Actor Darshan Case: ನಟ ದರ್ಶನ್‌ರಿಂದ ಹಣದ ಸಹಾಯ: ರೇಣುಕಾಸ್ವಾಮಿ ತಂದೆ ಕೊಟ್ಟ ಸ್ಪಷ್ಟನೆ ಏನು?

Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇತ್ತೀಚೆಗಷ್ಟೇ ಜಾಮೀನು ಸಿಕ್ಕಿದೆ. ಈ ನಡುವೆಯೇ ದರ್ಶನ್‌ ಬಳಿ ರೇಣುಕಾಸ್ವಾಮಿ ಕುಟುಂಬಸ್ಥರು ಹಣ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದವು. ಇದೀಗ ಈ ಬಗ್ಗೆ ರೇಣುಕಾಸ್ವಾಮಿ ತಂದೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಚಿತ್ರದುರ್ಗ ನಗರದ ವಿಆರ್‌ಎಸ್ ಬಡಾವಣೆಯ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಟ ದರ್ಶನ್‌ ಅವರಿಂದ ನಾವು ಹಣ ಪಡೆದಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹರಡುತ್ತಿದ್ದಾರೆ. ಇದರಿಂದ ನಮ ಮನಸಿಗೆ ತುಂಬಾ ನೋವಾಗಿದೆ. ನಾವು ಯಾವುದೇ ಹಣವನ್ನು ಪಡೆದಿಲ್ಲ ಎಂದು ರೇಣುಕಾಸ್ವಾಮಿ ತಂದೆ ತಂದೆ ಶಿವನಗೌಡ್ರು ಹೇಳಿದರು.

What Did Renukaswamy Father Clarifies Financial Help from Actor Darshan s

ಹಲವು ದಿನಗಳಿಂದ ಸಮಾಜಿಕ ಜಾಲತಾಣದಲ್ಲಿ ಕೆಲವು ವಿಚಾರಗಳು ಈ ಬಗ್ಗೆ ಹರಿದಾಡುತ್ತಿವೆ. ನಾವು ನಟ ದರ್ಶನ್ ಬಳಿ ಹೋಗಿದ್ದೇವೆ, ಅವರು ನಮ್ಮ ಬಳಿ ಬಂದಿದ್ದಾರೆ, ನಾವು ಅದ್ಯಾವುದೋ ಶೆಡ್‌ಗೆ ಹೋಗಿದ್ದೆವು, ಅವರೇನೂ ಹಣ ಕೊಟ್ಟಿದ್ದಾರೆ, ನಾವೇನೋ ಪಡೆದು ಬರುತ್ತೇವೆಂದು ಹೇಳುತ್ತಿದ್ದಾರೆ. ನಾವು ಆ ಬಗ್ಗೆ ಗಮನಹರಿಸುತ್ತಿಲ್ಲ. ನಮಗೆ ತುಂಬಾ ಜನ ಈ ಬಗ್ಗೆ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಯಾರೂ ಅವರನ್ನು ಭೇಟಿ ಮಾಡಿಲ್ಲ, ಅವರು ಯಾರೂ ನಮ್ಮನ್ನು ಭೇಟಿ ಮಾಡಲು ಬಂದಿಲ್ಲ ಎಂದರು.

ನಾವು ಯಾರ ಬಳಿಯೂ ಒಂದು ಪೈಸೆನೂ ಹಣ ತೆಗೆದುಕೊಂಡಿಲ್ಲ. ಕಾರು‌ ಬುಕ್‌ ಮಾಡಿದ್ದೇವೆ ಅಂತಾ ಕೆಲವರು ಹಾಕಿದ್ದಾರೆ. ನಮ್ಮ ಬಳಿ ಹಳೇ ಸ್ಕೂಟರ್ ರಿಪೇರಿ ಮಾಡಿಸಲು ಆಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಗ್ಗೆ ಇಲ್ಲದಲ್ಲದ ಆರೋಪಳನ್ನು ಮಾಡುತ್ತಿದ್ದಾರೆ. ಇದರಿಂದ ನನ್ನ ಮತ್ತು ಕುಟುಂಬದವರ ಮನಸಿಗೆ ತುಂಬಾ ನೋವಾಗಿದೆ. ರಾಜ್ಯದ ಜನತೆಗೆ ನಾವು ಈ‌ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು.

ಇನ್ನು ದರ್ಶನ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ. ಸೊಸೆಗೆ ಸರ್ಕಾರಿ ನೌಕರಿ ಕೇಳಿದ್ದೆವು. ಆದರೆ ಸರ್ಕಾರ ಅದನ್ನು ಕೊಡಲು ಆಗಲ್ಲ ಎಂದು ಹಿಂಬರಹ ಕೊಟ್ಟಿದೆ. ಸರ್ಕಾರ ನೀಡಿದ ಹಿಂಬರಹದಿಂದ ನಮಗೆ ದೊಡ್ಡ ಆಘಾತ ಆಗಿದೆ. ಮುಂದೆ ನನ್ನ ಸೊಸೆ, ಮೊಮ್ಮಗು ಎಲ್ಲಿ ಬೀದಿ ಪಾಲಾಗುತ್ತಾನೆ ಎಂಬ ಆತಂಕ ಇದೆ. ಈಗಾಗಲೇ ನಾವು ಮಗನನ್ನು ಕಳೆದುಕೊಂಡು ತುಂಬಾ ನೋವಿನಲ್ಲಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+