Darshan: ಎರಡು ವಾರ ಆದ್ರೂ ದರ್ಶನ್ ಶಸ್ತ್ರ ಚಿಕಿತ್ಸೆ ಮಾಡಿಸಿಲ್ಲ ಯಾಕೆ! ಡಿ.ಬಾಸ್ ಪ್ಲಾನ್ ಏನು
ಬೆಂಗಳೂರು, ನವೆಂಬರ್ 17: ಸಿನಿಮಾದಲ್ಲಿ 'ಡೆವಿಲ್' ಆಗಬೇಕಿದ್ದ ನಟ ದರ್ಶನ್ ನಿಜ ಜೀವನದಲ್ಲೂ ಡೆವಿಲ್ ಆಗಿ, ಹತ್ಯೆ ಆರೋಪದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವುದು ಎಲ್ಲರಿಗೂ ಗೊತ್ತಿದೆ. ಆರು ವಾರಗಳ ಜಾಮೀನು ಪಡೆದು ಬಳ್ಳಾರಿಯಿಂದ ಬಿಡುಗಡೆ ಆಗಿರುವ ನಟ ದರ್ಶನ್ ತೂಗುದೀಪ್ ಅವರು ಇಷ್ಟು ದಿನವಾದರೂ ಫಿಜಿಯೋಥೆರಪಿ ಚಿಕಿತ್ಸೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅಸಲಿ ಸಮಸ್ಯೆಗೆ ಪರಿಹಾರವನ್ನೇ ಪಡೆದಿಲ್ಲ ಯಾಕೆ ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಗಾದರೆ ಡಿ ಬಾಸ್ ಪ್ಲಾನ್ ಏನು?, ಠಕ್ಕರ್ ಕೊಡ್ತಾರಾ ಪೊಲೀಸರು?
ಅಭಿಮಾನಿಗಳ ಪಾಲಿಗೆ ಡಿ.ಬಾಸ್ ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದು ಫ್ಯಾನ್‌ಗೆ ಖುಷಿ ನೀಡಿದೆ. ಆದರೆ ಈ ಖುಷಿ ಹೆಚ್ಚು ದಿನ ಇರುವುದಿಲ್ಲ ಎನ್ನಲಾಗಿದೆ. ದರ್ಶನ್‌ಗೆ ಜಾಮೀನು ಸಿಕ್ಕಿದ್ದೆ ಅವರಿಗೆ ಬೆನ್ನು ನೋವು ಕಾಡುತ್ತಿದ್ದು, ಅದಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ಅವರ ಪರ ವಕೀಲರು ವಾದ ಮಾಡಿದ್ದರು.

ಆರೋಗ್ಯ, ಚಿಕಿತ್ಸೆ ಪಡೆಯುವುದು ವಿಚಾರಣಾಧೀನ ಕೈದಿ ಹಕ್ಕೆಂದು ವಾದಿಸಿದ್ದರು. ಇದೆಲ್ಲ ವಾದ ವಿವಾದ ಬಳಿಕ ಕೋರ್ಟ್ ದರ್ಶನ್‌ಗೆ 06 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತು. ಕೂಡಲೇ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾಮೀನು ಸಿಕ್ಕು 02 ಆದರೂ ಸಹಿತ ಈವರೆಗೆ ಸರ್ಜರಿ ಮಾಡಿಸಿಕೊಳ್ಳುತ್ತಿಲ್ಲ. ಬರೀ ಫಿಜಿಯೋಥೆರಪಿ ಮಾತ್ರವೇ ದರ್ಶನ್‌ಗೆ ನೀಡಲಾಗುತ್ತದೆ. ದರ್ಶನ್ ಸದ್ಯ ಸರ್ಜರಿಗೆ ಒಪ್ಪಿಲ್ಲ ಎನ್ನಲಾಗಿದೆ. ಈ ಮೂಲಕ ಅವರು ಇನ್ನಷ್ಟು ದಿನ ಹೊರಗುಳಿಯಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಇದೆಲ್ಲ ಅರಿತ ರಾಜ್ಯ ಪೊಲೀಸರು ನಟ ದರ್ಶನ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೂಲಕ ದರ್ಶನ್‌ಗೆ ಸಂಕಷ್ಟ ತಂದೊಡ್ಡಲು ಮುಂದಾಗಿದ್ದಾರೆ. ಅನಾರೋಗ್ಯ ಕಾರಣದಿಂದ ಜಾಮೀನು ಪಡೆದು ಶಸ್ತ್ರಚಿಕಿತ್ಸೆಗೆ ಮುಂದಾಗದಿರುವುದನ್ನೇ ಅರ್ಜಿಯಲ್ಲಿ ಪೊಲೀಸರು ಹೈಲೈಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ವಿಚಾರಣೆ ನಡೆದರೆ, ದರ್ಶನ್ ಜಾಮೀನು ರದ್ದಾಗಬಹುದು. ಇಲ್ಲವೇ ಸರ್ಜರಿಗೆ ಕಾಲಾವಕಾಶ ಕೊಟ್ಟು, ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ.
ಬಳ್ಳಾರಿ ಜೈಲಿನಲ್ಲಿದ್ದಾಗೇ ನಟ ದರ್ಶನ್‌ಗೆ ಆರಂಭದಲ್ಲಿಯೇ ಚಿಕಿತ್ಸೆ ಕೊಡಿಸಲು ಮುಂದಾದಾಗ ಅವರು ಅದಕ್ಕೆ ನಿರಾಕರಿಸಿದ್ದರು. ಬರು ಬರುತ್ತಾ ಬೆನ್ನು ನೋವು ಹೆಚ್ಚಾಗತೊಡಗಿತು. ಕೊನೆಗೆ ವಿಜಯಲಕ್ಷ್ಮೀ ಅವರ ಮಾತಿಗೆ ಒಪ್ಪಿ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದರು.
ಈಗಲೂ ಸಹ ಶಸ್ತ್ರ ಚಿಕಿತ್ಡೆ ಪಡೆದರೆ, ಬೇಗ ಬಳ್ಳಾರಿ ಜೈಲಿಗೆ ಮತ್ತೆ ಹೋಗಬೇಕಾಗುತ್ತದೆ. ಅದ ಬದಲಿಗೆ ಹೀಗೆ ದಿನ ದೂಡಿದರಾಯಿತು. ನೋವು ಇದೆ ಎಂದುಕೊಂಡು, ಮತ್ತೆ ಜಾಮೀನು ಅವಧಿ ವಿಸ್ತರಣೆ ಮಾಡಿಕೊಂಡು ಹೊರಗೆ ಉಳಿದರಾಯಿತು ಎಂದು ದರ್ಶನ್ ಪ್ಲಾನ್ ಮಾಡಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ.
ಆದರೆ ಇದಕ್ಕೆಲ್ಲ ಠಕ್ಕರ್ ಕೊಡಲು ಬೆಂಗಳೂರು ಪೊಲೀಸರು ಸರ್ಕಾರದಿಂದ ಒಪ್ಪಿಗೆ ಪಡೆದು ಸುಪ್ರೀಂ ಕೋರ್ಟ್‌ಗೆ ತೆರಳಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಆರೋಪಿಯಲ್ಲಿ ಒಬ್ಬರಾದ ನಟ ದರ್ಶನ್ ಜಾಮೀನು ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.












Click it and Unblock the Notifications