Samantha: ನಟ ನಾಗ ಚೈತನ್ಯ - ನಟಿ ಸಮಂತಾ ಡಿವೋರ್ಸ್‌ಗೆ ಇದೇ ಕಾರಣ; ಶಾಕಿಂಗ್ ನ್ಯೂಸ್!
ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಈಗಾಗಲೇ ಡಿವೋರ್ಸ್ ಆಗಿ ವರ್ಷಗಳೇ ಕಳೆದಿವೆ. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಇದ್ದಾರೆ. ಈಗಾಗಲೇ ನಾಗ ಚೈತನ್ಯ ಅವರು ಮತ್ತೊಂದು ಮದುವೆಗೆ ಸಿದ್ಧರಾಗಿದ್ದಾರೆ. ಸಮಂತಾ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಇವರಿಬ್ಬರ ಡಿವೋರ್ಸ್ ವಿಷಯ ಬೇರೆ ಬೇರೆ ಕಾರಣಕ್ಕೆ ಹಾಗೂ ಬೇರೆ ರೀತಿಯಲ್ಲಿ, ಕೆಟ್ಟ ವಿಷಯಗಳಿಗೆ ಚರ್ಚೆಯಾಗುವುದು ಇಲ್ಲಿಯ ವರೆಗೆ ನಿಂತಿಲ್ಲ. ಇದೀಗ ಇವರಿಬ್ಬರ ಡಿವೋರ್ಸ್‌ಗೆ ತೆಲಂಗಾಣದ ಪ್ರಭಾವಿ ರಾಜಕಾರಣಿಯೇ ಕಾರಣ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಪ್ರೀತಿಸಿ, ಅದ್ಧೂರಿಯಾಗಿ ಮದುವೆಯಾಗಿದ್ದರು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಸಾಧ್ಯವಾಗದೆ ಇದ್ದಿದ್ದರಿಂದ ಈ ಜೋಡಿ ಪರಸ್ಪರ ಒಪ್ಪಿಗೆ ಹಾಗೂ ಗೌರವದಿಂದ ದೂರವಾಗಿತ್ತು. ವಿಚ್ಛೇದನ ಪಡೆದುಕೊಂಡ ನಂತರವೂ ಈ ಜೋಡಿ ಪರಸ್ಪರರ ಬಗ್ಗೆ ಒಂದು ದಿನವೂ ಮಾಧ್ಯಮಗಳ ಮುಂದೆ ಬಂದು ಕೆಟ್ಟದಾಗಿ ಮಾತನಾಡಿಲ್ಲ. ಪರಸ್ಪರರನ್ನು ವಿಚ್ಛೇದನದ ನಂತರವೂ ಗೌರವಿಸುವುದಾಗಿಯೇ ಈ ಜೋಡಿ ಹೇಳಿಕೊಂಡಿದೆ. ಆದರೆ, ಇವರ ವಿಷಯವನ್ನು ಶಾಸ್ತ್ರ ಹೇಳುವವರಿಂದ ರಾಜಕಾರಣಿಗಳ ವರೆಗೆ ಹಲವರು ಪ್ರಸ್ತಾಪಿಸಿ, ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರಿಗೆ ಹಾಗೂ ಅವರ ಕುಟುಂಬದವರಿಗೆ ಮುಜುಗರವನ್ನು ಉಂಟು ಮಾಡಿದ್ದಾರೆ. ಇದೀಗ ತೆಲಂಗಾಣದ ಅರಣ್ಯ ಸಚಿವೆ ಕೊಂಡ ಸುರೇಖಾ ಅವರು ಶಾಂಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.

ತೆಲಂಗಾಣದಲ್ಲಿ ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದೆ. ಈ ಹಿಂದೆ ಅಂದರೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾದಾಗಿನಿಂದಲೂ ಟಿಆರ್‌ಎಸ್ ಪಕ್ಷವೇ ಅಧಿಕಾರ ನಡೆಸಿತ್ತು. ಇದೀಗ ಟಿಆರ್‌ಎಸ್ ಪಕ್ಷದ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮಗನ ಹೆಸರು ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರು ಡಿವೋರ್ಸ್‌ನೊಂದಿಗೆ ತಳಕು ಹಾಕಿಕೊಂಡಿದೆ. ಇದಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗುತ್ತಿದೆ. ಟಿಆರ್‌ಎಸ್‌ನ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಮಗ, ಮಾಜಿ ಸಚಿವ ಕೆ.ಟಿ ರಾಮಾ ರಾವ್ (ಕೆಟಿಆರ್) ನಿಂದಲೇ ನಾಗ ಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನವಾಗಿದೆ ಎಂದು ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ.
ಸಚಿವೆ ಬಳಸಿರುವ ಪದಗಳಿಗೆ ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವಿರೋಧ ವ್ಯಕ್ತವಾಗಿದೆ. ತೆಲುಗು ಚಿತ್ರರಂಗದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ನಾಗಾರ್ಜುನ ಅವರು ಸಹ ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ನಾಗ ಚೈತನ್ಯ ಹಾಗೂ ಸಮಂತಾ ಅವರ ಡಿವೋರ್ಸ್ ಆಗಿದ್ದು ಕೆಟಿಆರ್ ನಿಂದಲೇ. ಕೆಟಿಆರ್ ತೆಲುಗು ನಟಿಯರ ಮೊಬೈಲ್ ಫೋನ್‌ಗಳನ್ನು ಕದ್ದಾಲಿಸುತ್ತಿದ್ದ. ಅಲ್ಲದೇ ಹಲವು ನಟಿಯರನ್ನು ಮಾದಕ ವ್ಯಸನಕ್ಕೆ ಒಳಪಡಿಸಿದ್ದಾನೆ. ಕೆಟಿಆರ್ ಕಾಟ ತಾಳಲಾರದೆ ಹಲವು ಪ್ರಮುಖ ನಟಿಯರು ಚಿತ್ರರಂಗವನ್ನೇ ಬಿಟ್ಟಿದ್ದಾರೆ. ತೆಲುಗು ಚಿತ್ರರಂಗದ ಪ್ರಮುಖರಿಗೆ ಈ ವಿಷಯ ಗೊತ್ತಿದೆ ಎಂದೂ ಸಚಿವೆ ಹೇಳಿದ್ದಾರೆ.

ನಟ ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಸೆಂಟರ್ ಉಳಿಸಿಕೊಳ್ಳಬೇಕಾದರೆ (ಕೆಡವಬಾರದು ಎಂದಾದರೆ), ನಟಿ ಸಮಂತಾ ಅವರನ್ನು ನನ್ನ ಬಳಿ ಕಳಿಸು ಎಂದು ಕೆಟಿಆರ್ ನಾಗಾರ್ಜುನಗೆ ಹೇಳಿದ್ದ. ನಟ ನಾಗಾರ್ಜುನ ಸಹ ಸಮಂತಾಗೆ ಹೋಗು ಎಂದಿದ್ದರು. ಸಮಂತಾ ಅವರು ಇದಕ್ಕೆ ಒಪ್ಪಿಕೊಂಡಿರಲಿಲ್ಲ. ನಮ್ಮ ಮಾತು ಕೇಳುವುದಾದರೆ, ನೀನು ನಮ್ಮ ಮನೆಯಲ್ಲಿ ಇರಬಹುದು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ನಾರ್ಗಜುನ ಕುಟುಂಬದವರು ಹೇಳಿದ್ದರಿಂದ ನಾಗ ಚೈತನ್ಯ - ಸಮಂತಾ ಡಿವೋರ್ಸ್ ಆಗಿದೆ ಎಂದು ಸಚಿವೆ ಹೇಳಿದ್ದಾರೆ. ಈ ಹೇಳಿಕೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಟ್ವೀಟ್ ಮಾಡಿ ನಾಗಾರ್ಜುನ ಆಕ್ರೋಶ
ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾಗ ಚೈತನ್ಯ ಅವರ ತಂದೆ, ನಟ ನಾಗಾರ್ಜುನ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ನಾಗಾರ್ಜುನ ಅವರು, ಕೊಂಡ ಸುರೇಖಾ ಅವರ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತಿದ್ದೇನೆ. ಪ್ಲೀಸ್ ರಾಜಕೀಯದಿಂದ ದೂರವಿರುವ ಸಿನಿಮಾದವರನ್ನು ನಿಮ್ಮ ವಿರೋಧಿಗಳನ್ನು ಟೀಕಿಸುವ ಉದ್ದೇಶಕ್ಕೆ ಬಳಸಬೇಡಿ.
గౌరవనీయ మంత్రివర్యులు శ్రీమతి కొండా సురేఖ గారి వ్యాఖ్యలని తీవ్రంగా ఖండిస్తున్నాను. రాజకీయాలకు దూరంగా ఉండే సినీ ప్రముఖుల జీవితాలని, మీ ప్రత్యర్ధులని విమర్శించేందుకు వాడుకోకండి. దయచేసి సాటి మనుషుల వ్యక్తిగత విషయాలని గౌరవించండి. బాధ్యత గలిగిన పదవి లో ఉన్న మహిళగా మీరు చేసిన…
— Nagarjuna Akkineni (@iamnagarjuna) October 2, 2024
ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು, ನಮ್ಮ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣವಾಗಿ ಅಸಂಬದ್ಧವಾಗಿವೆ ಎಂದು ಕಿಡಿಕಾರಿದ್ದಾರೆ.












Click it and Unblock the Notifications