Kichcha Sudeepa: ಯುವನ್‌ಗೆ ಸುದೀಪ್‌ ಕೊಟ್ಟ ಬ್ರೇಸ್‌ಲೆಟ್ ಬೆಲೆ ಎಷ್ಟು ಗೊತ್ತೇ?

ಬಿಗ್‌ ಬಾಸ್‌ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆ ಬಹಳ ಅದ್ಧೂರಿಯಾಗಿ ನಡೆದು ಹೋಗಿದೆ. ವಲ್ಡ್‌ ಕಾರ್ಡ್ ಎಂಟ್ರಿ ಪಡೆದ ಹಾಡುಗಾರ ಹನುಮಂತ ಬಿಗ್‌ ಬಾಸ್‌ ಕನ್ನಡ ಗೆದ್ದು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರೆ, ನಟ ತ್ರಿವಿಕ್ರಮ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಫಿನಾಲೆ ಮುಗಿದು ಎರಡು ದಿನ ಕಳೆದರೂ ಸದ್ಯ ಬಿಗ್‌ ಬಾಸ್‌ ಸೀಜನ್‌ 11ರ ಹವಾ ಮಾತ್ರ ಸಾಸಿವೆ ಕಾಳಿನಷ್ಟು ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಂತೂ ಕ್ಷಣ ಕ್ಷಣಕ್ಕೂ ಬಿಗ್‌ ಬಾಸ್‌ ಸೀಜನ್‌ 11ರ ಕುರಿತು ಪೋಸ್ಟ್‌ಗಳು ವೈರಲ್‌ ಆಗುತ್ತಿದೆ.

ಈ ಪೈಕಿ ಸದ್ಯ ಚರ್ಚೆಯಲ್ಲಿರುವ ವಿಷಯ ಎಂದರೆ ವೇದಿಕೆ ಮೇಲೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್‌ ಬಾಲಕನೊಬ್ಬನಿಗೆ ನೀಡಿರುವ ಉಡುಗೊರೆ. ಏನಿದು ಉಡುಗೊರೆ ವಿಚಾರ? ಕಿಚ್ಚ ಸುದೀಪ್‌ ಗಿಫ್ಟ್‌ ಕೊಟ್ಟಿರುವುದು ಯಾರಿಗೆ? ಮತ್ತು ಯಾಕೆ? ಸುದೀಪ್‌ ನೀಡಿರುವ ಉಡುಗೊರೆ ಏನು? ಅದರ ಬೆಲೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

What Is The Cost Of The Bracelet Given By Kiccha Sudeep To DKD Yuvan

ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಸ್ಪರ್ಧಿಗಳಿಗಿಂತ ಕಿಚ್ಚ ಸುದೀಪ್‌ ಅವರ ನಿರೂಪಣೆಗಾಗಿ ನೋಡುವವರ ಸಂಖ್ಯೆಯೇ ಹೆಚ್ಚು. ಆದರೆ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆಗೆ ಗುಡ್‌ ಬೈ ಹೇಳಿದ್ದಾರೆ. ತಮ್ಮ ಈ ನಿರ್ಧಾರವನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ. ಹೀಗಾಗಿ ಬಿಗ್‌ ಬಾಸ್‌ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆ ಸುದೀಪ್‌ ಅಭಿಮಾನಿಗಳಿಗೆ ವಿಶೇಷವಾಗಿತ್ತು.

ಕಿಚ್ಚ ಸುದೀಪ್‌ ನಿರೂಪಣೆಯ ಕೊನೆಯ ಸೀಜನ್‌ ಆಗಿರುವ ಕಾರಣ ಹಾಗೂ ಈ ಸೀಜನ್‌ ಸಮಯದಲ್ಲೇ ಅವರ ತಾಯಿ ವಿಧಿವಶರಾದ ಕಾರಣ ಬಿಗ್‌ ಬಾಸ್‌ ಸೀಜನ್‌ 11ರ ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ವಿಶೇಷ ನೃತ್ಯವನ್ನು ಸುದೀಪ್‌ಗೆ ಸಮರ್ಪಿಸಲಾಯಿತು. ವಿಕಟಕವಿ ಯೋಗರಾಜ್‌ ಭಟ್‌ ಬರೆದಿರುವ ಹಾಡಿಗೆ ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಖ್ಯಾತಿಯ ಯುವನ್‌ ಹೆಜ್ಜೆ ಹಾಕಿದ್ದಾನೆ.

ತಾಯಿಯನ್ನು ಕಳೆದುಕೊಂಡಿರುವ ಸುದೀಪ್‌ಗೆ ಸ್ವತಃ ತಾಯಿಯೇ ಸಾಂತ್ವನ ಹೇಳುವಂತಿದ್ದ ಈ ಡಾನ್ಸ್‌ ನೋಡುತ್ತಿದ್ದಂತೆ ಕಿಚ್ಚ ಸುದೀಪ್‌, ಅವರ ತಂದೆ ಹಾಗೂ ಮಗಳು ಸಾನ್ವಿ ಸುದೀಪ್‌ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರತಿಯೊಬ್ಬರು ಕೂಡ ಭಾವುಕರಾಗಿದ್ದಾರೆ. ಈ ಡಾನ್ಸ್ ಮುಗಿದ ಬಳಿಕ ಹಾಡು ಬರೆದಿರುವ ಯೋಗರಾಜ್‌ ಭಟ್‌ ಅವರಿಗೆ ನೀವು ಮಾತ್ರ ಇಂತಹ ಸಾಲುಗಳನ್ನು ಬರೆಯಲು ಸಾಧ್ಯ ಎಂದು ಸುದೀಪ್‌ ಧನ್ಯವಾದ ತಿಳಿಸಿದ್ದಾರೆ.

What Is The Cost Of The Bracelet Given By Kiccha Sudeep To DKD Yuvan

ಬಳಿಕ ತಮ್ಮ ಪಾತ್ರವನ್ನು ನೃತ್ಯದ ಮೂಲಕ ಪ್ರದರ್ಶಿಸಿದ ಪುಟ್ಟ ಬಾಲಕ ಯುವನ್‌ಅನ್ನು ವೇದಿಕೆ ಮೇಲೆ ಕರೆದ ಕಿಚ್ಚ ಸುದೀಪ್ ಆತನನ್ನು ಮುದ್ದಾಡಿ, ತಮ್ಮ ಕೈಯಲ್ಲಿದ್ದ ಬ್ರೇಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಾಲಕನಿಗೆ ಕಿಚ್ಚ ಸುದೀಪ್‌ ನೀಡಿರುವ ಉಡುಗೊರೆ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಯಾಕೆಂದರೆ ಒಂದು ಕ್ಷಣವೂ ಯೋಚಿಸಿದೇ ಕೈಯಲ್ಲಿದ್ದ ಬ್ರೇಸ್‌ಲೆಟ್ ಅನ್ನು ಸುದೀಪ್‌ ಯುವನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಯುವನ್‌ಗೆ ಕಿಚ್ಚ ಸುದೀಪ್‌ ನೀಡಿರುವ ಉಡುಗೊರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೂರಾರು ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಬ್ರೇಸ್‌ಲೆಟ್ ಬೆಲೆ ಕೇಳಿ ಅನೇಕರು ದಂಗಾಗಿದ್ದಾರೆ. ಯಾಕೆಂದರೆ ಸುದೀಪ್‌ ಯುವನ್‌ಗೆ ಉಡುಗೊರೆಯಾಗಿ ನೀಡಿದ ಬ್ರೇಸ್‌ಲೆಟ್ ಬೆಲೆ ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿಯಂತೆ. ಆ ಬ್ರೇಸ್‌ಲೆಟ್ ಅನ್ನು ಪ್ಲಾಟಿನಮ್ ಹಾಗೂ ವಜ್ರದ ಹರಳುಗಳಿಂದ ಮಾಡಲಾಗಿತ್ತು ಎನ್ನುವ ವ್ಯಕ್ತಿಯ ಪೋಸ್ಟ್‌ವೊಂದು ಸದ್ಯ ಸಖತ್‌ ವೈರಲ್‌ ಆಗುತ್ತಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕ ಯುವನ್, ಸುದೀಪ್ ಸರ್ ಕೊಟ್ಟ ಉಡುಗೊರೆಗೆ ಬೆಲೆ ಕಟ್ಟಲಾಗುವುದಿಲ್ಲ. ಇದನ್ನು ಫೋಟೋ ಪ್ರೇಮ್‌ ಹಾಕಿಸಿಕೊಂಡು ಇಟ್ಟುಕೊಳ್ಳುತ್ತೇನೆ. ಅವರ ಮುಂದೆ ಮೊದಲ ಬಾರಿ ಡಾನ್ಸ್‌ ಮಾಡಿರುವುದು. ಒಂದು ಬಾರಿ ಅವರನ್ನು ನೋಡಲು ಕಾಯುತ್ತಿದೆ. ನನ್ನ ಬಾಲ್ಯವನ್ನು ನೆನಪಿಸಿದ್ದಕ್ಕೆ ಧನ್ಯವಾದ. ಮುಂದೆ ಚೆನ್ನಾಗಿ ಬೆಳೆಯಿರಿ ಎಂದು ಸುದೀಪ್ ಸರ್ ಹೇಳಿದ್ದಾರೆ ಎಂದು ಯುವನ್ ಖುಷಿ ಹಂಚಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+