್ಟ್‌ನಲ್ಲಿ ಕೇಸ್ ಕೂಡ ಹಾಕಿದ್ದರು. ಆದರೆ ಇದೇ ವಿಚಾರದಲ್ಲಿ ಕೋರ್ಟ್‌ನಲ್ಲಿ ಈಗ ಪುಷ್ಪ ಅವರಿಗೆ ಹಿನ್ನಡೆ ಆಗಿದೆ.
ಪುಷ್ಪ ಅವರ ಅರ್ಜಿಗೆ ಹಿನ್ನಡೆ
ಇನ್ನು ನಟ ಯಶ್ ಅವರ ತಾಯಿ ಪುಷ್ಪ ಅವರು ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ದೇವರಾಜ್ ಅವರ ವಿರುದ್ಧ ದಾವೆ ಹೂಡಿದ್ದರು. ವಿವಾದಿತ ಸೈಟ್ ಪ್ರಕರಣದಲ್ಲಿ ಈ ಹಿಂದೆ ನೀಡಿದ ಆದೇಶಕ್ಕೆ ತಡೆ ನೀಡಿ & ದೇವರಾಜುಗೆ ನೊಟೀಸ್ ನೀಡುವ ಮೊದಲು ಪ್ರತಿಬಂಧಕಾಜ್ಞೆ ಹೊರಡಿಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಈ ಅರ್ಜಿಗಳನ್ನ ನ್ಯಾಯಾಲಯ ಪುರಸ್ಕರಿಸಿಲ್ಲ, ಈ ಮೂಲಕ ಕಾಂಪೌಂಡ್ ಕಿರಿಕ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅವರಿಗೆ ಭಾರಿ ಹಿನ್ನಡೆ ಆಗಿದೆ.












Click it and Unblock the Notifications