ಚಂದನ್ ಶೆಟ್ಟಿ-ನಿವೇದಿತಾ ಗೌಡ ಮಧ್ಯ ಹುಳಿ ಹಿಂಡಿದ್ಯಾರು?: ಪ್ರಥಮ್‌ ಬಿಚ್ಚಿಟ್ಟ ಸತ್ಯವೇನು?

ಕನ್ನಡ ಮನೋರಂಜನಾ ಲೋಕದ ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ನಿನ್ನೆ ಜೂನ್‌ 07ರ ಸಂಜೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ವಿಚಾರ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಮೊದಲು ಇದು ಸುಳ್ಳು ಸುದ್ದಿ ಎನ್ನಲಾಗಿತ್ತು. ಬಳಿಕ ಸಿನಿಮಾ ಪ್ರಮೋಷನ್‌ಗೆ ಹೀಗೆ ಮಾಡಿರಬಹುದು ಎಂದುಕೊಳ್ಳಲಾಗಿತ್ತು. ಆದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ದಿಢೀರ್‌ ಶಾಕ್‌ ಕೊಟ್ಟಿದ್ದು, ತಾವು ಪರಸ್ಪರ ಒಪ್ಪಿ ದೂರಾಗುತ್ತಿರುವ ಬಗ್ಗೆ ಅಧೀಕೃತವಾಗಿ ತಿಳಿಸಿದ್ದಾರೆ.

Who Are The Reason For Chandan Shetty And Niveditha Gowda Divorce

ಚಂದನ್ ಹಾಗೂ ನಿವೇದಿತಾ ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಇಬ್ಬರೂ ಮತ್ತೆ ಕೋರ್ಟ್‌ಗೆ ಹಾಜರಾಗಿದ್ದು, ಕೋರ್ಟ್ ವಿಚ್ಛೇದನವನ್ನು ಕೂಡ ಮಂಜೂರು ಮಾಡಿದೆ. ಬಳಿಕ ಇಬ್ಬರೂ ಕೈ ಕೈ ಹಿಡಿದುಕೊಂಡು ಕೋರ್ಟ್‌ನಿಂದ ಹೊರ ನಡೆದಿದ್ದಾರೆ.

ಕಳೆದ ಒಂದು ವಾರದ ಹಿಂದೆ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ, ವಿಚ್ಛೇದನ ಬಳಿಕವೂ ಕೈ ಕೈ ಹಿಡಿದುಕೊಂಡು ಕೋರ್ಟ್‌ನಿಂದ ಹೊರ ಬಂದ ಜೋಡಿ ದೂರಾಗುವ ನಿರ್ಧಾರ ಯಾಕೆ ಮಾಡಿದರು. ಇಬ್ಬರ ಮಧ್ಯ ಬಿರುಕು ತಂದವರ್ಯಾರು ಎನ್ನುವುದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Who Are The Reason For Chandan Shetty And Niveditha Gowda Divorce

ಈ ಬಗ್ಗೆ ಚಂದನ್ ಶೆಟ್ಟಿ ಆಪ್ತ ಬಿಗ್‌ಬಾಸ್‌ ವಿನ್ನರ್‌ ಪ್ರಥಮ್‌ ಮಾತನಾಡಿದ್ದಾರೆ. 'ಈಗಿನ ಕಾಲದಲ್ಲಿ ಬದುಕೋದು ತುಂಬಾ ಕಷ್ಟ. ಲೈಫ್ ಸರಿ ಇಲ್ಲ. ಹೋದ ವಾರ ಸರಿ ಇದ್ದವರು ಈಗ ಹೀಗಾಗಿದೆ ಅಂದರೆ ಮಧ್ಯ ಯಾರೋ ಕೈ ಆಡಿಸಿರುತ್ತಾರೆ. ಯಾರೋ ಮಧ್ಯ ಬರದೇ ಹೀಗೆ ಆಗಿಲ್ಲ. ಯಾರೋ ಕಿವಿ ಚುಚ್ಚುವವರು ಇರುತ್ತಾರೆ. ಅವನು ಹಂಗೆ..ಇವಳು ಹಿಂಗೆ ಎನ್ನುವವರು ಇರುತ್ತಾರೆ. ಈ ರೀತಿ ಮಾತನಾಡಿ ಅವರಿಬ್ಬರ ಮಧ್ಯ ಬಿರುಕು ತಂದಿದ್ದಾರೆ ಎನ್ನುವುದು ಪ್ರಥಮ್‌ ಅವರ ಅಭಿಪ್ರಾಯವಾಗಿದೆ.

ಇನ್ನು ಈ ರೀತಿಯಾಗಿ ಡಿಸ್ಟರ್ಬ್ ಆಗಬೇಡಿ. ನೀವಿಬ್ಬರು ನಮ್ಮವರು. ನಾನು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಗೆ ಕೇಳಿ ಕೊಳ್ಳುತ್ತೇನೆ. ನೀವು ಕೆಟ್ಟರೆ, ಜೀವನಕ್ಕೆ ತೊಂದರೆ ಮಾಡಿಕೊಂಡರೆ ಸಂತೋಷಪಡುವರು ಸಾವರಿರಾರು ಜನ ಇದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇವನಿಗೆ ಹೀಗೆ ಆಗಬೇಕಿತ್ತು. ಅವಳಿಗೆ ಹಾಗೇ ಆಗಬೇಕಿತ್ತು ಎಂದು ಖುಷಿ ಪಡುವವರಿದ್ದಾರೆ. ಜನ ಒಳ್ಳೆಯವರಿಲ್ಲ ಅರ್ಥ ಮಾಡಿಕೊಳ್ಳಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+