Darshan Thoogudeepa: ನಟ ದರ್ಶನ್ ಯಾವುದೇ ರಿಯಾಲಿಟಿ ಶೋಗೆ ಹೋಗಲ್ಲ ಯಾಕೆ ಗೊತ್ತೇ?
ಇತ್ತೀಚಿಗೆ ಮನೋರಂಜನಾ ಕ್ಷೇತ್ರದ ಯಶಸ್ಸಿನಲ್ಲಿ ಸಿನಿಮಾಗಳಷ್ಟೇ ಕಿರುತೆರೆ ಕೂಡ ಸಿಂಹಪಾಲು ಪಡೆದುಕೊಂಡಿದೆ. ಕಿರುತೆರೆಯ ಕಾರ್ಯಕ್ರಮಗಳು, ಧಾರಾವಾಹಿಗಳು ಕೋಟ್ಯಂತರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಹೀಗಾಗಿ ಅನೇಕ ಸ್ಟಾರ್ ನಟ-ನಟಿಯರು ಇತ್ತೀಚಿಗೆ ಹೆಚ್ಚಾಗಿ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಕೆಲವೊಬ್ಬರು ಕಾರ್ಯಕ್ರಮದ ತೀರ್ಪುಗಾರರಾಗಿ ಬಂದರೆ ಇನ್ನೂ ಕೆಲವರು ತಮ್ಮ ಸಿನಿಮಾ ಪ್ರಮೋಷನ್‌ಗಳಿಗಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಒಂದು ವಿಚಾರವನ್ನು ನೀವು ಗಮನಿಸಿರಬಹುದು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವುದು ತೀರಾ ಕಡಿಮೆ.

ಹೆಚ್ಚೆಂದರೆ ಎರಡು ಮೂರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ದರ್ಶನ್ ಕಾಣಿಸಿಕೊಂಡಿರಬಹುದು. ಮೊದಲೆಲ್ಲಾ ತಮ್ಮ ಆತ್ಮೀಯರಿಗಾಗಿ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಕಳೆದೆರಡು ಮೂರು ವರ್ಷಗಳಲ್ಲಿ ಕಿರುತೆರೆ ಕಾರ್ಯಕ್ರಮ, ರಿಯಾಲಿಟಿ ಶೋಗಳಿಗೆ ಗುಡ್ ಬೈ ಹೇಳಿದಂತೆ ಕಾಣುತ್ತಿದೆ.
ನಟ ದರ್ಶನ್ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಯಾಕೆ ಭಾಗಿಯಾಗುವುದಿಲ್ಲ ಎನ್ನುವುದರ ಬಗ್ಗೆ ಅವರ ಆಪ್ತ ಅಭಿಮಾನಿ, ಹಾಡುಗಾರ ಸುಪ್ರೀತ್ ಗಾಂಧಾರ ಮಾತನಾಡಿದ್ದಾರೆ. 'ರಿಯಾಲಿಟಿ ಶೋ ಅವರು ಅವಕಾಶ ಕೊಡದಿದ್ದಕ್ಕೆ ನನಗೆ ದರ್ಶನ್ ಬಾಸ್ ಸಿಕ್ಕಿದರು. ಅವರಿಗಿಂತ ದೊಡ್ಡವರು ಯಾರು ಯಾರಿದ್ದಾರೆ. ಒಂದು ಶೋಗೆ ದರ್ಶನ್ ಸರ್ ಅವರೇ ಮಾತನಾಡಿದ್ದರು. ಯಾವುದಾರೂ ರಿಯಾಲಿಟಿ ಶೋಗೆ ಅತಿಥಿಯಾಗಿ ಕರೆದರೆ ದರ್ಶನ್ ಸರ್ ಹೋಗುವುದಿಲ್ಲ. ಯಾಕೆ ಹೇ,ಳಿ ದರ್ಶನ್ ಸರ್‌ಗೆ ಅದೆಲ್ಲಾ ಇಷ್ಟವಾಗುವುದಿಲ್ಲ. ಅವರೇ ಹೇಳಿದ್ದಾರೆ ಕಿವಿಗೆ ಏನೋ ಒಂದು ಕೊಡುತ್ತಾರೆ. ಅವರು ಹೇಳಿಕೊಟ್ಟ ಹಾಗೆ ನಾವು ಹೇಳಬೇಕು. ಆ ಕೆಲಸ ನಮಗೆ ಯಾಕೆ ಬೇಕು ಅಂತಾ ಅವರು ಹೋಗಲ್ಲ ಅಂತಾ ಅವರೇ ಹೇಳಿದ್ದಾರೆ' ಎಂದು ಸುಪ್ರೀತ್ ಗಾಂಧಾರ ಹೇಳಿದ್ದಾರೆ.

ಇನ್ನು ರಿಯಾಲಿಟಿ ಶೋಗಳು ಹೊಸ ಕಲಾವಿದರಿಗೆ ಅವಕಾಶ ಕೊಡುವ ಬಗ್ಗೆ ಮಾತನಾಡಿದ ಅವರು, 'ಹೊಸ ಕಲಾವಿದರು ಕಷ್ಟಪಡುತ್ತಿರುತ್ತಾರೆ. ಅಂತವರನ್ನು ಕರೆದು ಅವಕಾಶ ಕೊಡಬೇಕು. ನಾವು ಕಷ್ಟದಲ್ಲಿದ್ದೆವು. ನಮಗೂ ಅವಕಾಶ ಕೊಡಬಹುದಿತ್ತು. ಗೊಂಬೆಗಳ ತರ ಕರೆದು ಕಳುಹಿಸಿದರೆ ನಮಗೂ ಬೇಜಾರಾಗುತ್ತದೆ. ನಾವು ಎಷ್ಟೋ ಕನಸುಗಳನ್ನು ಇಟ್ಟುಕೊಂಡು ಬಂದಿರುತ್ತೇವೆ. ನಮ್ಮ ಕನಸುಗಳನ್ನು ನುಚ್ಚುನೂರು ಮಾಡಿದರೆ ನಮಗೂ ಬೇಜಾರಾಗುತ್ತದೆ. ನೋವಾಗುತ್ತದೆ' ಎಂದು ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಾಡುಗಾರ ಸುಪ್ರೀತ್ ಗಾಂಧಾರ ರಿಯಾಲಿಟಿ ಶೋಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಸುಪ್ರೀತ್ ಗಾಂಧಾರ ನಟ ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸಾಂಗ್‌ವೊಂದನ್ನು ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications