ಒಟಿಟಿಯಲ್ಲಿ ಧೂಳೆಬ್ಬಿಸುತ್ತಿರುವ ವಿಜಯ್ ಸೇತುಪತಿ ನಟನೆಯ ಮಹಾರಾಜ
ಭಾರತದ ಖ್ಯಾತ ಚಲನಚಿತ್ರ ನಟರಲ್ಲಿ ಕಾಣಿಸಿಕೊಳ್ಳುವ ಒಂದು ಹೆಸರು ವಿಜಯ್ ಸೇತುಪತಿ. ಇವರು ಯಾವುದೇ ಪಾತ್ರಕ್ಕಾಗಿ ಬಣ್ಣ ಹಚ್ಚಿದರೂ ಸಹ, ಆ ಪಾತ್ರಕ್ಕೆ ನ್ಯಾಯ ಒದಗಿಸುವ ಕಲೆಗಾರ. ಪಾತ್ರದಲ್ಲಿ ಪರಕಾಯ ಪ್ರವೇಶವನ್ನು ಮಾಡವ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ.
ಸೌತ್ ಸೂಪರ್ ಸ್ಟಾರ್ ಸದ್ಯ 'ಮಹಾರಾಜ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಜ ವಿಜಯ್ ಸೇತುಪತಿ ಅವರ 50 ನೇ ಚಿತ್ರ. ಈ ಚಿತ್ರ ಬೆಳ್ಳಿ ಪರದೆಯ ಮೇಲೆ ಸದ್ದು ಮಾಡುತ್ತಿರುವಾಗಲೇ ಒಟಿಟಿಗೆ ಬಂದಿದೆ. ವಿಜಯ್ ಸೇತುವಪತಿ ಅವರು ನೈಜ ನಟನೆಯನ್ನು ನೋಡಿ ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮಹಾರಾಜ ವಿಜಯ್ ಸೇತುಪತಿ ಅವರ ವೃತ್ತಿಜೀವನದ 50 ನೇ ಚಿತ್ರವಾಗಿದೆ
ಬರಹಗಾರ-ನಿರ್ದೇಶಕ ನಿತಿಲನ್ ಸ್ವಾಮಿನಾಥನ್ ಚಿತ್ರದ ಕಥೆಯನ್ನು ಹೆಣೆದು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ಪ್ರತಿ ಕ್ಷಣವೂ ಸಸ್ಪೆನ್ಸ್ ಕಾಯ್ದುಕೊಳ್ಳುವಂಥ ಟ್ವಿಸ್ಟ್ ಗಳನ್ನು ಚಿತ್ರದಲ್ಲಿ ಸೇರಿಸಿದ್ದಾರೆ. ಈ ಚಿತ್ರದ ಮೂಲಕ ಅವರು ತಮ್ಮಲ್ಲಿರುವ ಕ್ಲಾಸಿಕ್ ನಿರ್ದೇಶನವನ್ನು ಸಹ ವಿಶ್ವಕ್ಕೆ ತೋರಿಸಿದ್ದಾರೆ. ಮಹಾರಾಜ ವಿಜಯ್ ಸೇತುಪತಿ ಅವರ ವೃತ್ತಿಜೀವನದ 50 ನೇ ಚಿತ್ರವಾಗಿದ್ದು, ಈ ಚಿತ್ರದ ಮೂಲಕ ಅವರು ನಟನೆಯಲ್ಲಿ ನಂಬರ್ ಒನ್ ಎಂದು ಸಾಬೀತುಪಡಿಸಿದ್ದಾರೆ ಮತ್ತು ಅವರಿಂದ ಈ ಸ್ಥಾನವನ್ನು ಕಸಿದುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ.
ಒಟಿಟಿಯಲ್ಲಿ ನಂಬರ್ ಒನ್
ಈ ಚಿತ್ರವು ಜೂನ್ 14 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ಈಗ ಬಿಡುಗಡೆಯಾದ ಸುಮಾರು ಒಂದು ತಿಂಗಳ ನಂತರ, ಇದು OTT ಗೆ ಬಂದಿದೆ. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆಯನ್ನು ಸಿಕ್ಕಿದೆ. ಅದು ಸ್ವಲ್ಪ ಸಮಯದೊಳಗೆ OTT ನಲ್ಲಿ ನಂಬರ್ ಒನ್ ಸ್ಥಾನ ತಲುಪಿದೆ.

ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರವು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ ಮತ್ತು ಈಗ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚಿತ್ರವು OTT ಪ್ಲಾಟ್‌ಫಾರ್ಮ್‌ನಲ್ಲಿ ಹಿಂದಿಯಲ್ಲಿಯೂ ಲಭ್ಯವಿದೆ, ಇದರಿಂದಾಗಿ ಹಿಂದಿ ಭಾಷಿಕರು ಸಹ ಈ ಚಿತ್ರವನ್ನು ಎಂಜಾಯ್ ಮಾಡಬಹುದಾಗಿದೆ.
ಮಹಾರಾಜರ ಕಥೆ
ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಚಿತ್ರದ ಕಥೆಯು ಮಹಾರಾಜ ಎಂಬ ಸಲೂನ್ ನಡೆಸುವ ವ್ಯಕ್ತಿಯ ಸುತ್ತ ಹೆಣೆಯಲಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವನ ಮತ್ತು ಅವರ ಮಗಳ ಸುತ್ತಮುತ್ತಲಿನ ಕಥೆ ಹೆಣೆಯಲಾಗಿದೆ.












Click it and Unblock the Notifications