Amrutha Ramamoorthi: ಆಸೆ ಧಾರಾವಾಹಿ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆ ಸೇರಿದ್ಯಾಕೆ? ಈಗ ಹೇಗಿದ್ದಾರೆ?

ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ, ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ನಟಿಸಿದ್ದ ಸದ್ಯ ಆಸೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿರುತೆರೆಯ ಜನಪ್ರಿಯ ನಟಿ ಅಮೃತಾ ರಾಮಮೂರ್ತಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ಬೆಡ್‌ನಿಂದಲೇ ಫೋಟೋ ಹಂಚಿಕೊಂಡಿದ್ದ ನಟಿ ಅಮೃತಾ ರಾಮಮೂರ್ತಿ ತಮ್ಮ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರು.

ನಟಿ ಅಮೃತಾ ರಾಮಮೂರ್ತಿ ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಅಮೃತಾ, ಹೆಣ್ಣು ಮಕ್ಕಳಿಗೆ ಹುಷಾರಾಗಿರಿ ಎಂದು ಎಚ್ಚರಿಕೆ ಸಹ ನೀಡಿದ್ದರು. ಯಾಕೆಂದರೆ ನಟಿ ಅಮೃತಾ ರಾಮಮೂರ್ತಿ ಯುಟಿಐ ಅಂದರೆ ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್‌ನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಟಿ ಅಮೃತಾಗೆ ಮೂತ್ರ ನಾಳದ ಸೋಂಕು ಕಾಣಿಸಿಕೊಂಡಿದೆ.

Why Aase Serial Actress Amrutha Ramamoorthi Hospitalized

'ನಮಸ್ಕಾರ ಎಲ್ಲರಿಗೂ. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ. ಏನಾಗಿದೆ ಏನಾಯ್ತು ಅಂತ. ನಂಗೆ ಸೀವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ. ಎಕ್ಸ್​ಟ್ರೀಮ್ ಲೆವೆಲ್​ಗೆ ಹೋಗಿದೆ ಇನ್ಫೆಕ್ಷನ್. ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಣು ಮಕ್ಕಳೇ ಹುಷಾರಾಗಿರಿ. ಸಾರ್ವಜನಿಕ ಶೌಚಾಲಯ ಬಳಕೆ ಮಾಡುವಾಗ ತುಂಬಾ ಹುಷಾರಾಗಿರಿ. ನಮಗೆ ವಿಧಿಯಿಲ್ಲ. ಶೂಟಿಂಗ್ ಸೆಟ್​​ನಲ್ಲಿ ರೆಸ್ಟ್​ರೂಮ್ ಯೂಸ್ ಮಾಡಬೇಕಾಗುತ್ತದೆ. ನಮ್ಮ ಶೂಟಿಂಗ್‌ನವರು ಕ್ಯಾರವಾನ್ ತರಿಸಿದ್ದರು. ಹೈಜೀನ್ ನೋಡಿಕೊಳ್ಳಬೇಕಾದ್ದು ತುಂಬಾ ಮುಖ್ಯ ಎಂದು ತಿಳಿಸಿದ್ದರು.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಅಮೃತಾ ರಾಮಮೂರ್ತಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ನಮ್ಮ ಮೆಚ್ಚಿನ ನಟಿ ಈಗ ಹೇಗಿದ್ದಾರೆ? ಅವರ ಆರೋಗ್ಯದ ಸ್ಥಿತಿ ಈಗ ಹೇಗಿದೆ? ಮುಂದೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರಾ? ಎನ್ನುವ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಿದ್ದು, ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

Why Aase Serial Actress Amrutha Ramamoorthi Hospitalized

ನಟಿ ಅಮೃತಾ ರಾಮಮೂರ್ತಿ ಅವರ ಆರೋಗ್ಯ ಚೇತರಿಸಿಕೊಂಡಿದ್ದು, ಹುಷಾರಾಗಿ ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ತಮ್ಮ ಆಸೆ ಶೂಟಿಂಗ್‌ ಸೆಟ್‌ಗೆ ಮರಳಿರುವ ಅಮೃತಾ ರಾಮಮೂರ್ತಿ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನು ಮುಂದುವರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮೂತ್ರ ನಾಳದ ಸೋಂಕು ಹೆಚ್ಚಾಗುತ್ತಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಈ ವಿಚಾರಕ್ಕೆ ಮುಚ್ಚುಮರೆ ಮಾಡದೇ ಕೂಡಲೇ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ ಇದರಿಂದ ಮುಂದೆ ಮೂತ್ರ ನಾಳ ಸಂಬಂಧ ಇತರ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ಮುನ್ನ ಎಚ್ಚರಿಕೆಯಿಂದ ಇರಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+