Ramachari Serial: ಬೆನ್ನಿಗೆ ಚೂರಿ ಚುಚ್ಚಿದ್ರೂ ಬದುಕಿ ಬರ್ತಾನಾ ರಾಮಾಚಾರಿ? ಕಣ್ಣೀರಿಟ್ಟ ಚಾರು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ರಾಮಾಚಾರಿ'ಗೆ ವೀಕ್ಷಕರ ಸಂಖ್ಯೆ ಹೆಚ್ಚೇ ಇದೆ. ಹೀಗಾಗಿ ಕಥೆ ಕೂಡ ಚೆನ್ನಾಗಿ ಮುಂದುವರಿಯುತ್ತಿದ್ದು, ಇದೀಗ ಕಥಾನಾಯಕ ರಾಮಾಚಾರಿಯ ಸಾವಿನ ಸುಳಿವು ನೀಡಿದೆ. ಇದನ್ನು ವೀಕ್ಷಕರು ಫುಲ್ ಶಾಕ್‌ಗೆ ಒಳಗಾಗಿದ್ದಾರೆ. ಧಾರಾವಾಹಿ ಸದ್ಯ ರೋಚಕತೆ ಸೃಷ್ಟಿಸಿದ್ದು ಗುರುವಾರ ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ ರಾಮಾಚಾರಿಯನ್ನ ಕೊಲೆ ಮಾಡುವ ದೃಶ್ಯಗಳು ಪ್ರೋಮೋದಲ್ಲಿದೆ. ಹಾಗಾಗಿ ರಾಮಾಚಾರಿ ಕಥೆ ಮುಗಿಯಲಿದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ರಾಮಾಚಾರಿಯನ್ನ ಚೂರಿಯಿಂದ ಚುಚ್ಚಿ ಕೊಲ್ಲುವ ಮತ್ತು ನಂತರದ ಬೆಳವಣಿಗೆಗಳ ಕುರಿತಾದ ಎಪಿಸೋಡ್‌ಗಳ ಕಡೆ ಎಲ್ಲರ ಚಿತ್ತ ನೆಟ್ಟಿದೆ.
ಈ ಧಾರಾವಾಹಿಯಲ್ಲಿ ವಿಲನ್‌ಗಳ ದೊಡ್ಡ ಗ್ಯಾಂಗ್ ಇದ್ದು, ಮಾನ್ಯತಾ, ನವದೀಪ್, ರುಕ್ಕು ಇವರೆಲ್ಲ ಸೇರಿ ರಾಮಾಚಾರಿಯನ್ನ ಕೊಲ್ಲುವ ಪ್ಲ್ಯಾನ್ ಮಾಡಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ರಾಮಾಚಾರಿಯನ್ನು ಮೋಸದಿಂದ ಫ್ಯಾಕ್ಟರಿಯೊಂದಕ್ಕೆ ಕರೆಸಿಕೊಂಡು, ಅಲ್ಲಿ ದೊಡ್ಡ ಫೈಟ್ ಕೂಡ ನಡೆಯುತ್ತೆ. ಆದರೆ ಅಂತಿಮ ರಾಮಾಚಾರಿ ಅವರ ಕುತಂತ್ರಕ್ಕೆ ಬಲಿಯಾಗುತ್ತಾನೆ ಎಂದು ಹೇಳಲಾಗುತ್ತಿದೆ. ಕೊನೆಗೆ ರಾಮಾಚಾರಿಯ ಜೊತೆ ಬಂದಿದ್ದವಳೇ ಚೂರಿಯಿಂದ ಇರಿಯುತ್ತಾಳೆ. ಆಗ ಆ ಗ್ಯಾಂಗ್ ಎಲ್ಲ ನಮ್ಮ ಶತ್ರು ಕಥೆ ಮುಗೀತು ಎನ್ನುವ ಖುಷಿಯಲ್ಲಿ ತೇಲಾಡುತ್ತಾರೆ. ಇದರ ನಡುವೆ ಚಾರು ಹಾಗೂ ಕುಟುಂಬ, ಅಗ್ರಹಾರದ ಜನರು ತಮ್ಮ ನೆಚ್ಚಿನ ರಾಮಾಚಾರಿಯ ಸಾವಿನ ಶೋಕದಲ್ಲಿ ಮುಳುಗಿರುತ್ತಾರೆ.

ಈ ಘಟನೆಯು ಥೇಟ್ ಚಾರುಲತಾ ಕಂಡ ಕನಸಿನಂತೆ ಆತಂಕ ಸೃಷ್ಟಿಸುವಂತಿದೆ. ಚಾರುಲತಾ ರಾಮಾಚಾರಿಯ ರಕ್ಷಣೆಗಾಗಿ ಪ್ರಾರ್ಥನೆ ಮಾಡಿ ದೀಪ ಬೆಳಗಿಸಿದ್ದು, ದೀಪ ಆರಿ ಹೋಗುವುದರಿಂದ ಅವಳಲ್ಲಿ ಭಯ ಕೂಡ ಹೆಚ್ಚಾಗಿದೆ. ಈಗಾಗಲೇ ರಾಮಾಚಾರಿ ಮೇಲೆ ಹಲವು ಬಾರಿ ಕೊಲೆ ಯತ್ನಗಳು ಜರುಗಿದರೂ ಈವರೆಗೂ ತಪ್ಪಿಸಿಕೊಂಡಿದ್ದಾನೆ. ಆದರೆ ಈಗ ನಡೆದ ಘಟನೆಯು ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ನೀಡುವಂತಿದೆ.
ದೇವರಲ್ಲಿ ಚಾರು ಕೇಳಿಕೊಂಡಿದ್ದೇನು?
ರಾಮಾಚಾರಿ ಕ್ಷೇಮವಾಗಿ ಬರೋ ತರ ನೀನೇ ಮಾಡಬೇಕು ಎಂದು ಚಾರು ದೇವರಲ್ಲಿ ಪ್ರಾರ್ಥಿಸಿದ್ದಾಳೆ. ರಾಮಾಚಾರಿ ದೇವರ ಕೆಲಸ ಮಾಡೋನು, ಅವನು ಯಾರನ್ನೇ ಮರೆತರೂ ನಿನ್ನನ್ನ ಮರೆಯಲ್ಲ.ಅಂತಹ ನನ್ನ ರಾಮಾಚಾರಿಗೆ ಯಾವುದೇ ತೊಂದರೆ ಮಾಡಬೇಡ.ಒಂದು ವೇಳೆ ರಾಮಾಚಾರಿಗೆ ಏನಾದ್ರೂ ಆಗೋ ಹಾಗಿದ್ರೆ ಮೊದಲು ನನಗೇ ಆಗಿಬಿಡಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದಾಳೆ.
ರಾಮಾಚಾರಿ ಅಭಿಮಾನಿಗಳು ಕೂಡ ಈ ಪ್ರೋಮೋ ನೋಡಿ ಶಾಕ್ ಆಗಿದ್ದಾರೆ. ರಾಮಾಚಾರಿ ನಿಜವಾಗಿಯೂ ಸಾಯುತ್ತಾನಾ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ. ಚಾರು ಕೂಡ ದೇವರಲ್ಲಿ ಬಲವಾಗಿ ಪ್ರಾರ್ಥಿಸಿಕೊಂಡು, ಇಡೀ ಮನೆಯವರೆಲ್ಲ ಆತಂಕದಲ್ಲಿರುವುದು ಸಾವಿನ ಸುಳಿವು ನೀಡುವಂತಿದೆ. ರಾಮಾಚಾರಿ ನಿಜವಾಗಿ ಮೋಸದಾಟಕ್ಕೆ ಜೀವ ಬಿಡುತ್ತಾನಾ? ಅಥವಾ ಇದು ಸುಳ್ಳಿರಬಹುದೇ ಎಂದು ಕಥೆಗಳನ್ನು ಹೆಣೆಯುತ್ತಿದ್ದಾರೆ. ಹಾಗಾಗಿ ಮುಂದಿನ ಎಪಿಸೋಡ್‌ಗಳಿಗಲ್ಲಿ ರಾಮಾಚಾರಿಯ ಅಸಲಿ ಕಥೆ ತಿಳಿಯಲಿದೆ.












Click it and Unblock the Notifications