Vijaya Lakshmi Darshan: ಮನೆಯಲ್ಲಿ ಪತಿಯ ದರ್ಶನ ಯಾವಾಗ: ಸತಿಯಿಂದ ಸಿದ್ಧವಾಯ್ತಾ 'ವಿಜಯ'ದ ಪ್ಲ್ಯಾನ್?
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಾಕ್ಷಿ ಸಿಕ್ಕಷ್ಟು ಬಲವಾಗುತ್ತಿದೆ. ಇದರಿಂದಾಗಿ ಪ್ರಕರಣದ ಎ2 ಆರೋಪಿ ನಟ ದರ್ಶನ್ ತೂಗುದೀಪ್ ಸದ್ಯ ಜೈಲಿನಿಂದ ಹೊರಬರುವುದು ಕಷ್ಟ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಅದ್ಯಾವ ಸಾಕ್ಷಿಗಳು ಸಿಕ್ಕರೂ, ಯಾರು ಏನೇ ಹೇಳಿದರೂ ತಲೆ ಕೆಡಸಿಕೊಳ್ಳದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತ್ರ ಪತಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿದ್ದಾರೆ.
ಅದ್ಯಾರು ಏನೇ ಹೇಳಲಿ. ದರ್ಶನ್ ನನ್ನ ಗಂಡ. ನನ್ನ ಬಾಳ ಸಂಗಾತಿ. ನಮ್ಮ ಸುಂದರ ದಾಂಪತ್ಯ ಜೀವನದಲ್ಲಿ ಮುಳುವಾಗಿ ಬಂದ ಪವಿತ್ರಾ ಈ ಶಿಕ್ಷೆಗೆ ಅರ್ಹಳು. ನನ್ನ ಪತಿ ಮಾತ್ರ ನಿರ್ದೋಷಿ ಎಂಬ ತೀರ್ಮಾನಕ್ಕೆ ವಿಜಯಲಕ್ಷ್ಮಿ ಬಂದಿದ್ದಾರೆ. ಇದರಿಂದಾಗಿ ವಿಜಯಲಕ್ಷ್ಮಿ ತಮ್ಮ ಗಂಡನನ್ನು ಸೆರೆಮನೆ ವಾಸದಿಂದ ಬಿಡಿಸಿಕೊಂಡು ಬರಲು ಪ್ರಯತ್ನ ನಡೆಸಿದ್ದಾರೆ.

ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಮಗನನ್ನು ಕರೆದುಕೊಂಡು ಓಡೋದಿ ಬಂದ ವಿಜಯಲಕ್ಷ್ಮಿ ವಿಜಯದ ದಾರಿ ಹಿಡಿದು ಹೊರಟಿದ್ದಾರೆ. ಪತಿ ಜೈಲಿನಲ್ಲಿ ಅನ್ನ ನೀರು ನಿದ್ದೆ ಬಿಟ್ಟು ಕುಳಿತಿರುವಾಗ ತಮ್ಮ ಗಂಡ ಯಾವುದೇ ತೊಂದರೆಯಿಲ್ಲದೆ ಜೈಲಿನಿಂದ ಹೊರಬರಲಿ ಎಂದು ನಿತ್ಯ ದೇವರಿಗೆ ದೀಪ ಹಚ್ಚುತ್ತಿದ್ದಾರೆ.
ವಿಜಯಲಕ್ಷ್ಮಿ ಅವರ ಮೇಲೆ ದರ್ಶನ್ ಹಲವಾರು ಬಾರಿ ಕೈ ಮಾಡಿದ್ದಾರೆ. ಕಳೆದ ಬಾರಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ದರ್ಶನ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಆದರೆ ದರ್ಶನ್ ತಮ್ಮ ಮೇಲೆ ಅದೆಷ್ಟೇ ಕೈ ಮಾಡಲಿ, ಜಗಳವಾಡಲಿ ವಿಜಯಲಕ್ಷ್ಮಿಗೆ ಮಾತ್ರ ಗಂಡನ ಮೇಲಿನ ಪ್ರೀತಿ ಚೂರು ಕಡಿಮೆಯಾಗಿಲ್ಲ. ಹೊಡೆಯಲಿ ಜಗಳವಾಡಲಿ ಅವರು ನನ್ನ ಗಂಡ, ಅವರಿಲ್ಲದೆ ನಾನಿಲ್ಲ ಎಂದು ಮನೆಯಲ್ಲಿ ಗಂಡನ ದರ್ಶನಕ್ಕಾಗಿ ವಿಜಯಲಕ್ಷ್ಮಿ ಎದುರು ನೋಡುತ್ತಿದ್ದಾರೆ.
ದರ್ಶನ್ ಜೈಲಿಗೆ ಹೋದಾಗ ಆರಂಭದಲ್ಲಿ ದರ್ಶನ್ ತಾಯಿ ಆಗಲಿ ಅಥವಾ ಸಹೋದರನಾಗಲಿ ಜೈಲಿಗೆ ಭೇಟಿ ನೀಡಿರಲಿಲ್ಲ. ಆದರೆ ವಿಜಯಲಕ್ಷ್ಮಿ ಮಾತ್ರ ಮಗನನ್ನು ಕರೆದುಕೊಂಡು ದರ್ಶನ್ ನೋಡಲು ಓಡೋಡಿ ಬಂದಿದ್ದರು. ಪತ್ನಿ ಹಾಗೂ ಮಗನನ್ನು ನೋಡುತ್ತಿದ್ದಂತೆ ಜೈಲಿನಲ್ಲಿದ್ದ ದರ್ಶನ್ ಭಾವುಕರಾಗಿದ್ದರು. ಈ ವೇಳೆ ದರ್ಶನ್‌ಗೆ ಧೈರ್ಯ ತುಂಬಿದ ಪತ್ನಿ ವಿಜಯಲಕ್ಷ್ಮಿ ಸಮಾಧಾನ ಮಾಡಿ ಗಂಡನನ್ನು ಹೊರ ತರುವ ಗಟ್ಟಿ ಮನಸ್ಸು ಮಾಡಿದ್ದಾರೆ.

ನಿತ್ಯ ಜೈಲಿಗೆ ತೆರಳಿ ಗಂಡನ ಯೋಗಕ್ಷೇಮ ವಿಚಾರಿಸುತ್ತಿರುವ ವಿಜಯಲಕ್ಷ್ಮಿಗೆ ಮಗ ಕೂಡ ಸಾಥ್ ನೀಡಿದ್ದಾನೆ. ಅಲ್ಲದೆ ದರ್ಶನ್ ಕುಟುಂಬಸ್ಥರು ಕೂಡ ವಿಜಯಲಕ್ಷ್ಮಿ ಜೊತೆಯಾಗಿ ನಿಂತಿದ್ದಾರೆ. ಇಡೀ ಚಿತ್ರರಂಗವೇ ದರ್ಶನ್ ಜೈಲುವಾಸವನ್ನು ನೆನೆದು ಮರುಕ ವ್ಯಕ್ತಪಡಿಸಿದೆ. ದರ್ಶನ್ ಜೊತೆಗೆ ನಾವಿದ್ದೇವೆ ಎಂದು ಚಂದನವನ ಸಾಂತ್ವಾನದ ಮಾತುಗಳನ್ನಾಡಿದೆ.
ಆದರೆ ದರ್ಶನ್ ಮಾಡಿರುವದು ಸಣ್ಣ ತಪ್ಪಲ್ಲ. ಒಂದು ಪ್ರಾಣವನ್ನೇ ತೆಗೆದ ಆರೋಪ ಅವರ ತಲೆಯ ಮೇಲಿದೆ. ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಅವರಿಗಾಗಿ ಈ ಕೊಲೆ ನಡೆದಿರುವುದು ಸತ್ಯ ಎಂದು ಸಾಕ್ಷಿಗಳು ಹೇಳುತ್ತವೆ. ಇದನ್ನೇ ವಿಜಯಲಕ್ಷ್ಮಿ ಬಲವಾಗಿಟ್ಟುಕೊಂಡು ದರ್ಶನ್ ಬಿಡುಗಡೆಗೆ ಪೈಟ್ ಮಾಡಲು ಮುಂದಾಗಿದ್ದಾರೆ.
ದರ್ಶನ್ ದರ್ಶನಕ್ಕಾಗಿ ವಿ'ಜಯ'
ದರ್ಶನ್ ಮೇಲಿನ ವಿಜಯಲಕ್ಷ್ಮಿ ಅವರ ಪ್ರೀತಿ ಇದೆಲ್ಲವನ್ನ ಧೈರ್ಯದಿಂದ ಸ್ವೀಕರಿಸುವಂತೆ ಮಾಡುತ್ತಿದೆ. ಈ ಹಿಂದೆ ವಿಜಯಲಕ್ಷ್ಮಿ ಮೇಲೆ ಕೈ ಮಾಡಿ ದರ್ಶನ್ ಜೈಲು ಸೇರಿದ್ದರು. ಈಗ ಯಾರದ್ದೋ ಕುತಂತ್ರಕ್ಕೆ ದರ್ಶನ್ ಜೈಲುವಾಸ ಅನುಭವಿಸುವಂತಾಗಿದೆ. ಜೈಲಿನಲ್ಲಿರುವ ದರ್ಶನ್ ಅವರದ್ದು ತಪ್ಪಿಲ್ಲ. ಅವರು ತಪ್ಪು ಮಾಡಿದ್ದು ಪವಿತ್ರಾ ಗೌಡ ಅವರ ಮಾತಿನಿಂದ. ಅವರ ಮೋಸದ ಪ್ರೀತಿಯ ಬಲೆಯಲ್ಲಿ ಸಿಲುಕಿ ದರ್ಶನ್ ಗೌರವ ಹಾಳಾಗಿದೆ. ಹೀಗಾಗಿ ಅವರನ್ನು ಹೇಗಾದರೂ ಮಾಡಿ ಹೊರಕರೆತರಲೇ ಬೇಕು ಎನ್ನುವ ನಿರ್ಧಾರಕ್ಕೆ ವಿಜಯಲಕ್ಷ್ಮಿ ಬಂದಿದ್ದಾರೆ.

ದರ್ಶನ್ ಮೇಲಿನ ಅಪಾರ ಪ್ರೀತಿ ವಿಜಯಲಕ್ಷ್ಮಿಗೆ ಹೆಚ್ಚು ಬಲ ತುಂಬಿದೆ. ಅವರನ್ನು ಜೈಲಿನಿಂದ ಬಿಡಿಸಿಕೊಂಡು ತಮ್ಮ ಸಂಸಾರವನ್ನು ಮತ್ತೆ ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಲು ವಿಜಯಲಕ್ಷ್ಮಿ ಮನಸ್ಸು ಹಾತೊರೆಯುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ.
ಕಂಡವರ ಸಹವಾಸ ಜೈಲುವಾಸ!
ಒಂದು ವೇಳೆ ದರ್ಶನ್ ತಾನಾಯಿತು ತನ್ನ ಸಂಸಾರ ಆಯ್ತು ಅಂತ ಇದ್ದಿದ್ದರೆ ಇದೆಲ್ಲವೂ ಆಗುತ್ತಿರಲಿಲ್ಲ. ಪವಿತ್ರಾ ಗೌಡ ಸಹವಾಸದಿಂದಾಗಿ ಅವರು ಈ ಸ್ಥಿತಿಗೆ ಬಂದು ತಲುಪಿದ್ದಾರೆ. ದರ್ಶನ್ ಘಟನೆ ಸಮಾಜದಲ್ಲಿ ದಾರಿ ತಪ್ಪುವ ಪ್ರತಿಯೊಬ್ಬ ಷುರಷರಿಗೆ ಪಾಠವಾಗಿದೆ. ಬೇರೆಯವರ ಮಾತು ಎಷ್ಟರ ಮಟ್ಟಿಗೆ ಆಲಿಸಬೇಕು? ಯಾರೊಂದಿಗೆ ಎಷ್ಟು ಸಹವಾಸ ಮಾಡಬೇಕು ಎನ್ನುವುದಕ್ಕೆ ದರ್ಶನ್ ಘಟನೆ ಮಾದರಿಯಾಗಿದೆ.
ಒಟ್ಟಿನಲ್ಲಿ ಮನೆಯಲ್ಲಿ ದರ್ಶನ್ ದರ್ಶನಕ್ಕಾಗಿ ವಿಜಯಲಕ್ಷ್ಮಿ ಹರಸಾಹಸ ಪಡುತ್ತಿದ್ದಾರೆ. ದರ್ಶನ್ ಅವರನ್ನು ಹೊರ ತರುವ ಶ್ರಮದಲ್ಲಿ ವಿಜಯಲಕ್ಷ್ಮಿ ಯಶಸ್ವಿಯಾಗುತ್ತಾರಾ ಕಾದು ನೋಡಬೇಕಿದೆ.
ವಿಜಯಲಕ್ಷ್ಮಿ ತುಂಬಾ ಸ್ಟ್ರಾಂಗ್- ಶಮಿತಾ ಮಲ್ನಾಡ್
ದರ್ಶನ್ ಅವರನ್ನು ಕೆಲ ದಿನಗಳಿಂದ ಸೆಲೆಬ್ರಿಟಿಗಳು ಭೇಟಿ ಮಾಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ಖ್ಯಾತ ಗಾಯಕಿ ಶಮಿತಾ ಮಲ್ಡಾಡ್ ತಮ್ಮ ಸ್ನೇಹಿತೆ ವಿಜಯಲಕ್ಷ್ಮಿ ಎಷ್ಟು ಸ್ಟ್ರಾಂಗ್ ಎಂದು ಹಂಚಿಕೊಂಡಿದ್ದಾರೆ.
'ಈ ಘಟನೆಯಿಂದ ವಿಜಯಲಕ್ಷ್ಮಿ ಡಿಪ್ರೆಶನ್ ಆಗಿರುತ್ತಾಳೆ. ಈ ಸಮಯದಲ್ಲಿ ಏನು ಮಾಡನಾಡುವುದು ಎಂದು ಯೋಚನೆ ನಮಗಿದ್ದರೆ ಆಕೆ ಹಾಗಲ್ಲ. ನಮಗೆ ಸಮಾಧಾನ ಮಾಡುತ್ತಿದ್ದಾಳೆ. ತಲೆ ಕೆಡಿಸಿಕೊಳ್ಳಬೇಡಿ. ಏನೂ ಆಗಲ್ಲ ಎಂದು ನಮಗೆ ಹಾಗೂ ಅಭಿಮಾನಿಗಳಿಗೆ ಧೈರ್ಯ ಹೇಳಿದ್ದಾಳೆ. ಈ ರೀತಿ ಆಗುತ್ತಿರುವುದಕ್ಕೆ ಬೇಸರ ಇದೆ. ದರ್ಶನ್ ಅಲ್ಲಿ ಇರುವುದಕ್ಕೆ ಬೇಸರ ಇದೆ. ಆದರೆ ತಪ್ಪು ಮಾಡಿಲ್ಲ ಅಂದ್ಮೆಲೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ವಿಜಯಲಕ್ಷ್ಮಿ ಹೇಳ್ತಾರೆ. ಆಕೆ ತುಂಬಾನೇ ಸ್ಟ್ರಾಂಗ್. ವಿಜಯಲಕ್ಷ್ಮಿ ಬ್ಯುಸಿನೆಸ್ ನಡೆಸುತ್ತಾರೆ. ಫ್ಯಾಮಿಲಿ ಮ್ಯಾನೇಜ್ ಮಾಡುತ್ತಾರೆ. ಇದುವರೆಗೂ ನಾನು ನೋಡಿರುವ ಮಹಿಳೆಯರಲ್ಲಿ ಆಕೆ ಇರುವಷ್ಟು ಸ್ಟ್ರಾಂಗ್ ಯಾರೂ ಇಲ್ಲ' ಎಂದು ಶಮಿತಾ ಮಲ್ನಾಡ್ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.












Click it and Unblock the Notifications