Dharma: ಕೊನೆ ಕ್ಷಣದಲ್ಲಿ ಧರ್ಮ ಕೀರ್ತಿರಾಜ್ ಮದುವೆ ಮುರಿದು ಬಿದ್ದಿದ್ದೇಕೆ..?
ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿ ರಾಜ್ ಅವರ ಮಗ ನವಗ್ರಹ ಸಿನಿಮಾ ಖ್ಯಾತಿಯ ಧರ್ಮ ಕೀರ್ತಿರಾಜ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಜನ್ 11ಕ್ಕೆ ಕಾಲಿಟ್ಟಿದ್ದರು. ಎಂಟು ವಾರಗಳನ್ನು ಬಿಗ್ ಬಾಸ್ ಮನೆಯಲ್ಲಿ ಪೂರೈಸಿರುವ ಧರ್ಮ ಕೀರ್ತಿರಾಜ್ ಕಳೆದ ವೀಕೆಂಡ್ ಸಂಚಿಕೆಯಲ್ಲಿ ಮನೆಯಿಂದ ಹೊರಬಂದರು. ಈ ಬಾರಿಯ ಬಿಗ್ ಬಾಸ್ ಕಪ್ ಗೆಲ್ಲದೇ ಇದ್ದರೂ ಧರ್ಮ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದಾರೆ.
ತಮ್ಮ ಆಟ ಹಾಗೂ ಮುಗ್ಧತೆಯಿಂದ ಕನ್ನಡಿಗರ ಮನಸ್ಸು ಗೆದ್ದಿರುವ ಧರ್ಮ ಕೀರ್ತಿರಾಜ್ ಅವರ ಮನಸ್ಸನ್ನೇ ಗೆದ್ದವರು ಯಾರು..? ಪ್ರೀತಿಯಲ್ಲಿ ಬಿದ್ದಿದ್ದಾರಾ ಧರ್ಮ..? ಧರ್ಮ ಮದುವೆ ಯಾವಾಗ? ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಧರ್ಮ ಕೀರ್ತಿರಾಜ್ ಮುಕ್ತವಾಗಿ ಉತ್ತರಿಸಿದ್ದಾರೆ.

'ಎರಡು ಮೂರು ವರ್ಷಗಳ ಹಿಂದೆ ನಾನು ಮದುವೆ ಆಗಬೇಕಿತ್ತು. ಅದಕ್ಕೆ ಪ್ಲ್ಯಾನ್ ಕೂಡ ಆಗಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಅದು ಆಗಲಿಲ್ಲ. ಮದುವೆ ತುಂಬಾ ಹತ್ತಿರ ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದು ಆಗಲಿಲ್ಲ' ಎಂದು ಧರ್ಮ ತಮ್ಮ ಈ ಹಿಂದೆ ಮುರಿದು ಬಿದ್ದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಇನ್ನು ಬಿಗ್ ಬಾಸ್ ಕನ್ನಡ ಸೀಜನ 11ರ ಮನೆಯಲ್ಲಿ ಧರ್ಮ ಕೀರ್ತಿ ರಾಜ್ ಹೆಸರಿನ ಜೊತೆ ಅನುಷಾ ರೈ ಹಾಗೂ ಐಶ್ವರ್ಯ ಹೆಸರು ತಳುಕು ಹಾಕಿಕೊಂಡ ಬಗ್ಗೆ ಮಾತನಾಡಿದ ಅವರು, 'ಅನುಷಾ ರೈ ಹಾಗೂ ಐಶ್ವರ್ಯ ಜೊತೆ ನನ್ನ ಗೆಳೆತನ ಚೆನ್ನಾಗಿದೆ. ಐಶ್ವರ್ಯ ಪ್ರತಿ ಕ್ಷಣದಲ್ಲಿ ನನಗೆ ಸಪೋರ್ಟ್ ಮಾಡುತ್ತಿದ್ದರು.

ಇನ್ನು ನಾನು ಅನುಷಾ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದೇವು. ಅಲ್ಲಿಂದ ಶುರವಾದ ಗೆಳತನ ಈಗಲೂ ಚೆನ್ನಾಗಿದೆ. ಸಿನಿಮಾ ಮಾಡುವಾಗ ಶುರುವಾದ ಗೆಳೆತನ ಈಗ ಇಲ್ಲಿಂದ ಮುಂದುವರಿದೆ. ಆ ಗೆಳೆತನ ಎನ್ನುವುದು ಒಂದು ಒಳ್ಳೆ ಮಟ್ಟಕ್ಕೆ ಹೋಯಿತು. ಗೆಳೆತನ ಹೇಗೆ ಇರಬೇಕು ಎನ್ನುವುದಕ್ಕೆ ಒಂದು ಉದಾಹರಣೆ ಆಗಿದ್ದೇವೆ. ಗೆಳೆತನ ಎನ್ನುವುದನ್ನು ಬರೀ ಪ್ರೀತಿ ದೃಷ್ಟಿಯಲ್ಲೇ ನೋಡಬೇಕಿಲ್ಲ. ಅದನ್ನು ಬಿಟ್ಟು ಎಷ್ಟು ಚೆನ್ನಾಗಿ ಅನ್ಯೋನ್ಯವಾಗಿ ಇರಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ' ಎಂದು ಹೇಳಿದರು.
'ಸದ್ಯ ಲವ್, ಪ್ರೀತಿ ಎನ್ನುವುದು ಯಾವುದೂ ಇಲ್ಲ. ಈಗ ನನ್ನ ವೃತ್ತಿ ಜೀವನದಲ್ಲಿ ಬಗ್ಗೆ ತುಂಬಾ ಗಮನ ಹರಿಸುತ್ತಿದ್ದೇನೆ. ಇದು ಬಿಗ್ ಬಾಸ್ ನನಗೆ ಸಿಕ್ಕದ್ದು ಒಂದು ಒಳ್ಳೆ ವೇದಿಕೆ. ಜನ ನನ್ನನ್ನು ಒಪ್ಪಿಕೊಂಡಿರುವ ರೀತಿ. ಇನ್ನೊಂದು ಜೀವನ ಇಲ್ಲಿಂದ ಶರುವಾಗಿದೆ. ಜನ ನನ್ನ ಮೇಲೆ ಯಾವ ರೀತಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅದನ್ನು ಕಮ್ಮಿ ಮಾಡಬಾರದು. ಅದನ್ನು ಇನ್ನೂ ಹೆಚ್ಚು ಮಾಡಬೇಕು. ಇನ್ನೂ ಒಳ್ಳೊಳ್ಳೆ ಸಿನಿಮಾ ಮಾಡಬೇಕು. ಸದ್ಯ ಕೆಲವು ಸಿನಿಮಾ ಬಿಡುಗಡೆಗೆ ಸಿದ್ಧವಿದೆ' ಎಂದರು.
'ಎಲ್ಲರ ಜೀವನದಲ್ಲಿ ಮದುವೆಯಾಗಬೇಕು ಎನ್ನುವುದು ಇದ್ದೇ ಇದೆ. ನಮಗಾಗಿ ಒಂದು ಹೆಗಲು ಬೇಕೆ ಬೇಕು. ಎಷ್ಟೇ ನಮ್ಮ ತಂದೆ ತಾಯಿ ಜೊತೆ ನಮ್ಮೆಲ್ಲಾ ಭಾವನೆಗಳನ್ನು ಹಂಚಿಕೊಂಡರೂ ಸಹ ನಮಗೆ ಅಂತಾನೇ ಲೈಫ್ ಪಾರ್ಟ್ನರ್ ಬೇಕೇ ಬೇಕು. ಮುಂದೆ ಮದುವೆ ಆಗುತ್ತದೆ. ಸದ್ಯ ಅದರ ಬಗ್ಗೆ ಏನೂ ಪ್ಲ್ಯಾನ್ ಮಾಡಿಕೊಂಡಿಲ್ಲ' ಎಂದು ಧರ್ಮ ಕೀರ್ತಿ ರಾಜ್ ತಮ್ಮ ಮದುವೆ ವಿಚಾರದ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡುವಾಗ ಹೇಳಿದ್ದಾರೆ.












Click it and Unblock the Notifications