ನನ್ನ ಮದುವೆ ಆಗ್ತೀಯಾ? ಎಂದು ರಚಿತಾ ರಾಮ್ ಕೊನೆಗೂ ಪ್ರಪೋಸ್, ಹುಡುಗ ಯಾರು
ಸ್ಯಾಂಡಲ್‌ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಮದುವೆ ಯೋಗ ಕೂಡಿಬಂದಿದೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ. ಇಲ್ಲಿವರೆಗೆ ಬ್ಯಾಚುಲರ್ ಆಗಿದ್ದ ನಟಿಯರ ಪೈಕಿ ರಚಿತಾ ಕೂಡ ಒಬ್ಬರಾಗಿದ್ದರು. ಮದುವೆ ವಿಚಾರ ಪ್ರಸ್ತಾಪಿದಾಗಲೆಲ್ಲ, ತಮ್ಮ ಡಿಂಪಲ್ ನಗುವಿನಿಂದಲೇ ಉತ್ತರ ನೀಡಿ ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು. ಆದರೆ ಅಚ್ಚರಿ ಅಂದ್ರೆ ಇದೀಗ ರಚಿತಾ ರಾಮ್ ಅವರೇ ತಮ್ಮ ಮದುವೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ "ನನ್ನ ಮದುವೆ ಆಗ್ತೀಯಾ?" ಎಂದು ಅವರೇ ಪ್ರಪೋಸ್ ಕೂಡ ಮಾಡಿದ್ದಾರೆ. ಇಷ್ಟಕ್ಕೂ ರಚಿತಾ ಅವರಿಗೆ ಇಷ್ಟವಾಗಿರುವ ಆ ಹುಡುಗ ಯಾರು ಗೊತ್ತಾ?
ಇತ್ತೀಚೆಗೆ ರಚಿತಾ ರಾಮ್ ಅವರ ಬಗ್ಗೆ ಚಿತ್ರರಂಗದಲ್ಲಿ ಕೆಲ ಆರೋಪಗಳು ಕೇಳಿಬಂದಿದ್ದವು. ನಿರ್ಮಾಪಕರು, ನಿರ್ದೇಶಕರು ರಚಿತಾ ಅವರ ಮೇಲೆ ಗಂಭೀರ ಆರೋಪ ಮಾಡಿ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದರು. ಸದ್ಯ ಇದು ತಣ್ಣಗಾಗುವ ಹೊತ್ತಿಗೆ ರಚಿತಾ ರಾಮ್ ಅವರ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಇಲ್ಲಿವರೆಗೆ ನಟಿಯ ಮದುವೆ ಬಗ್ಗೆ ಗಾಸಿಪ್ ಮಾತ್ರವೇ ಇತ್ತು. ಆದರೆ ಈಗ ರಚಿತಾ ಅವರೇ ನನ್ನ ಮದುವೆ ಆಗ್ತೀಯಾ? ಎಂದು ಹುಡುಗನಿಗೆ ಆಫರ್ ಕೊಟ್ಟಿದ್ದಾರೆ.

ರಚಿತಾ ರಾಮ್ ಅವರು "ಭರ್ಜರಿ ಬ್ಯಾಚುಲರ್ಸ್" ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಇದೇ ಕಾರ್ಯಕ್ರಮದ ವೇದಿಕೆ ಮೇಲೆ ಡಿಂಪಲ್ ಕ್ವೀನ್ ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾರೆ. ಈ ಶೋ ಸ್ಪರ್ಧಿಗಳಾಗಿರುವ ಅನನ್ಯಾ-ಭುವನೇಶ್ ಜೋಡಿ ಟಾಸ್ಕ್‌ವೊಂದರಲ್ಲಿ ಸಖತ್ ಕಮಾಲ್ ಮಾಡಿದೆ. ಸ್ಪರ್ಧಿಗಳಿಗೆ ತಮ್ಮ ಜೋಡಿಗೆ ಪ್ರಪೋಸ್ ಮಾಡುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಭುವನೇಶ್ ಅವರು ತನ್ನ ಮೆಂಟರ್ ಅನನ್ಯಾಗೆ ಹಳ್ಳಿಗಾಡಿನ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದಾರೆ.
ʼಮದುವೆಗೆ ಯಾರನ್ನ ಒಪ್ಪಿಸಬೇಕು ಹೇಳುʼ
ಅನನ್ಯಾರನ್ನ ಜಾತ್ರೆಗೆ ಕರೆದೊಯ್ದು, ಕಾಲಿಗೆ ಗೆಜ್ಜೆ ತೊಡಿಸಿ, ಕೈಗೆ ಹಸಿರು ಬಳೆ ಕೊಡಿಸಿ, ಸಾಂಪ್ರದಾಯಿಕ ಬಟ್ಟೆ ನೀಡಿ ಮದುವೆಯಾಗೋಣ ಎಂದು ಭುವನೇಶ್ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಕಾರ್ಯಕ್ರಮದಲ್ಲಿದ್ದವರೆಲ್ಲ ಫಿದಾ ಆಗಿದ್ದಾರೆ. ಇನ್ನು ರಚಿತಾ ರಾಮ್ ಅವರಿಗೆ ಭುವನೇಶ್ ಪ್ರಪೋಸ್ ಮಾಡಿದ ಸ್ಟೈಲ್ ಸಖತ್ ಇಷ್ಟವಾಗಿದ್ದು, ನೇರವಾಗಿ ಭುವನೇಶ್ ಬಳಿ ಹೋಗಿ, "ಯಾರನ್ನ ಒಪ್ಪಿಸಬೇಕು ಅಂತ ಹೇಳು, ಅವರನ್ನ ನಾನು ಒಪ್ಪಿಸುತ್ತೀನಿ. ನನ್ನ ಮದುವೆ ಆಗ್ತೀಯಾ?" ಎಂದು ಭುವನೇಶ್‌ಗೆ ರಚ್ಚು ಪ್ರಪೋಸ್ ಮಾಡಿಬಿಟ್ಟಿದ್ದಾರೆ. ಇದನ್ನು ಕೇಳಿ ಖುದ್ದು ಭುವನೇಶ್ ಅವರೇ ಒಂದು ಕ್ಷಣ ಕಣ್ಣು ಬಾಯಿ ಬಿಡುತ್ತಾ ದಂಗಾಗಿದ್ದಾರೆ.

ಈ ಹಿಂದೆ ರಚಿತಾ ರಾಮ್ ಅವರು ಒಮ್ಮೆ ನಾನು ಗೌಡರ ಹುಡುಗನನ್ನೇ ಮದುವೆ ಆಗೋದು ಎಂದು ಹೇಳಿದ್ದರು. ಜೊತೆಗೆ ಸ್ಯಾಂಡಲ್‌ವುಡ್ ನಟರೊಬ್ಬರ ಜೊತೆಗೂ ರಚಿತಾ ಅವರ ಹೆಸರನ್ನು ಗಂಟು ಹಾಕಿದ್ದರು. ಇದೀಗ ಅವರೇ ವೇದಿಕೆಯಲ್ಲಿ ಭುವನೇಶ್‌ಗೆ ಪ್ರಪೋಸಲ್ ಇಟ್ಟಿದ್ದಾರೆ. ಇದನ್ನ ಸೀರಿಯಸ್ ಆಗಿ ಹೇಳಿದ್ರೋ, ಅಥವಾ ನಿಜವಾಗಿ ಭುನವೇಶ್ ಮೇಲೆ ರಚಿತಾ ಅವರಿಗೆ ಲವ್ ಆಗಿದೆಯೋ ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.












Click it and Unblock the Notifications