Bigg Boss: ಧನರಾಜ್ ಮೇಲೆ ಕೈ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಬಂದ್ರಾ ರಜತ್?
ಬಿಗ್ ಬಾಸ್ 11ನೇ ಆವೃತ್ತಿ 73ನೇ ದಿನಕ್ಕೆ ಕಾಲಿಟ್ಟಿದ್ದು ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಮನೆಯಲ್ಲಿ ಉಳಿಯಲು ತಂತ್ರ - ಪ್ರತಿತಂತ್ರಗಳು ನಡೆಯುತ್ತಲೇ ಇವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಉಳಿದುಕೊಂಡಿದ್ದು ಈ ವಾರ ಎಲಿಮಿನೇಷನ್ ಆಗೋದು ಯಾರಾ ಎನ್ನುವ ಕುತೂಹಲವಿದೆ. ಈ ನಡುವೆಯೇ ರಜತ್ ಮತ್ತು ಧನರಾಜ್ ನಡುವೆ ಜಗಳ ಜೋರಾಗಿದ್ದು ಧನರಾಜ್ ಮೇಲೆ ಹಲ್ಲೆ ಮಾಡಲು ರಜತ್ ಪ್ರಯತ್ನಿಸಿದ್ದಾರೆ.
ಈ ಮೊದಲೇ ಧನರಾಜ್ ಮತ್ತು ರಜತ್ ನಡುವೆ ಮಾತಿನ ಚಕಮಕಿ ನಡೆದಿತ್ತು. ರಜತ್ ಧನರಾಜ್‌ಗೆ ಪಾಪು ಎಂದಿದ್ದಕ್ಕೆ ರಜತ್ ಕೆನ್ನೆ ಸವರಿದ್ದ ಧನರಾಜ್ ಅಂಕಲ್ ಎಂದು ಕರೆದಿದ್ದರು. ಆಗಲೇ ರಜತ್ ಸಿಟ್ಟಾಗಿದ್ದರು. ಈಗ ಮತ್ತೊಮ್ಮೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಯಾರು ಉತ್ತಮ ಯಾರು ಕಳಪೆ ಎಂದು ಹೇಳುವ ಸಂದರ್ಭದಲ್ಲಿ ಧನರಾಜ್ ರಜತ್‌ರನ್ನು ಕಳಪೆ ಎಂದು ಕರೆದಿದ್ದಾರೆ. ರಜತ್ ಬೆದರಿಕೆ ಹಾಕಿದ್ದಾರೆ, ಕೈಕಾಲು ಮುರಿಯುತ್ತೇನೆ ಎನ್ನುತ್ತಾರೆ ಅದಕ್ಕೆ ಅವರಿಗೆ ಕಳಪೆ ಕೊಡುತ್ತಿದ್ದೇನೆ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಜತ್ ಅಂದು ನನಗೆ ಬಂದಿದ್ದ ಸಿಟ್ಟಿಗೆ ನಿನಗೆ ಹೊಡೆದು ಆಚೆ ಹೋಗುತ್ತಿದ್ದೆ ಎನ್ನುತ್ತಾರೆ. ಇದಕ್ಕೆ ಧನರಾಜ್ ಅದೇನೋ ಕೈಕಾಲು ಮುರಿತೇನೆ ಅಂದ್ರಲ್ಲ ಈಗ ಮುರಿದು ತೋರಿಸಿ ಎಂದು ಸವಾಲ್ ಹಾಕುತ್ತಾರೆ.
ಇದರಿಂದ ರಜತ್ ಸಿಟ್ಟಾಗಿದ್ದು ಮತ್ತೊಮ್ಮೆ ಮುಟ್ಟಿದರೆ ಹೊಡೆಯುತ್ತೇನೆ ಎಂದು ಧನರಾಜ್ ಮೇಲೆ ಕೈಮಾಡಲು ಹೋಗಿದ್ದಾರೆ. ರಕ್ಷಣವೇ ಉಳಿದ ಸ್ಪರ್ಧಿಗಳು ರಜತ್‌ರನ್ನು ಹಿಡಿದುಕೊಂಡಿದ್ದಾರೆ. ಶುಕ್ರವಾರದ ಎಪಿಸೋಡ್‌ನಲ್ಲಿ ಈ ಘಟನೆ ನಡೆದಿದ್ದು ಕಲರ್ಸ್ ಕನ್ನಡ ಪ್ರೋಮೋ ಹಂಚಿಕೊಂಡಿದೆ.
ಬಿಗ್‌ಬಾಸ್ ಮನೆಯಿಂದ ಗೇಟ್‌ಪಾಸ್?
ರಜತ್ ವರ್ತನೆ ಮಿತಿಮೀರಿದೆ ಎಂದು ಈಗಾಗಲೇ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮುನ್ನ ಗೋಲ್ಡ್ ಸುರೇಶ್ ಜೊತೆ ಜಗಳವಾಡಿಕೊಂಡಿದ್ದ ರಜತ್, ಕೆಟ್ಟದಾಗಿ ಮಾತನಾಡಿದ್ದರು. ಇದು ಕಿಚ್ಚ ಸುದೀಪ್‌ರ ಕೋಪಕ್ಕೂ ಕಾರಣವಾಗಿತ್ತು. ಈಗ ಮತ್ತೊಮ್ಮೆ ರಜತ್ ಧನರಾಜ್ ಮೇಲೆ ಕೈಮಾಡುವ ಹಂತಕ್ಕೆ ಹೋಗಿದ್ದು ಅವರು ಈ ವಾರವೇ ಮನೆಯಿಂದ ಹೊರ ಹೋಗುವುದು ಖಚಿತ ಎನ್ನಲಾಗಿದೆ.
ರಜತ್‌ಗೆ ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಸಖತ್ ಕ್ಲಾಸ್ ಇದೆ ಎಂದು ಕೂಡ ವೀಕ್ಷಕರು ನಿರೀಕ್ಷೆ ಮಾಡಿದ್ದಾರೆ. ನಾಮಿನೇಷನ್ ಆದವರ ಪಟ್ಟಿಯಲ್ಲಿ ರಜತ್ ಹೆಸರು ಕೂಡ ಇದ್ದು, ಆತನನ್ನು ಮೊದಲು ಮನೆಯಿಂದ ಹೊರ ಕಳಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹನುಮಂತನ ತಂಡಕ್ಕೆ ಗೆಲುವು
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹನುಮಂತ ನಾಯಕತ್ವದ ತಂಡ ಗೌತಮಿ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಕ್ಯಾಪ್ಟನ್ಸಿ ಓಟದಲ್ಲಿ ಭವ್ಯ, ರಜತ್, ಗೋಲ್ಡ್ ಸುರೇಶ್, ಹನುಮಂತು ಕೂಡ ಇದ್ದು ಈ ವಾರ ಕ್ಯಾಪ್ಟನ್ ಯಾರಾಗ್ತಾರೆ ಎನ್ನುವ ಕುತೂಹಲ ಕೂಡ ಇದೆ. ಗೌತಮಿ ತಂಡದಲ್ಲಿದ್ದ ಚೈತ್ರಾ ಕುಂದಾಪುರ ಆಟದಲ್ಲಿ ನನಗೆ ಅವಕಾಶವನ್ನೇ ಕೊಡಲಿಲ್ಲ ಎಂದು ಗೋಳಾಡಿದ್ದಾರೆ.












Click it and Unblock the Notifications