Bigg Boss: ಮೊದಲನೇ ವಾರವೇ ಬಿಗ್‌ಬಾಸ್ ಮನೆಯಿಂದ ಹೊರಬಂದ ನಟಿ!
ಮೊದಲನೇ ವಾರವೇ ಬಿಗ್‌ಬಾಸ್ ಮನೆಯಿಂದ ಹಿರಿಯ ನಟಿಯೊಬ್ಬರು ಔಟ್ ಆಗಿದ್ದಾರೆ. ಕಳೆದ ದಿನ ನಡೆದ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿ ಅಂದುಕೊಂಡಿದ್ದ ನಟಿ ಹೊರಬಂದಿದ್ದಾರೆ. ಪ್ರತಿವಾರದಂತೆ ಕಿಚ್ಚನ ಜೊತೆ ವಾರದ ಕಥೆ ಶನಿವಾರ ನಡೆಯಿತು. ಈ ವೇಳೆ ಪ್ರಬಲ ಸ್ಪರ್ಧಿಯನ್ನೇ ಮನೆಯಿಂದ ಹೊರ ಕಳುಹಿಸಲಾಗಿದೆ.
ಹೌದು... ಬಿಗ್‌ಬಾಸ್ ಮನೆಯಿಂದ ಯಾರೂ ಕೂಡ ನಿರೀಕ್ಷಿಸದ ಸ್ಪರ್ಧಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ಕಡಿಮೆ ವೋಟ್ ಪಡೆದ ಕಾರಣ ಬಿಗ್‌ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಹೊರ ಬಂದಿದ್ದಾರೆ. ಈ ವಾರ ಲಾಯರ್ ಜಗದೀಶ್ ಔಟ್ ಆಗುತ್ತಾರೆ ಎಂದು ಎಲ್ಲರೂ ಕೂಡ ಭಾವಿಸಿದ್ದರು.

ಮನೆಯ ಸ್ಪರ್ಧಿಗಳು ಕೂಡ ಜಗದೀಶ್ ಅವರೇ ಮನೆಯಿಂದ ಹೊರಬರುತ್ತಾರೆ ಅಂದುಕೊಂಡಿದ್ದರು. ಅದರೆ ದೊಡ್ಮನೆಯ ಸದಸ್ಯರ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಮುನ್ನವೇ ಯಮುನಾ ಅವರು ಮನೆಯಿಂದ ಹೊರಬಂದಿದ್ದಾರೆ. ಅಂದಹಾಗೆ ಯಮುನಾ ಅವರನ್ನು ಬಿಗ್‌ಬಾಸ್ ಮನೆಯ ಗಟ್ಟಿ ಸ್ಪರ್ಧಿ ಅಂತಲೇ ಹೇಳಬಹುದು. ಎಲ್ಲರೂ ಕೂಡ ಹಾಗೇ ಭಾವಿಸಿದ್ದರು. ಆದರೆ ಯಮುನಾ ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ಬಿಗ್‌ಬಾಸ್ ಮನೆಯಿಂದ ಯಮುನಾ ನಿಜವಾಗಲೂ ಹೊರಬಂದ್ರಾ? ಅಥವಾ ಇಲ್ವಾ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಭಾನುವಾರದ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಅಲ್ಲಿವರೆಗೂ ಕಾದು ನೋಡಬೇಕಿದೆ. ಯಾಕೆಂದರೆ ಕೆಲವೊಮ್ಮೆ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆನ್ನುವ ಸ್ಪರ್ಧಿಗಳನ್ನು ಸ್ಪೆಷಲ್ ರೂಂಗೆ ಕಳುಹಿಸಲಾಗುತ್ತದೆ. ಹೀಗೂ ಕೂಡ ಆದರೂ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಯಮುನಾ ಶ್ರೀನಿಧಿ ನಿಜವಾಗಲೂ ಮನೆಯಿಂದ ಹೊರಬಂದ್ರಾ ಅಥವಾ ಇಲ್ವಾ ಎನ್ನುವುದು ಇವತ್ತಿನ ಸಂಚಿಕೆಯಲ್ಲಿ ತಿಳಿಯಲಿದೆ.

ಲಾಯರ್‌ಗೆ ಕಿಚ್ಚನ ಎಚ್ಚರಿಕೆ!
ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಮನೆಯಿಂದ ಹೊರ ಬಂದ ಬಳಿಕ ಬಿಗ್‌ಬಾಸ್ ಕಾರ್ಯಕ್ರಮವನ್ನೇ ನಿಲ್ಲುಸುತ್ತೇನೆ ಎಂದ ಲಾಯರ್ ಜಗದಿಶ್‌ಗೆ ಕಿಚ್ಚ ಸುದೀಪ್ ಕಿಚ್ಚಿನ ಮಾತು ಹೇಳಿದ್ದಾರೆ. 'ನೀವಲ್ಲ ಅವರಪ್ಪನಿಂದಲೂ ಬಿಗ್‌ಬಾಸ್ ಅನ್ನು ಏನೂ ಕೂಡ ಮಾಡಲು ಆಗಲ್ಲ' ಎಂದು ಸುದೀಪ್ ಹೇಳಿದ್ದಾರೆ.
ಅಲ್ಲದೆ ಸುದೀಪ್ ಮನೆಯ ಇತರ ಸ್ಪರ್ಧಿಗಳಿಗೂ ಕಿವಿ ಮಾತನ್ನು ಹೇಳಿದ್ದಾರೆ. 'ಮನೆಯಲ್ಲಿ ಯಾರೊಬ್ಬರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಯಾರ ಬಗ್ಗೆ ಪದೇ ಪದೇ ಮಾತನಾಡಿ ಯಾರನ್ನ ಹೀರೋ ಮಾಡ್ತಾಯಿದ್ದೀರಾ ಅನ್ನೋದನ್ನು ನೆನಪಿನಲ್ಲಿಡಿ. ಅದರಿಂದ ನಿಮಗೇನು ಲಾಭ ಎನ್ನುವುದನ್ನೂ ಯೋಚಿಸಿ' ಎಂದು ಕಿವಿ ಮಾತು ಹೇಳಿದ್ದಾರೆ.

ಬಿಗ್‌ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟನ್
ಇನ್ನೂ ಬಿಗ್‌ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟನ್ ಆಗಿ ಹಂಸಾ ಅವರು ಆಯ್ಕೆ ಆಗಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲೇ ಯಾವುದೇ ಶ್ರಮವಿಲ್ಲದೇ ಒಬ್ಬ ಸ್ಪರ್ಧಿ ಕ್ಯಾಪ್ಟನ್ ಆಗಿರುವುದು ಇದೇ ಮೊದಲು. ಹೀಗಾಗಿ ಸುದೀಪ್ ಹಂಸ ಅವರಿಗೆ ಕ್ಯಾಪ್ಟನ್ ಅಂದರೇನು ಎನ್ನುವ ಪ್ರಶ್ನೆ ಕೇಳಿ ಕಾಲೆಳೆದರು.
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 29 ರಂದು ಅದ್ಧೂರಿಯಾಗಿ ಪ್ರಾರಂಭಿಸಲಾಯಿತು. 17 ಸ್ಪರ್ಧಿಗಳನ್ನು ನರಕ ಮತ್ತು ಸ್ವರ್ಗ ಎಂಬ ಎರಡು ಮನೆಗಳಿಗೆ ಕಳುಹಿಸಲಾಗಿದೆ.












Click it and Unblock the Notifications