Vickypedia: Married, Single Girls ಆಯ್ತು.. ಈಗ ಗೋಬಿ ಸರದಿ.. ವಿಕ್ಕಿಪೀಡಿಯಾ ವಿಕಾಸ್ ನ್ಯೂ ಸಾಂಗ್ ವೈರಲ್
Married Girls ಆಯ್ತು. Single Girls ಆಯ್ತು. ಈಗ ಗೋಬಿ ಸರದಿ. ವಿಕ್ಕಿಪೀಡಿಯಾ ವಿಕಾಸ್ ಗೋಬಿ ಬಗ್ಗೆ ಸಾಂಗ್ ಕ್ರಿಯೇಟ್ ಮಾಡಿದ್ದಾರೆ. ಗೋಬಿ ಮೇಲಿನ ಲವ್ ಯುವ ಪೀಳಿಗೆಗೆ ಕಡಿಮೆ ಆಗುವುದೇ ಇಲ್ಲ ಅನ್ನೋ ಅರ್ಥದಲ್ಲಿ ಈ ಸಾಂಗ್ ಅನ್ನು ಬರೆದಿದ್ದಾರೆ. ಈಗಾಗಲೇ ತಿಳಿದಿರುವಂತೆ ವಿಕಾಸ್ ಇಂಗ್ಲೀಷ್ ಹಾಡುಗಳ ರಿಲೀಕ್ಸ್‌ನಲ್ಲಿ ಕನ್ನಡ ಹಾಡುಗಳನ್ನು ಕ್ರಿಯೇಟ್ ಮಾಡುತ್ತಾರೆ. ಗೋಬಿ ಸಾಂಗ್ ಕೂಡ ಇಂಗ್ಲೀಷ್ ಹಾಡಿನ ರಿಲೀಕ್ಸ್‌ನಲ್ಲೇ ಕ್ರಿಯೇಟ್ ಮಾಡಲಾಗಿದೆ.
ಹೌದು... ಪ್ರತೀ ಬಾರಿ ಒಂದಿಲ್ಲಾ ಒಂದು ವಿಷಯಗಳ ಮೇಲೆ ವಾಸ್ತವಾಂಶವನ್ನು ತಿಳಿಸುತ್ತಾ ಕಾಮಿಡಿಯಾಗಿ ಉಡುಗೆ ತೊಟ್ಟು ಕಾಣಿಸಿಕೊಳ್ಳುವ ವಿಕಾಸ್ ಈ ಬಾರಿ ಕೂಡ ಹೊಸ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ vickypedia_007 ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಜನ ಮೆಚ್ಚಿಕೊಂಡು ಶೇರ್ ಮಾಡುತ್ತಿದ್ದಾರೆ.

ಈ ವೀಡಿಯೋದ ಹಾಡಿನ ರಿಲೀಕ್ಸ್ ಯಾವ ಹಾಡಿನದ್ದು?
ಕೆನಡಾದ ಗಾಯಕ ಜಸ್ಟಿನ್ ಡ್ರೂ ಬೈಬರ್ (Justin Drew Bieber) ಹಾಡಿದ 'baby baby baby ooooh... like baby baby baby' ಇಂಗ್ಲೀಷ್ ಹಾಡಿನ ರಿಲೀಕ್ಸ್‌ನಲ್ಲಿ ವಿಕ್ಕಿಪೀಡಿಯಾ ವಿಕಾಸ್ 'gobi... gobi... gobi ooooh... like gobi... gobi... gobi ooooh...' ಎಂದು ಹಾಡಿದ್ದಾರೆ.
ವಿಕ್ಕಿಪೀಡಿಯಾ ವಿಕಾಸ್ ಗೋಬಿ ಸಾಂಗ್ ಹೇಗಿದೆ?
half plate ಗೋಬಿ.. ಅಣ್ಣ ಹಾಕಿ.. ಸ್ವಲ್ಪ roast ಮಾಡಿ.. ಖಾರ ಜಾಸ್ತಿ.. ketchup ಚೂರ್ ಹಾಕಿ.. gravy ಟೈಪು.. ಆದ್ರೆ ಪಿತ ಪಿತ ಪಿತ ಬೇಡಣ್ಣ.... colour ban ಆಯ್ತು.. care ಮಾಡಲ್ಲ.. ಹುಳ ಇದ್ರು wash ಮಾಡಲ್ವಾ.. ಇಷ್ಟ್ problems ಇದ್ರು.. ನಾನ್ ಬಿಡಲ್ಲಾ.. ಯಾಕಂದ್ರೆ ಇದು first love ಇದು first love ನನಗೆ.. ಗೋಬಿ.. ಗೋಬಿ.. ಗೋಬಿ oh yeah! like ಗೋಬಿ.. ಗೋಬಿ.. ಗೋಬಿ oh yeah! ಗೋಬಿ.. ಗೋಬಿ.. ಗೋಬಿ oh yeah! ಹೆಂಗ್ ಇದ್ರು ತಿಂತೀನಿ yeah! ಗೋಬಿ.. ಗೋಬಿ oh yeah! ಗೋಬಿ.. ಗೋಬಿ oh yeah! ಗೋಬಿ.. ಗೋಬಿ oh yeah! ಹೆಂಗ್ ಇದ್ರು ತಿಂತೀನಿ yeah!
ಈ ಹಾಡಿನ ತಾತ್ಪರ್ಯ ಏನು?
ಇತ್ತೀಚೆಗೆ ಆಹಾರ ಇಲಾಖೆ ಕಬಾಬ್, ಗೋಬಿ ಸೇರಿದಂತೆ ಇತರ ತಿಂಡಿಗಳನ್ನು ಪರಿಶೀಲನೆ ಮಾಡಿ ಇದರಲ್ಲಿ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ ಎಂದಿತ್ತು. ಅಷ್ಟೇ ಅಲ್ಲ ಅದರ ತಯಾರಿಕೆಗೆ ಬಳಸುವ ವಸ್ತುಗಳಲ್ಲೂ ಹಾನಿಕಾರಕ ಅಂಶಗಳಿರುವುದನ್ನು ವರದಿ ಮಾಡಿತ್ತು. ಇದು ಆರೋಗ್ಯಕ್ಕೆ ಹಾನಿಕಾರಕ ಇಂತಹ ತಿಂಡಿಗಳನ್ನು ಸೇವಿಸದೇ ಇರಲು ಎಚ್ಚರಿಕೆಯನ್ನೂ ನೀಡಿತ್ತು. ಇಷ್ಟಾದರೂ ಕೂಡ ಯುವ ಪೀಳಿಗೆಗೆ ಗೋಬಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಗೋಬಿ ಒಂದು ರೀತಿ ಫಸ್ಟ್ ಲವ್ ಇದ್ದಂತೆ. ಅದು ಹೇಗೇ ಇರಲಿ ನಾವು ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ ಅನ್ನೋ ಮನಸ್ಥಿತಿಯಲ್ಲಿ ಹಲವಾರು ಜನ ಇದ್ದಾರೆ ಅನ್ನೋದೇ ಈ ಹಾಡಿನ ತಾತ್ಪರ್ಯವಾಗಿದೆ. ನೀವೂ ಕೂಡ ಗೋಬಿ ಪ್ರಿಯರಾಗಿದ್ದರೆ ಈ ಹಾಡನ್ನು ಒಮ್ಮೆ ಹಾಡಲು ಟ್ರೈ ಮಾಡಿ.












Click it and Unblock the Notifications