Ramya: ವಿನಯ್ ರಾಜ್‌ಕುಮಾರ್ ಜೊತೆಗಿನ ಅಸಲಿ ಸಂಬಂಧದ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ
ನಟಿ ಮೋಹಕತಾರೆ ರಮ್ಯಾ ಅವರು ಡಾ.ರಾಜ್‌ಕುಮಾರ್ ಅವರ ಬ್ಯಾನರ್‌ನಿಂದಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ರಮ್ಯಾ ನಟಿಸಿದ್ದರು. ಹಾಗಾಗಿ ಮೊದಲಿನಿಂದಲೂ ರಾಜ್ ಕುಟುಂಬದ ಜೊತೆ ರಮ್ಯಾ ಒಳ್ಳೆಯ ಒಡನಾಟ ಹೊಂದಿದ್ದಾರೆ. ಇತ್ತೀಚೆಗೆ ನಟ ವಿನಯ್ ರಾಜ್‌ಕುಮಾರ್ ಅವರೊಂದಿಗೆ ರಮ್ಯಾ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಇದ್ದ ಕೆಲ ಫೋಟೋಗಳು ವೈರಲ್ ಆಗಿತ್ತು. ಇವುಗಳನ್ನು ನೋಡಿ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತ್ತು. ಈ ಬಗ್ಗೆ ರಮ್ಯಾ ಕೊನೆಗೂ ಮೌನ ಮುರಿದಿದ್ದು, ತನ್ನ ಹಾಗೂ ವಿನಯ್ ನಡುವಿನ ಅಸಲಿ ಸಂಬಂಧವನ್ನು ರಿವೀಲ್ ಮಾಡಿದ್ದಾರೆ.
ರಮ್ಯಾ ಅವರು ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಒಟ್ಟಿಗೆ ಓಡಾಡುವುದು, ಊಟ ಮಾಡುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಮತ್ತೊಂದು ಫೋಟೋ ವೈರಲ್ ಆಗಿತ್ತು. ಇದರಲ್ಲಿ ವಿನಯ್ ರಾಜ್‌ಕುಮಾರ್ ಅವರ ಸೆಲ್ಫೀಗೆ ರಮ್ಯಾ ಅವರು ಕಿಸ್ ಕೊಡುವ ಪೋಸ್ ನೀಡಿದ್ದರು. ಬಳಿಕ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದೆಲ್ಲ ವದಂತಿ ಹಬ್ಬಿತ್ತು.

ವೈರಲ್ ಫೋಟೋಸ್‌ನಿಂದ ವದಂತಿ
ರಮ್ಯಾ ಹಾಗೂ ವಿನಯ್ ಇಬ್ಬರೂ ಈವರೆಗೆ ಮದುವೆ ಆಗಿಲ್ಲ. ಹೀಗಿರುವಾಗ ಇಬ್ಬರೂ ಈ ರೀತಿ ಕ್ಲೋಸ್ ಆಗಿ ಪದೇ ಪದೇ ಕಾಣಿಸಿಕೊಂಡಿದ್ದರಿಂದ ಗಾಳಿಸುದ್ದಿಗಳು ಸದ್ದು ಮಾಡಿದ್ದವು. ನಟಿ ರಮ್ಯಾ ಅವರು ಹಿಂದೊಮ್ಮೆ ಮಿರರ್ ಸೆಲ್ಫಿ ಜೊತೆಗೆ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೇರ್ ಮಾಡಿದ್ದರು. ಇದರಲ್ಲಿ ವಿನಯ್ ಮೊಬೈಲ್ ನೋಡುತ್ತಾ ನಗುತ್ತಿರುವ ಪೋಸ್ ನೀಡಿದ್ದರು. ಈ ಫೋಟೋಗೆ ಪ್ರೀತಿಯನ್ನು ಯಾವಾಗಲೂ ನೆನಪಿಡಿ ಎಂದು ಬರೆದುಕೊಂಡಿದ್ದರು. ವಿದೇಶದಲ್ಲಿ ವಿನಯ್ ರಮ್ಯಾ ಅವರು ಒಟ್ಟಿಗೆ ಇದ್ದ ಹಲವು ಫೋಟೋಸ್ ಹಂಚಿಕೊಂಡಿದ್ದರು. ಈ ಎಲ್ಲ ಕಾರಣದಿಂದ ಇಬ್ಬರ ನಡುವೆ ಏನೋ ಇದೆ ಎಂದೆಲ್ಲ ಸುದ್ದಿ ಹರಿದಾಡಿತ್ತು. ಬಳಿಕ ಈ ಬಗ್ಗೆ ವಿನಯ್ ರಾಜ್‌ಕುಮಾರ್ ಸ್ಪಷ್ಟನೆಯೂ ನೀಡಿದ್ದರು.
ಇಬ್ಬರ ನಡುವಿನ ಬಾಂಡಿಂಗ್ ಬಗ್ಗೆ ಮಾತನಾಡಿದ್ದ ವಿನಯ್ ರಾಜ್‌ಕುಮಾರ್, 'ರಮ್ಯಾ ಅವರು ನನಗೆ ಚಿಕ್ಕವಯಸ್ಸಿನಿಂದಲೂ ಗೊತ್ತು. "ಅಭಿ" ಸಿನಿಮಾದ ಸಮಯದಿಂದಲೂ ರಮ್ಯಾ ಅವರ ಪರಿಚಯವಿದೆ. ಆಗ ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಆಗಿನಿಂದಲೂ ರಮ್ಯಾ ತುಂಬಾ ಚೆನ್ನಾಗಿ ಗೊತ್ತು. ಅವರು ನನಗೆ ತುಂಬಾ ಒಳ್ಳೆಯ ಫ್ರೆಂಡ್. ಆಗಾಗ ಮೀಟ್ ಕೂಡ ಆಗ್ತೀವಿ' ಎಂದಿದ್ದರು. ಇದೀಗ ರಮ್ಯಾ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಸಲಿ ವಿಚಾರ ರಿವೀಲ್ ಮಾಡಿದ್ದಾರೆ.

'ಕಲ್ಪನೆಗಳು ಬೇಡ'
ವಿನಯ್ ಜೊತೆಗಿನ ಫೋಟೋ ವೈರಲ್ ಹಾಗೂ ಗಾಸಿಪ್ ವಿಚಾರವಾಗಿ ರಮ್ಯಾ ಇನ್ಸ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. "ನೀವು ತುಂಬಾ ಫನ್ನೀ... ಹಾಗೂ ತುಂಬಾ ಚೆನ್ನಾಗಿ ಭವಿಷ್ಯ ನುಡಿಯುತ್ತೀರಿ. ವಿನಯ್ ರಾಜ್‌ಕುಮಾರ್ ನನಗೆ ತಮ್ಮನಿದ್ದಂತೆ. ನಿಮ್ಮ ಕಲ್ಪನೆಗಳನ್ನು ದಯವಿಟ್ಟು ಹಿಡಿತದಲ್ಲಿಟ್ಟುಕೊಳ್ಳಿ" ಎಂದು ರಮ್ಯಾ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.












Click it and Unblock the Notifications