Vijayalakshmi Darshan: ಹುಟ್ಟುಹಬ್ಬ ಆಚರಿಸಿಕೊಂಡ ವಿಜಯಲಕ್ಷ್ಮಿ ದರ್ಶನ್ : ಫೋಟೋ ವೈರಲ್
ಬೆಂಗಳೂರು, ಜನವರಿ 31: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾದ ದಿನದಿಂದಲೂ ಪತಿ ಪರವಾಗಿ ನಿಂತವರು ವಿಜಯಲಕ್ಷ್ಮಿ. ದರ್ಶನ್ ಅವರನ್ನ ಜೈಲಿನಿಂದ ಹೊರಗೆ ತರಲೇಬೇಕು ಎಂದು ಪಣ ತೊಟ್ಟ ವಿಜಯಲಕ್ಷ್ಮಿ ಕಾನೂನು ಹೋರಾಟ ಹಾಗೂ ಗಂಡನಿಗಾಗಿ ದೇವರ ಮೊರೆ ಹೋಗಿದ್ರು. ಕೊನೆಗೂ ದರ್ಶನ್ ಅವನ್ನ ಅವರನ್ನ ಜೈಲಿನಿಂದ ಬೇಲ್ ಮೇಲೆ ಕರೆತಂದಿದ್ದು, ಇದೀಗ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಹಲವು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕೊಲೆ ಕೇಸ್ ಆರೋಪಿಯಾಗಿರುವ ನಟ ದರ್ಶನ್ ಬಿಡುಗಡೆ ಬಳಿಕ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪೋಸ್ಟ್ ಹಾಕಿಕೊಂಡಿದ್ದಾರೆ. ಕಳೆದ ನವೆಂಬರ್ 11 ರಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಜನ್ಮದಿನವಿತ್ತು. ಆದರೆ, ನಟ ದರ್ಶನ್ ಜೈಲಿನಲ್ಲಿದ್ದ ಕಾರಣ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ.

ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, ರೆಡ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ವಿಭಿನ್ನ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಕೇಕ್ ಕತ್ತರಿಸಿ ಖುಷಿಯಿಂದ ಹಲವು ಪೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಇನ್ನೂ ಬರ್ತಡೆ ಕುರಿತು ಹಂಚಿಕೊಂಡಿರುವ ಫೋಟೋಗೆ ತಡವಾಗಿಯಾದರೂ ಈ ಸಂಭ್ರಮ ಖುಷಿಯಾಗಿದೆ ಎಂದು ಬರೆದುಕೊಂಡಿದ್ದು, ನೆಟ್ಟಿಗರು ಅತ್ತಿಗೆ, ಹ್ಯಾಪಿ ಬರ್ತ್ಡೇ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿ ಬಿಡುಗಡೆಯಾದ ಬಳಿಕ ನಟಿ ಪವಿತ್ರಾಗೌಡ ಅವರು ದೇವರ ಮೊರೆ ಹೋಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಟೆಂಪಲ್ ರನ್ ಆರಂಭಿಸಿರುವ ಪವಿತ್ರಾಗೌಡ ಅವರು, ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಮಹಾಕುಂಭ ಮೇಳ ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೌನಿ ಅಮವಾಸ್ಯೆಯಂದು ಪ್ರಯಾಗ್ ರಾಜ್ನಲ್ಲಿ ಪುಣ್ಯಸ್ನಾನ.. ಈ ಪವಿತ್ರಸ್ನಾನದ ಬಳಿಕ ನೆಗೆಟಿವ್ ಎನರ್ಜಿಯೆಲ್ಲಾ ಮಾಯ ಎಂದು ಪವಿತ್ರಾಗೌಡ ಪೋಸ್ಟ್ ಹಾಕಿಕೊಂಡಿದ್ದಾರೆ.
ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ನಟಿ ಪವಿತ್ರಾ ಗೌಡ, ಜಾಮೀನಿನ ಬಳಿಕ ಹೆಚ್ಚುಹೆಚ್ಚು ದೈವಭಕ್ತಿಗೆ ಮೊರೆ ಹೋಗಿದ್ದಾರೆ.ಜೈಲಿನಿಂದ ಬಿಡುಗಡೆಯಾಗಿ ಬಂದವರೇ ಸೀದಾ, ದೇವಿಯ ದರ್ಶನ್ ಪಡೆದು ಒದ್ದೆ ಮೈನಲ್ಲಿ ಸೇವೆ ಮಾಡಿ ಭಕ್ತಿಯಿಂದ ದೇವರ ಮುಂದೆ ಅಡ್ಡಬಿದ್ದಿದ್ದಾರೆ. ತಾವು ಮೊದಲು ನಡೆಸುತ್ತಿದ್ದ ರೆಡ್ ಕಾರ್ಪೆಟ್ ಶಾಪ್ ಅನ್ನು ಮತ್ತೆ ಓಪನ್ ಮಾಡಿಕೊಂಡು ಆ ಮೊದಲಿನಂತೆ ಮತ್ತೆ ವ್ಯಾಪರ-ವಹಿವಾಟು ಶುರು ಮಾಡಿದ್ದಾರೆ.
ಇದೀಗ ಪವಿತ್ರಾ ಗೌಡ ಮೌನಿ ಅಮವಾಸ್ಯೆಯಂದು ಶಾಹಿ ಸ್ನಾನ ಮಾಡಿ, ಇದ್ರಿಂದ ಪುಣ್ಯ ಸಿಕ್ಕಿದೆ, ನಾನೆ ಧನ್ಯ ಎಂದಿದ್ದಾರೆ. ಪವಿತ್ರಾ ಗೌಡ ಈ ಪೋಸ್ಟ್‌ಗೆ ವಿಭಿನ್ನ ರೀತಿಯ ಕಾಮೆಂಟ್‌ಗಳು ಹರಿದಾಡುತ್ತಿವೆ.












Click it and Unblock the Notifications