ಕನ್ನಡ ಚಿತ್ರರಂಗ ಉದ್ಧಾರ ಆಗದೇ ಇರೋದಕ್ಕೆ ಕಾರಣವೇನು? ಇಲ್ಲಿದೆ ಇತಿಹಾಸ ತಜ್ಞರ ಕಟು ಅಭಿಪ್ರಾಯ
ಕನ್ನಡ ಚಿತ್ರರಂಗ ಇತ್ತೀಚಿನ ಅಳಿವಿನಂಚಿನತ್ತ ಸಾಗಿದೆ ಹೇಳುವವರೇ ಹೆಚ್ಚು ಜನ ಇದ್ದಾರೆ. ಆದರೆ ಈ ರೀತಿ ಯಾಕೆ ಆಗುತ್ತಿದೆಯೆಂದು ಕೇಳಿದರೆ, ಸುಮ್ಮನಾಗಿಬಿಡುತ್ತಾರೆ. ಯಾವುದೇ ಒಂದು ಕ್ಷೇತ್ರವದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದರೆ ಅಲ್ಲಿ ಹಿರಿಕರ ಶ್ರಮ ತುಂಬಾ ಇರುತ್ತದೆ. ಹಾಗೆಯೇ ಕನ್ನಡ ಚಿತ್ರರಂಗ ಯಾಕೆ ಉದ್ಧಾರ ಆಗುತ್ತಿಲ್ಲವೆಂದು ಧರ್ಮೇಂದ್ರ ಕುಮಾರ್ ಪೀಪಲ್ ಟಿವಿ ಯೂಟ್ಯೂಟ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಪೀಪಲ್ ಟಿವಿ ಎನ್ನುವ ಕನ್ನಡ ಚಾನೆಲ್‌ವೊಂದಲ್ಲಿ ಕನ್ನಡ ಚಿತ್ರರಂಗದ ಅಳಿವಿನಂಚಿನ ಬಗ್ಗೆ ಮಾತನಾಡಿದ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅವರು, ಎಂ.ಡಿ.ಸುಂದರ್ ಬರೆದಿರುವ ಅತ್ಯದ್ಭುತ ಕಥೆಗಳ ಬಗ್ಗೆ ಸವಿವರವಾಗಿ ವಿವರಸಿದ್ದಾರೆ. ಅಲ್ಲದೆ ಅಂತಹ ಕಥೆಗಾರ ಹಸಿವಿನಿಂದ ಸಾವನ್ನಪ್ಪಿರುವುದು ಕನ್ನಡ ಚಿತ್ರರಂಗಕ್ಕೆ ಹೇಗೆಲ್ಲ ಶಾಪ ತಟ್ಟಿದೆ ಅಂತಲೂ ವಿವರಿಸಿದ್ದಾರೆ.

ಒಂದು ಸಿನಿಮಾನ ಅದ್ಭುತವಾಗಿ ಮೂಡಿಬರಬೇಕೆಂದರೆ ಕಥೆಗಾರ, ತಂತ್ರಜ್ಞರ ಪಾತ್ರ ಪ್ರಮುಖವಾಗಿರುತ್ತದೆ. ಎಷ್ಟೋ ಜನರಿಗೆ ಇದು ಗೊತ್ತೇ ಇರುವುದಿಲ್ಲ. ಬದಲಾಗಿ, ಹಿರೋ, ವಿಲನ್‌ಗಳನ್ನಷ್ಟೇ ನೋಡಿರುತ್ತಾರೆ, ಇವರೆಲ್ಲ ತೆರೆ ಮೇಲೆ ಚೆನ್ನಾಗಿ ಕಾಣಿಸುತ್ತಾರೆ, ನಟನೆ ಮಾಡುತ್ತಾರೆ ಎಂದರೆ ಇದಕ್ಕೆ ಪ್ರಮುಖ ಸೂತ್ರದಾರಿಗಳು, ಕಥೆಗಾರರು, ತಂತ್ರಜ್ಞರು ಆಗಿರುತ್ತಾರೆ.
ಹಿಂದೆಲ್ಲ, ಹಿರಿಯ ಕಲಾವಿದರು, ಕಥೆಗಾರರು, ತಂತ್ರಜ್ಞರಿಗೆ ತುಂಬಾ ಬೆಲೆ ಕೊಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾ ಅಂದರೆ ಬಹುತೇಕರು ಮಂದಿ ಹಿರೋ, ಹಿರೋಹಿನ್‌ಗಳದ್ದಷ್ಟೇ ಪ್ರಮುಖ ಪಾತ್ರ ಎಂದುಕೊಂಡುಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕಥೆ ಬರೆದವನಿಗಿಂತಲೂ ಹಾಗೂ ಕಥೆ ಚೆನ್ನಾಗಿ ಮೂಡುವಂತೆ ಮಾಡುವ ತಂತ್ರಜ್ಞನಿಗಿಂತಲೂ ಹೆಚ್ಚು ಪ್ರಾಧನ್ಯತೆ ಮತ್ಯಾರಿಗೋ ಸಿಗುತ್ತದೆ.
ಇನ್ನೂ ಕನ್ನಡ ಚಿತ್ರರಂಗ ಯಾಕೆ ಅಳಿವಿನಂಚಿನತ್ತ ಸಾಗುತ್ತಿದೆ ಎಂದು ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಸವಿವರವಾಗಿ ಹೇಳಿದ್ದಾರೆ. ಅಲ್ಲದೆ, ಸೂರ್ಯ, ಚಂದ್ರ ಇರುವವರೆಗೂ ಅಚ್ಚಳಿಯದೇ ಉಳಿಯುವಂತಹ ಸಿನಿಮಾಗಳನ್ನು ಮಾಡಿದವರ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ.
ಸುಂದರ್ ಎಂಬ ಒಬ್ಬ ಕಥೆಗಾರನ ಹೆಸರು ಕೇಳಿದ್ದೀರಾ.. ಕನ್ನಡ ಸಿನಿಮಾ ನೋಡುವವರು ನನ್ನ ವಯಸ್ಸಿನವರು ಕೆಲವರಾದ್ರೂ ಕೇಳಿರ್ತೀರಾ.. ಎಂತೆಂಥಾ ಸಿನಿಮಾಗಳ ಕಥೆ ಬರೆದಿದ್ದಾರೆ ಗೊತ್ತಾ.. ಸೂರ್ಯ-ಚಂದ್ರ ಇರುವವರೆಗೂ ಇರುವ ಏಕೈಕ ಸಿನಿಮಾ ಗಂಧದ ಗುಡಿ ಕಥೆಯನ್ನು ಬರೆದಿದ್ದು ಅವರೇ. ಆಲ್ ಟೈಮ್ ಹಿಟ್ ಶಂಕರ್ ಗುರು ಬರೆದಿದ್ದು ಅವರೇ ಎಂದು ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.
ಅಲ್ಲದೆ, ತಾಯಿಗೆ ತಕ್ಕ ಮಗ, ಚಕ್ರವ್ಯೂಹ, ಒಲವು ಗೆಲುವು, ತ್ರಿಮೂರ್ತಿ, ಸಿಂಗಾಪುರ ರಾಜಕುಳ್ಳ, ಆಟೋರಾಜ, ಕಿಲಾಡಿ ಕಿಟ್ಟು, ಸಹೋದರರ ಸವಾಲು, ಅವಳ ಹೆಜ್ಜೆ, ಕಳ್ಳ ಕುಳ್ಳ, ನೀ ನನ್ನ ಗೆಲ್ಲಲಾರೆ, ಪ್ರೀತಿ ಮಾಡಿ ತಮಾಷೆ ನೋಡು, ಮೂಗನ ಸೇಡು ಸೇರಿದಂತೆ ಇನ್ನೂ ಸುಮಾರು ಸಿನಿಮಾಗಳ ಕಥೆಗಳನ್ನು ಬರೆದಿದ್ದಾರೆ. ಕನ್ನಡದ ಖ್ಯಾತಿಯನ್ನ ಜಗದಗಲ, ಮುಗಿಲಗಲ, ದೇಶದಗಲ ಹಬ್ಬಿಸಿದಂತಹ ಕಥೆಗಳನ್ನು ಕೊಟ್ಟಂತಹ ಆ ಎಂ.ಡಿ.ಸುಂದರ್ ಬಹುತೇಕ ಜನರಿಗೆ ಗೊತ್ತಿಲ್ಲ ಎಂದರು.
ಎಂ.ಡಿ.ಸುಂದರ್ ಅವರು ಬೆಂಗಳೂರಿನಲ್ಲಿ ಹಸಿವಿನಿಂದ ಪ್ರಾಣ ಬಿಟ್ಟ ಪುಣ್ಯಾತ್ಮ. ಥೂ.. ನಮ್ ಜನ್ಮಕ್ಕೆ ಇಂತಹ ಕಥೆಗಳನ್ನು ಕೊಟ್ಟಿರುವ ಬರಗಾರರನ್ನು ನೋಡಿಕೊಂಡಿರುವ ಗತಿ ಇದು. ಇಂತಹ ಬಹರಗಾರರಿಗೆ ನಾವು ಕೊಡುತ್ತಿರುವ ಬೆಲೆ ಇದು. ಕನ್ನಡ ಚಿತ್ರರಂಗ ಉದ್ಧಾರ ಆಗು ಅಂದ್ರೆ ಹೇಗೆ ಆಗುತ್ತದೆ ಹೇಳಿ. ಎಂ.ಡಿ.ಸುಂದರ್ ಅನಾಮಿಕನಾಗಿ ಬೆಂಗಳೂರಿನಲ್ಲಿ ತೀರ ಬಡತನದಿಂದ ತಮ್ಮ ಕೊನೇ ದಿನಗಳನ್ನು ಕಳೆಯುತ್ತಾರೆ. ಇದನ್ನು ಕೇಳಿದರೆ ಮನಸ್ಸಿಗೆ ಎಷ್ಟು ಸಂಕಟ ಆಗುತ್ತದ ಎಂದರು.
ಎಂ.ಡಿ.ಸುಂದರ್ ಅವರು ಬರೆದಿರುವ ಸಿನಿಮಾಗಳು ಯಾವೋ ಆರ್ಡಿನರಿ ಸಿನಿಮಾಗಳಲ್ಲ, ಕನ್ನಡದ ಒಂದೊಂದು ಮುತ್ತುಗಳು ಅವು. ಇಂತಹ ಕಥೆಗಾರರನ್ನು ಹೀಗೆ ನೋಡಿಕೊಂಡ್ರೆ, ಕಥೆಗಳಿಲ್ಲ ಅಂದ್ರೆ ಕನ್ನಡ ಚಿತ್ರರಂಗ ಉದ್ಧಾರ ಆಗೋದಾದ್ರೂ ಹೇಗೆ? ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕನ್ನಡ ಚಿತ್ರರಂಗ 60 ವರ್ಷದ ಒಂದು ಕಾರ್ಯಕ್ರಮ ಮಾಡಿ, ಒಂದು ಪುಸ್ತಕ ಹೊರತಂದಿದ್ದು, ಅದರಲ್ಲಿ ಒಂದೇ ಒಂದು ಸಾಲು ಈ ಪುಣ್ಯಾತ್ಮನ ಬಗ್ಗೆ ಇಲ್ಲ. ಇನ್ನೇನು ನೀವು ನೆನಪಿನ ಕಾಣಿಕೆ ತಂದಿರೋದು?, ಇನ್ನೇನು ನೆನೆಪಿಸಿಕೊಳ್ಳೋದು ಹಿರಿಯರನ್ನ? ಎಂದು ಪ್ರಶ್ನಿಸಿದರು.
ಎಂ.ಡಿ.ಸುಂದರ್ ಅವರ ನೆನಪಿಗಾದ್ರೂ ಕನ್ನಡಿಗರೆಲ್ಲ ಸೇರಿ ಒಂದು ಸಾಲು ಕೊಡೋದಿಕ್ಕೆ ಆಗಲಿಲ್ಲ. ಇಂತಹ ಕಲಾವಿದರು ಎಷ್ಟು ಸಾವಿರ ಸಂಖ್ಯೆಯಲ್ಲಿ ಕನ್ನಡ ನಾಡಿನಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೋ ಅವರ ನಿಟ್ಟುಸಿರಿನ ಶಾಪವೇ ಕನ್ನಡ ಚಿತ್ರರಂಗದ ಮೇಲೆ ಬಿದ್ದಿದೆ. ಅದಕ್ಕೆ ಇದೀಗ ಚಿತ್ರರಂಗ ಡೋಲಾಯ ಮನಸ್ಥಿತಿಗೆ ಬಂದು ನಿಂತಿರೋದು ಎಂದು ಅಸಮಾಧಾನ ಹೊರಹಾಕಿದರು.
ಇಂತಹ ಬರಹಗಾರರು, ಕಲಾವಿದರು ಎಷ್ಟೆಷ್ಟೋ ತಂತ್ರಜ್ಞರು, ಎಲ್ಲೆಲ್ಲಿ ಅದೇನೇನು ಕಥೆ ಮಾಡಿಕೊಂಡಿದ್ದಾರೋ, ಅನಾಮಿಕವಾಗಿ ಬಿದ್ದಿದಾರೋ, ಎಂತೆಂಥ ಸಿನಿಮಾ ಕೊಟ್ಟೋರು ಎಲ್ಲೆಲ್ಲಿ ಇದ್ದಾರೆ ನೋಡಿ. ಗಂಧದ ಗುಡಿ ಕಥೆ ಬರೆದವರು ಹಸಿವಿನಿಂದ ಸಾವನ್ನಪ್ಪಿದ್ರು ಅಂದ್ರೆ, ನಮ್ಮ ಹೊಟ್ಟೆಗೆ ಅನ್ನ ಹೇಗೆ ಸೇರುತ್ತದೆ ಹೇಳು ನೀವು ಎಂದು ಪ್ರಶ್ನಿಸಿದರು.
ಇನ್ನು ಒಂದೇ ಒಂದು ಫೋಟೋ ಇಲ್ಲ ಅವರದ್ದು. ಎಂಥಾ ಪ್ರತಿಭಾವಂತ ಹೇಗೆ ಅನಾಮಿಕವಾಗಿ ತೀರಿಕೊಂಡೋದ್ರು. ಕೃತಜ್ಞತೆ ಅನ್ನೋದೇ ಇಲ್ಲ. ಇಸ್ಕೊಂಡ್‌ಬಿಟ್ವಾ.. ಫಿಕ್ಚರ್ ಮಾಡ್ದ್ವಾ.. ಹೋಯ್ತಾ ಇರು ನೀನು. ಕೊಟ್ರೆ ಕೊಟ್ರು, ಕೊಡ್ದೆ ಇದ್ರೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚೋಣ ಅಂದ್ರೆ ಎಲ್ಲಿಂದ ಮಿಂಚೋದು. ಮೊದಲು ನಮ್ಮನ್ನ ನಾವು ನೋಡಿಕೊಳ್ಳಬೇಕು. ಕಥೆ ಬರಿಯೋರನ್ನ, ತಂತ್ರಜ್ಞರನ್ನ ಚೆನ್ನಾಗಿ ನೋಡಿಕೊಂಡರೇ ಮಾತ್ರ ಕನ್ನಡ ಚಿತ್ರರಂಗ ಬೆಳೆಯೋದು ಎಂದು ಹೇಳಿದರು. ಅಲ್ಲದೆ, ಇದರಲ್ಲಿ ಏನಾದರೂ ತಪ್ಪಿದ್ದರೆ, ಕ್ಷಮಿಸಿ ಅಂತಲೂ ಕೇಳಿಕೊಂಡಿದ್ದಾರೆ.
-
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications