ಟೈಗರ್ ಪುತ್ರ ಮರಿ ಟೈಗರ್ ಈಗ ‘ನೆಲ್ಸನ್’: ರಿಯಲ್ ಸ್ಟಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದ ಪಾಲಿನ ಲೆಜೆಂಡ್ ಮತ್ತು ವಿಲನ್‌ಗಳಿಗೇ ವಿಲನ್ ಆಗಿದ್ದ ಟೈಗರ್ ಪ್ರಭಾಕರ್ ಇಂದು ನಮ್ಮೊಂದಿಗೆ ಇಲ್ಲ. ಆದ್ರೆ ಅವರ ಪುತ್ರ ಈಗ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸು ಗೆಲ್ಲುತ್ತಿದ್ದಾರೆ. ಹೀಗೆ ವಿನೋದ್ ಪ್ರಭಾಕರ್ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಟೈಗರ್ ಪ್ರಭಾಕರ್ ಬಗ್ಗೆ ಉಪ್ಪಿ ಹೇಳಿದ್ದೇನು?
ಅಂದಹಾಗೆ ವಿನೋದ್ ಪ್ರಭಾಕರ್ ಅವರು ಅಭಿನಯಿಸುತ್ತಿರುವ ಮುಂದಿನ ಸಿನಿಮಾಗೆ 'ನೆಲ್ಸನ್' ಎಂಬ ಟೈಟಲ್ ಇಡಲಾಗಿದೆ. ಹೀಗೆ ಟೈಟಲ್ ಮೂಲಕವೇ ಗಮನ ಸೆಳೆದ 'ನೆಲ್ಸನ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪಕ್ಕಾ ಮಾಸ್ ಅನ್ನೋ ಹಿಂಟ್ ಕೂಡ ಕೊಟ್ಟಿದೆ. ಅಷ್ಟಕ್ಕೂ ಗೊಂಬೆಗಳ ಲವ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯನ್ನು ಮೂಡಿಸಿದ್ದ ನಟ ಅರುಣ್ ಕುಮಾರ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅರುಣ್ ಇದೀಗ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ ನೆಲ್ಸನ್. ಹೀಗೆ 'ನೆಲ್ಸನ್' ಸಿನಿಮಾದ ಟೈಟಲ್ ಕೆಳಗೆ 'ರಕ್ತದಲ್ಲಿ ನೆಂದ ದೇವರಕಾಡು' ಎಂಬ ಅಡಿ ಬರಹ ನೀಡಲಾಗಿದೆ. ಈ ಮೂಲಕ ಚಿತ್ರದ ಸಾರಂಶದ ಬಗ್ಗೆ ದೊಡ್ಡ ಹಿಂಟ್ ಸಿಕ್ಕಿದೆ.

ನಟ ಉಪೇಂದ್ರ ಹೇಳಿದ್ದೇನು?
ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಮಾಸ್ ಆಗಿರುವ ಟೀಸರ್ ಪ್ರೇಕ್ಷಕರ ಗಮನ ಸೆಳೆದಿದ್ದು, 'ನೆಲ್ಸನ್' ಟೀಸರ್‌ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ 'ಆಂಗ್ರಿ ಯಂಗ್ ಮ್ಯಾನ್' ಅವತಾರದಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಿನಿಮಾದ ಇಡೀ ತಂಡಕ್ಕೆ ಸಾಥ್ ನೀಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಟೈಗರ್ ಪ್ರಭಾಕರ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ?
ಟೈಗರ್ ಹವಾ ಆಗಲೂ ಇತ್ತು...
ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಮಾತನಾಡಿ, ಟೈಗರ್ ಹವಾ ಆಗಲೂ ಇತ್ತು ಈಗ್ಲೂ ಇರುತ್ತೇ.. ಮುಂದೆ ಕೂಡ ಇರುತ್ತದೆ. ನಿಮ್ಮ ತಂದೆಯ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆಂದು ರಿಯಲ್ ಸ್ಟಾರ್ ಉಪೇಂದ್ರ ಹಳೆಯ ದಿನಗಳನ್ನ ಮೆಲುಕು ಹಾಕಿದ್ರು. ಟೀಸರ್ ಕುರಿತು ಏನು ಹೇಳೋದು? ಎಲ್ಲಾ ಎಕ್ಸ್ಟ್ರಾಡಿನರಿ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ, ಚಿತ್ರ ತಂಡಕ್ಕೆ ಒಳ್ಳೆಯದಾಗಲಿ. ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿದೆ ಅಂತಾ ರಿಯಲ್ ಸ್ಟಾರ್ ಉಪೇಂದ್ರ ಭವಿಷ್ಯ ನುಡಿದಿದ್ದಾರೆ.
ಉಪೇಂದ್ರ ಬಗ್ಗೆ ಮರಿ ಟೈಗರ್ ಹೇಳಿದ್ದೇನು?
ಇನ್ನು ನಟ ವಿನೋದ್ ಪ್ರಭಾಕರ್ ಮಾತನಾಡುತ್ತಾ, ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು ಎಂದರು. ಈ ಮೂಲಕ ಮತ್ತೊಂದು ಡಿಫರೆಂಟ್ ಸಿನಿಮಾದಲ್ಲಿ ಬಣ್ಣ ಹಚ್ಚಿ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಲು ವಿನೋದ್ ಪ್ರಭಾಕರ್ ಸಿದ್ಧವಾಗಿದ್ದಾರೆ. ಟೀಸರ್ ನಿರೀಕ್ಷೆಯನ್ನ ಹೆಚ್ಚಿಸಿದ್ದು ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಸಿನಿಮಾ ಸ್ಟೋರಿ ಏನು ಗೊತ್ತಾ?
'ನೆಲ್ಸನ್' ಸಿನಿಮಾ ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಗ್‌ಸ್ಟರ್ ಕಥೆ ಎನ್ನಲಾಗಿದೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ & ಬುಡಕಟ್ಟು ಜನಾಂಗದ ಸಂಘರ್ಷ ಸೇರಿ ಒಂದಷ್ಟು ಅಂಶವನ್ನ ಚಿತ್ರದಲ್ಲಿ ಅರುಣ್ ಕೆತ್ತಿಕೊಟ್ಟಿದ್ದಾರೆ ಅಂತಾ ಹೇಳಲಾಗಿದೆ. ಇನ್ನೊಂದು ಸ್ಪೆಷಲ್ ಅಂದ್ರೆ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ 'ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು' ಸಿನಿಮಾದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಸಿದ್ಧರಾಗಿದ್ದಾರೆ. ಇದೀಗ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಮರಿ ಟೈಗರ್ ಅಭಿಮಾನಿ ಬಳಗಕ್ಕೆ ಮುಂದೆ ಮತ್ತಷ್ಟು ಸರ್ಪ್ರೈಸ್ ಕೊಡಲು ಸಿದ್ಧವಾಗಿದೆ.












Click it and Unblock the Notifications