Murder of Renukaswamy: ಸಾಧಕರ ಸಾಲಿಗೆ ಸೇರಿದ್ರಾ ರೇಣುಕಾಸ್ವಾಮಿ... ವಿಕಿಪೀಡಿಯದಲ್ಲಿ ಇದೆ ಸಂಪೂರ್ಣ ಮಾಹಿತಿ!
ಬೆಂಗಳೂರು, ಜೂನ್. 28: ನಟ ದರ್ಶನ್ ಈಗ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇದರ ಜೊತೆಗೆ ರೇಣುಕಾಸ್ವಾಮಿ ಬಗ್ಗೆ ವಿಕಿಪೀಡಿಯ ಪೇಜ್ ಓಪನ್ ಆಗಿದೆ.
ಹೌದು.. ನಾವು ಯಾವುದಾದರೂ ವಿಷಯದ ಬಗ್ಗೆ ತಿಳಿದುಕೊಳ್ಳಬೇಕು, ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕು ಅಂದರೆ ಮೊದಲು ಗೂಗಲ್‌ನಲ್ಲಿ ಸರ್ಚ್ ಮಾಡುತ್ತೇವೆ. ಆಗ ವಿಕಿಪೀಡಿಯಾ ಪೇಜ್ ಓಪನ್ ಆಗುತ್ತದೆ. ವಿಡಿಪೀಡಿಯಾದಲ್ಲಿ ಎಲ್ಲವೂ ಸರಿಯಿಲ್ಲದಿದ್ದರೂ ಉಪಯುಕ್ತ ಮಾಹಿತಿ ಅಂತ ಸಿಗುತ್ತದೆ. ಆದರೆ, ಈಗ ದರ್ಶನ್ ಮತ್ತು ಗ್ಯಾಂಗ್‌ನಿಂದ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ರೇಣುಕಾ ಸ್ವಾಮಿ ಕೂಡ ವಿಕಿಪೀಡಿಯಾದಲ್ಲಿ ಸಿಗುತ್ತಾರೆ.

Murder of Renukaswamy: ವಿಕಿಪೀಡಿಯ
ನಟ ದರ್ಶನ್ ಅವರ ತಂಡದಿಂದ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ಅವರ ಬಗ್ಗೆ ಸುದ್ದಿಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ವಿಕಿಪೀಡಿಯಾದಲ್ಲಿ "Murder of Renukaswamy" ಎಂಬ ಪೇಜ್ ಕ್ರಿಯೇಟ್ ಮಾಡಲಾಗಿದೆ. ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಆಪ್ತೆ ಪವಿತ್ರಾಗೌಡ ಇರುವ ಕಾರಣ ಇದೊಂದು ದೊಡ್ಡ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಹೀಗಾಗಿ ರೇಣುಕಾಸ್ವಾಮಿ ಬಗ್ಗೆ ಹುಡುಕುವವರು ಹೆಚ್ಚಾಗುತ್ತಿದ್ದಾರೆ.
ಪ್ರಕರಣದ ಬಗ್ಗೆ ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವಾಗಲೇ ವಿಕಿಪೀಡಿಯಾ ಪೇಜ್ ಮಾಡಲಾಗಿದ್ದು, ಇದರಲ್ಲಿ ಘಟನೆ ನಡೆದ ದಿನದಿಂದ ಇಲ್ಲಿಯವರೆಗೂ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಕರಣದ ಆರಂಭ.. ಕೊಲೆ ನಡೆದದ್ದು.. ಆರೋಪಿಗಳು ಸಿಕ್ಕು ಹಾಕಿಕೊಂಡಿದ್ದು.. ಆರೋಪಿಗಳ ಹಿನ್ನೆಲೆ.. ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.

ಮರ್ಡರ್ ಆಫ್ ರೇಣುಕಾಸ್ವಾಮಿ ಪೇಜ್‌ನಲ್ಲಿ ಇರೋದೇನು?
ರೇಣುಕಾಸ್ವಾಮಿ (1991 - ಜೂನ್ 8, 2024) ಚಿತ್ರದುರ್ಗದ ನಿವಾಸಿಯಾಗಿದ್ದು, ದರ್ಶನ್ ಅವರ ದೀರ್ಘಕಾಲದ ಸಂಗಾತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಆರೋಪಿಸಿ ದರ್ಶನ್ ಅವರೊಂದಿಗೆ ಕೆಲಸ ಮಾಡುವ ವ್ಯಕ್ತಿಗಳು ಅಪಹರಿಸಿ ಕೊಲೆ ಮಾಡಿದ್ದಾರೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.
ರೇಣುಕಾಸ್ವಾಮಿ (ರೇಣುಕಾಸ್ವಾಮಿ) ಕಾಶಿನಾಥ ಶಿವನಗೌಡರ ಮತ್ತು ಅವರ ಪತ್ನಿ ರತ್ನಪ್ರಭಾ ಅವರ ಏಕೈಕ ಪುತ್ರ. ಕುಟುಂಬದ ಏಕೈಕ ಜೀವನಾಧಾರವಾಗಿದ್ದ ಅವರು 2023 ರಲ್ಲಿ ವಿವಾಹವಾದರು. ಅವರು ಕೊಲೆಯಾದ ಸಮಯದಲ್ಲಿ, ಅವರ ಪತ್ನಿ ಗರ್ಭಿಣಿಯಾಗಿದ್ದರು, ಮತ್ತು ರೇಣುಕಾಸ್ವಾಮಿ ಚಿತ್ರದುರ್ಗದ ಫಾರ್ಮಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ಬೆಂಗಳೂರಿನಲ್ಲಿ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ರೇಣುಕಾಸ್ವಾಮಿ ಅವರು ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.ಅವನ ಸಾವಿಗೆ ಶಾಕ್ ಆಘಾತ ಮತ್ತು ರಕ್ತಸ್ರಾವ ಕಾರಣ...
ಹೀಗೆ... ಸಂತ್ರಸ್ತ ಯಾರು... ಕೊಲೆ ಮಾಡಿದವರ್ಯಾರು... ಕೊಲೆ ನಡೆದದ್ದು ಹೇಗೆ...? ತನಿಖೆ ಯಾವ ಹಂತದಲ್ಲಿದೇ..? ಘಟನೆಗೆ ಚಿತ್ರೋದ್ಯಮ ಪ್ರತಿಕ್ರಿಯಿಸಿದ್ದು ಹೇಗೆ..? ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಏನು..? ಹೀಗೆ ಎಲ್ಲಾ ಆಯಾಮಗಳಲ್ಲಿಯೂ ಸಂಪೂರ್ಣ ಘಟನೆಯನ್ನು ವಿವರಿಸಲಾಗಿದೆ. ಜೊತೆಗೆ ಅವರ ಕುಟುಂಬದ ಮಾಹಿತಿಯನ್ನು ನೀಡಲಾಗಿದೆ. ತನಿಖೆಯ ಬಗ್ಗೆ ಮಾಹಿತಿ ಸಿಕ್ಕ ಹಾಗೆಯೇ ಅದನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಹೀಗಾಗಿ ರೇಣುಕಾಸ್ವಾಮಿಯನ್ನು ಸಾಧಕರ ಪಟ್ಟಿಗೆ ಸೇರಿಸಲಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications