ಹಸಿಬಿಸಿ ದೃಶ್ಯದಲ್ಲಿ ಯಶ್: ಟ್ರೆಂಡ್ ಆಯ್ತು 'ಟಾಕ್ಸಿಕ್ ಟೀಸರ್ ನೋಡಿದ ರಾಧಿಕಾ ಪಂಡಿತ್ ರಿಯಾಕ್ಷನ್'
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಹಸಿಬಿಸಿ ದೃಶ್ಯಗಳು ಅಭಿಮಾನಿಗಳಲ್ಲಿ ಮಾತ್ರವಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆ ಹುಟ್ಟು ಹಾಕಿವೆ. ಇದರ ನಡುವೆಯೇ, ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಈ ರೀತಿಯ ದೃಶ್ಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ನೆಟ್ಟಿಗರು ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅದೇ ಕಾರಣಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರ ಹಳೆಯ ವಿಡಿಯೋಗಳು ವೈರಲ್ ಆಗಿವೆ. ವಿಶೇಷವಾಗಿ ಯಶ್-ರಾಧಿಕಾ ಜೋಡಿ ಒಟ್ಟಿಗೆ ನಟಿಸಿದ್ದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದ ಕೆಲವು ದೃಶ್ಯಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಆ ಸಿನಿಮಾದಲ್ಲಿ ಯಶ್ ಅವರಿಗೆ ರಾಧಿಕಾ ಪಂಡಿತ್ ಕೋಪಗೊಂಡು ಬೈಯುವ, ತರಾಟೆಗೆ ತೆಗೆದುಕೊಳ್ಳುವ ದೃಶ್ಯಗಳನ್ನು ಈಗ 'ಟಾಕ್ಸಿಕ್' ಟೀಸರ್‌ನ ಹಸಿಬಿಸಿ ದೃಶ್ಯಗಳಿಗೆ ಹೋಲಿಸಿ ಕಾಮಿಡಿ ಟ್ರೋಲ್‌ಗಳಾಗಿ ಮಾಡಲಾಗುತ್ತಿದೆ.

"ಟಾಕ್ಸಿಕ್ ಟೀಸರ್ ನೋಡಿದ ಮೇಲೆ ರಾಧಿಕಾ ಪಂಡಿತ್ ರಿಯಾಕ್ಷನ್ ಹೀಗಿರಬಹುದು" ಎನ್ನುವ ಕ್ಯಾಪ್ಶನ್‌ಗಳೊಂದಿಗೆ ರಾಮಾಚಾರಿ ಸಿನಿಮಾದ ಡೈಲಾಗ್‌ಗಳು, ಸೀನ್ಸ್‌ಗಳನ್ನು ಎಡಿಟ್ ಮಾಡಿರುವ ರೀಲ್ಸ್ ಹಾಗೂ ಮೀಮ್ಸ್ ಹರಿದಾಡುತ್ತಿವೆ. ಕೆಲವರು ಇದನ್ನು ಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದರೆ, ಇನ್ನೂ ಕೆಲವರು ಇದು ಕೇವಲ ಮನರಂಜನೆಗಾಗಿ ಮಾಡಿರುವ ಟ್ರೋಲ್‌ಗಳಷ್ಟೇ ಎಂದು ಹೇಳುತ್ತಿದ್ದಾರೆ.
ಫ್ಯಾಮಿಲಿ ಜೊತೆ ಟಾಕ್ಸಿಕ್ ನೋಡಬಹುದಾ?
ಯಶ್ ನಟಿಸಿದ್ದ ಕಿರಾತಕ ಸಿನಿಮಾದ ದೃಶ್ಯಗಳನ್ನು ಸಹ ಟಾಕ್ಸಿಕ್ ಟೀಸರ್ ಜೊತೆಗೆ ಸೇರಿಸಿ, ಟ್ರೋಲ್ ಮಾಡಲಾಗುತ್ತಿದೆ. ಇನ್ನೂ ಕೆಲವರು ಫ್ಯಾಮಿಲಿ ಜೊತೆ ಈ ಟೀಸರ್ ನೋಡಿದ ಮೇಲೆ ನನ್ನ ಮನೆಯಿಂದ ಹೊರಗೆ ಕಳಿಸಿದ್ರು ಎಂದು ರೀಲ್ಸ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಫ್ಯಾಮಿಲಿ ಜೊತೆ ಕೂತು ಥಿಯೇಟರ್‌ನಲ್ಲಿ ನೋಡಬಹುದಾ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಟ್ರೋಲ್‌ಗಳು ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲ ಯಶ್ ಅಭಿಮಾನಿಗಳು "ಇದು ಸಿನಿಮಾ, ಪಾತ್ರ ಮತ್ತು ರಿಯಲ್ ಲೈಫ್ ಬೇರೆ" ಎಂದು ಹೇಳುತ್ತಿದ್ದರೆ, ಮತ್ತೊಬ್ಬರು "ರಾಮಾಚಾರಿ ಯಶ್-ರಾಧಿಕಾ ಜೋಡಿ ಮತ್ತೆ ತೆರೆ ಮೇಲೆ ಬರಬೇಕು" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಟಾಕ್ಸಿಕ್ ಟೀಸರ್‌ನ ಹಸಿಬಿಸಿ ದೃಶ್ಯಗಳು ಒಂದು ಕಡೆ, ರಾಮಾಚಾರಿ ಸಿನಿಮಾದ ಹಳೆಯ ಸೀನ್ಸ್ ಮತ್ತೊಂದು ಕಡೆ-ಇರಡನ್ನೂ ಹೋಲಿಸಿ ಮಾಡುತ್ತಿರುವ ಕಾಮಿಡಿ ಟ್ರೋಲ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಕೆಲವರು ಈ ಟ್ರೆಂಡ್ ಕೆಲ ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.
Radhika Pandit After watching #ToxicTeaser 😅 pic.twitter.com/gb7ZYEWcc8
— Dj (@Devilxdasa) January 8, 2026
ರಾಧಿಕಾ ನಿಜಕ್ಕೂ ಪ್ರತಿಕ್ರಿಯಿಸಿದ್ರಾ?
ಆದರೆ ನಿಜವಾಗಿ ರಾಧಿಕಾ ಪಂಡಿತ್ ಅವರು ತಮ್ಮ ಪತಿ ಯಶ್ ಅವರ ಟಾಕ್ಸಿಕ್ ಸಿನಿಮಾದಲ್ಲಿನ ಈ ಹಸಿಬಿಸಿ ದೃಶ್ಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ತಮ್ಮ ಕುಟುಂಬದ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications