ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆಯಾಗಲು ‘ಮುದ್ದೆ’ ಕಾರಣ?
ಚಂದನ್ ಶೆಟ್ಟಿ & ನಿವೇದಿತಾ ಗೌಡ ಬೇರೆ ಬೇರೆ ಆಗಲು ಮುಂದಾದ ಸುದ್ದಿ ಈಗ ಫುಲ್ ಹವಾ ಎಬ್ಬಿಸಿದೆ. ಅದ್ರಲ್ಲೂ ಚಂದನ್ ಶೆಟ್ಟಿ & ನಿವೇದಿತಾ ಗೌಡ ಅಭಿಮಾನಿಗಳಿಗೆ ಈ ಸುದ್ದಿ ದಿಢೀರ್ 1000 ಮೆಗಾ ವ್ಯಾಟ್ ಶಾಕ್ ಕೂಡ ಕೊಟ್ಟಿದೆ. ಇಂತಹ ಸಮಯದಲ್ಲೇ ಚಂದನ್ ಶೆಟ್ಟಿ & ನಿವೇದಿತಾ ಗೌಡ ಮದುವೆ ಮುರಿದು ಬೀಳಲು ಕಾರಣ ಏನು? ಅನ್ನೋ ಪ್ರಶ್ನೆಗೆ ಸ್ಫೋಟಕ ಉತ್ತರವನ್ನ ಇವರು ಕೊಡುತ್ತಿದ್ದಾರೆ!
ಚಂದನ್ ಶೆಟ್ಟಿ & ನಿವೇದಿತಾ ಗೌಡ ಇಬ್ಬರೂ ಒಬ್ಬರನ್ನ ಮತ್ತೊಬ್ಬರು ತುಂಬಾ ಇಷ್ಟಪಟ್ಟು ಮದುವೆ ಆಗಿದ್ದರು ಮತ್ತು ಈ ಇಬ್ಬರ ಪ್ರೀತಿ ಕೋಟಿ ಕೋಟಿ ಜನರ ಹೊಟ್ಟೆ ಉರಿಸಿತ್ತು ಕೂಡ. ಆದರೆ ಈಗ ಆಗಿರುವುದೆಲ್ಲಾ ಉಲ್ಟಾ. ಅದು ಏನೆಂದರೆ ಇಬ್ಬರ ನಡುವೆ ಕೋಪ ಬಂದಿದೆ, ಪ್ರೀತಿ ಸದ್ದು ಮಾಡದೆ ಸತ್ತು ಹೋಗಿದೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ವಿಚ್ಛೇದನ ಅಂದ್ರೆ ತಮ್ಮ ಮದುವೆಯ ಬಂಧನ ಮುರಿಯಲು ಮುಂದಾಗಿದ್ದಾರೆ. ಹೀಗಿದ್ದಾಗ ಇದೇ ಸಮಯದಲ್ಲಿ ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್ ಪಡೆಯಲು ಇದೇ ಕಾರಣ ಅಂತಿದ್ದಾರೆ ಇಲ್ಲಿ ಕೆಲವರು!

ಮನೆ ಮುರಿದ 'ಮುದ್ದೆ' ವಿಡಿಯೋ?
ಹೌದು, ಕೆಲ ತಿಂಗಳ ಹಿಂದೆ ಇದೇ ನಿವೇದಿತಾ ಗೌಡ ಅವರು 'ರಾಗಿ ಮುದ್ದೆ' ಮಾಡುವ ಬಗ್ಗೆ ವಿಡಿಯೋ ಹಾಕಿದ್ದರು. ಆದರೆ, ಅದೇ ವಿಡಿಯೋ ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಈ 'ರಾಗಿ ಮುದ್ದೆ' ಮಾಡುವ ವಿಡಿಯೋ ಕಾರಣಕ್ಕಾಗಿ ಇಬ್ಬರು ಡಿವೋರ್ಸ್ ಪಡೆಯುತ್ತಿದ್ದಾರೆ ಅಂತಾ ಕೆಲವು ಕಿಡಿಗೇಡಿಗಳು ಇದೀಗ ಸುಳ್ಳು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಈ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕೂಡ ದಾರಿ ಮಾಡಿಕೊಟ್ಟಿದೆ. ಹಾಗೇ ಕಿರಿಕ್ ಮೂಡುವಂತೆ ಕೂಡ ಮಾಡಿದೆ.
2019ರಲ್ಲಿ ಭರ್ಜರಿ ಪ್ರಪೋಸ್!
ಅಷ್ಟಕ್ಕೂ ಚಂದನ್ ಶೆಟ್ಟಿ & ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5 ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಮದುವೆ ಕೂಡ ಆಗಿದ್ದರು. ರಿಯಾಲಿಟಿ ಶೋನಿಂದಲೇ ಪ್ರೀತಿ ಶುರುವಾಗಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಯಲ್ಲೇ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಆಗ ಸರ್ಕಾರ ಇವರ ಮೇಲೆ ನಿಷೇಧ ಕೂಡ ಹೇರಿತ್ತು. ಈ ರೀತಿ ವಿವಾದಗಳನ್ನ ಮಾಡಿಕೊಂಡಿದ್ದ ಚಂದನ್ ಶೆಟ್ಟಿ ತಮ್ಮ ಹಾಡುಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.
ನಿವೇದಿತಾ ಗೌಡ ಬಾಳಲ್ಲಿ ಬಿರುಗಾಳಿ
ಒಟ್ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಾಳಲ್ಲಿ ಬಿರುಗಾಳಿ ಎದ್ದಿದೆ. ಹೀಗಾಗಿ ಇದು ಎಲ್ಲಿಗೆ ಬಂದು ನಿಲ್ಲಲಿದೆ? ಅಂತಾ ಫ್ಯಾನ್ಸ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ, ಚಂದನ್ ಶೆಟ್ಟಿ ಅವರು ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಇನ್ನೊಂದ್ಕಡೆ ನಿವೇದಿತಾ ಗೌಡ ಕೂಡ ನಟನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹೀಗಿದ್ದಾಗ ಇಬ್ಬರ ಬಾಳಲ್ಲೂ ಬಿರುಗಾಳಿ ಮೂಡಿರುವುದು ಸಹಜವಾಗಿ ಸಂಚಲನ ಸೃಷ್ಟಿ ಮಾಡಿದೆ.
ಚಂದನ್ ಶೆಟ್ಟಿ ಬಗ್ಗೆ ಶ್ರೇಯಾಂಕಾ..
ಅಂದಹಾಗೆ ಚಂದನ್ ಶೆಟ್ಟಿ ಕನ್ನಡದ ಬೆಸ್ಟ್ ರ್ಯಾಪ್ ಸಿಂಗರ್ ಎನ್ನಬಹುದು. ಯಾಕಂದ್ರೆ ಚಂದನ್ ಮಾಡಿರುವ ಹಾಡುಗಳು ಇಂದಿಗೂ ಎಲ್ಲರ ಮನಸ್ಸು ಗೆಲ್ಲುತ್ತವೆ. ಅದೇ ರೀತಿಯಾಗಿ ಇದೀಗ ಚಂದನ್ ಶೆಟ್ಟಿ ಅವರ ಒಂದು ಹಾಡಿಗೆ ಡಾನ್ಸ್ ಮಾಡಿರುವ ಶ್ರೇಯಾಂಕಾ ಪಾಟೀಲ್ ಅವರು, ತಮ್ಮ ಮನಸ್ಸಿನ ಭಾವನೆ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಡಾನ್ಸ್ ಮಾಡಿ ಪೋಸ್ಟ್ ಹಾಕಿದ್ದಾರೆ ಆರ್‌ಸಿಬಿ ಕ್ರಿಕೆಟ್ ತಂಡದ ಆಟಗಾರ್ತಿ ಆಗಿರುವ ಶ್ರೇಯಾಂಕಾ ಪಾಟೀಲ್ ಅವರು. ಚಂದನ್ ಶೆಟ್ಟಿ ಹಾಡನ್ನು ಹೊಗಳಿದ್ದಾರೆ.
ಚಂದನ್ ಶೆಟ್ಟಿ & ನಿವೇದಿತಾ ಗೌಡ ಅವರ ಡಿವೋರ್ಸ್ ವಿಚಾರ ಈಗ ಎಲ್ಲೆಲ್ಲೂ ಸದ್ದು ಮಾಡಿ, ಸುದ್ದಿಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಈ ಜೋಡಿ ಮದುವೆ ಆಗಿದ್ದ ರೀತಿ. ಕರ್ನಾಟಕವೇ ತಿರುಗಿ ನೋಡುವಂತೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮನಸ್ಸು ಗೆದ್ದು ಮದುವೆ ಆಗಿದ್ದರು. ಆದರೆ ಹೀಗೆ ಮದುವೆ ಆಗೋದಕ್ಕೆ ಮೊದಲು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನ ತಂಗಿ.. ತಂಗಿ.. ಅಂತಾ ಕರೆದಿದ್ದರು ಗೊತ್ತಾ?
ತಂಗಿ ಅಂತಾ ಕರೆದಿದ್ದರು ಚಂದನ್!
ಹೌದು, ಬಿಗ್‌ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಸ್ಪರ್ಧೆ ಮಾಡಿದ್ದರು. ಈ ವೇಳೆ ಇಬ್ಬರು ತುಂಬಾ ಕ್ಲೋಸ್ ಆಗಿದ್ದರು. ಆಗ ಅದೇ ಬಿಗ್‌ಬಾಸ್ ಮನೆ ಒಳಗೆ ಮತ್ತೊಬ್ಬರು ಸ್ಪರ್ಧಿ ಜೊತೆಗೆ ಮಾತನಾಡುವಾಗ, ಸ್ವತಃ ಇದೇ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಬಗ್ಗೆ ಮಾತನಾಡಿದ್ದರು. ಆಗ ನಾನು ಮತ್ತು ನಿವೇದಿತಾ, ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಅವರ ರೀತಿ ಎಂದಿದ್ದರು.
ಆಗ ಈ ಮಾತು ಕೇಳಿದ್ದ ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿ, ಅಣ್ಣ & ತಂಗಿನಾ? ಎಂದು ಮರು ಪ್ರಶ್ನೆ ಮಾಡಿದ್ದರು. ಹೌದು ಎಂದು ಚಂದನ್ ಕೂಡ ಉತ್ತರ ನೀಡಿದ್ದರು. ಆದ್ರೆ ಆ ನಂತರ ನಿವೇದಿತಾ ಗೌಡ ಜೊತೆಗೆ ಮದುವೆ ಆಗಿದ್ದರು ಚಂದನ್. ಇದೀಗ ಈ ವಿಡಿಯೋ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಹಾಗೇ ಜನ ಕೂಡ ಚರ್ಚಿಸುತ್ತಿದ್ದಾರೆ.












Click it and Unblock the Notifications