ನನ್ನ ಭಾಷೆಯಲ್ಲೇ ಮಾತನಾಡಬೇಕಾಗುತ್ತೆ: ಚೈತ್ರಾ ಕುಂದಾಪುರ ಗಿಲ್ಲಿಗೆ ವಾರ್ನಿಂಗ್ ಕೊಟ್ಟಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ಅತಿಥಿಯಾಗಿ ಬಂದಿದ್ದ ಕಳೆದ ಸೀಸನ್ ಚೈತ್ರಾ ಕುಂದಾಪುರ ಈಗ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಬಿಗ್‌ಬಾಸ್ ಮನೆಯ ಫೈರ್ ಬ್ರ್ಯಾಂಡ್ ಎಂದು ಕರೆಸಿಕೊಂಡಿದ್ದ ಚೈತ್ರಾ ಇದೀಗ ಗಿಲ್ಲಿಗೆ ಅವಾಜ್ ಹಾಕಿದ್ದಾರೆ. ಇನ್ನು ಈ ವಾರದ ಕಳಪೆಯಾಗಿ ಗಿಲ್ಲಿ ಹೆಸರನ್ನೇ ಅನೇಕರು ಸೂಚಿಸಿದ್ದಾರೆ. ಹೀಗಾಗಿ ಗಿಲ್ಲಿ ಈಗ ಬಿಗ್‌ಬಾಸ್ ಮನೆಮಂದಿಯ ಟಾರ್ಗೆಟ್ ಆಗಿದ್ದಾರೆ.
'ಈ ವಾರದ ಕಳಪೆಯನ್ನ ನಾವು ಗಿಲ್ಲಿಗೆ ಕೊಡ್ತೀವಿ ಎಂದು ಅಶ್ವಿನಿ ಗೌಡ ಹಾಗೂ ರಘು ಹೇಳಿದ್ದಾರೆ. ನಮ್ಮ ವಿಚಾರಗಳೆಲ್ಲ ಗಿಲ್ಲಿಯ ಪ್ರಚಾರವಾಗಿಬಿಟ್ಟಿದೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಕಾಮಿಡಿ ಹಾಗೂ ಪರ್ಸನಲ್ ಸ್ಪೇಸ್ ಮಧ್ಯೆ ಒಂದು ಲೈನ್ ಇರುತ್ತೆ. ಅದನ್ನ ಯಾವತ್ತೂ ದಾಟಬಾರದು' ಎಂದು ರಘು ಆರೋಪ ಮಾಡಿದ್ದಾರೆ.

'ನನ್ನ ಫ್ಯಾಮಿಲಿ ನೋಡ್ತಾ ಇರುತ್ತೆ'
'ವಯಸ್ಸಿನ ವಿಚಾರದಲ್ಲಿ ಹಾಗೆಲ್ಲ ಮಾತನಾಡಬಾರದು, ನನ್ನ ಕುಟುಂಬ ಇದನ್ನೆಲ್ಲ ನೋಡ್ತಾ ಇರುತ್ತೆ, ನೀವು ಎಚ್ಚರಿಕೆ ಇಂದ ಇರಬೇಕು' ಎಂದು ಚೈತ್ರಾ ಕುಂದಾಪುರ ಕೂಡ ಗಿಲ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಆಗ ಗಿಲ್ಲಿ 'ನಿಂಗೆ ವಯಸ್ಸಾಗಿದ್ಯಾ?' ಎಂದು ಕೌಂಟರ್ ಕೊಟ್ಟಿದ್ದಾರೆ. 'ಒಂದು ಸಲ ಹೇಳ್ತೀನಿ, ಎರಡು ಸಲ ಹೇಳ್ತೀನಿ, ಮೂರನೇ ಸಲವೂ ತಿದ್ದಿಕೊಳ್ಳಲಿಲ್ಲ ಅಂದಾಗ ನನ್ನ ಭಾಷೆಯಲ್ಲೇ ನಾನು ಮಾತನಾಡ್ತೀನಿ. ನನಗೆ ಅಂತ ಒಂದು ಭಾಷೆ ಇದೆ, ಅದ್ರಲ್ಲೇ ಹೇಳ್ತೀನಿ' ಎಂದು ಚೈತ್ರಾ ವಾರ್ನಿಂಗ್ ಕೊಟ್ಟಿದ್ದಾರೆ.
'ಆಯ್ತು, ಅದ್ಯಾವ ಭಾಷೇಲಿ ಹೇಳ್ತೀಯೋ ನೋಡ್ತೀನಿ' ಎಂದು ಗಿಲ್ಲಿ ಕೂಡ ತೊಡೆ ತಟ್ಟಿದ್ದಾರೆ. 'ನನ್ ಭಾಷೆ ಇನ್ನೂ ನಿಂಗೆ ಗೊತ್ತಿಲ್ಲ' ಎಂದು ಚೈತ್ರಾ ಮತ್ತೆ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಜಗಳಕ್ಕಿಳಿದ ಗಿಲ್ಲಿ, 'ವಯಸ್ಸಾದವರೆಲ್ಲ ಇಲ್ಲಿಗೆ ಬಂದುಬಿಟ್ಟಿದ್ದೀರಿ' ಎಂದು ಮತ್ತೆ ಗೇಲಿ ಮಾಡಿದ್ದಾರೆ.
'ರಕ್ಷಿತಾ ನೀಡುವ ಕಾರಣ ಸರಿ ಇರಲ್ಲ'
ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ಸ್ಪರ್ಧಿಯನ್ನು ಗುರುತಿಸುವಂತೆ ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಹಲವು ಸ್ಪರ್ಧಿಗಳು ರಕ್ಷಿತಾ ಶೆಟ್ಟಿ ಅವರನ್ನ ಟಾರ್ಗೆಟ್ ಮಾಡಿದ್ದಾರೆ. 'ರಕ್ಷಿತಾ ನಾಮಿನೇಟ್ ಮಾಡುವ ಹೊತ್ತಲ್ಲಿ ನೀಡುವ ಕಾರಣಗಳಿಗೆ ಯಾವುದೇ ಅರ್ಥ ಇರಲಿಲ್ಲ ಎಂದು ಸ್ಪಂದನಾ ಹೇಳಿದ್ದಾರೆ. ಪ್ಯಾನಿಕ್ ಆಗಿ ರಕ್ಷಿತಾ ಏನೇನೋ ಕಾರಣ ಕೊಡ್ತಾರೆ, ಅವಳು ಯೋಚನೆ ಮಾಡಲ್ಲ ಅನಿಸುತ್ತೆ ಎಂದು ಅಭಿಷೇಕ್ ಕೂಡ ಕಾರಣ ನೀಡಿದ್ದಾರೆ. ಇನ್ನು ಕಾವ್ಯ ಕೂಡ ರಕ್ಷಿತಾನ ಚಿಕ್ಕ ಹುಡುಗಿಯಾಗಿ ನಿರ್ಧಾರ ತೆಗೆದುಕೊಳ್ಳಲು ಆಗ್ತಿಲ್ಲವೇನೋ? ಅಥವಾ ಸ್ಮಾರ್ಟ್ ಎನ್ನಬೇಕೋ ತಿಳಿಯುತ್ತಿಲ್ಲ' ಎಂದಿದ್ದಾರೆ.












Click it and Unblock the Notifications