ವಿಜಯ ರಾಘವೇಂದ್ರ ಹೊಸ ಸಿನಿಮಾ ಅಬ್ಬರಿಸಲು ರೆಡಿ!

ನಟ ವಿಜಯ ರಾಘವೇಂದ್ರ ಅವರು ಕನ್ನಡ ಸಿನಿಮಾ ಪ್ರಿಯರಿಗೆ ಹಳೇ ಪರಿಚಯ. ಈ ನಟ ಬಾಲನಟನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು, ಮುಂದೆ ಹೀರೋ ಆಗಿ ಮಿಂಚು ಹರಿಸಿದ್ದರು. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದ ವಿಜಯ ರಾಘವೇಂದ್ರ ಇಂದಿಗೂ, ಅಭಿಮಾನಿಗಳ ಫೆವರಿಟ್. ಇಂತಹ ನಟನ ಹೊಸ ಸಿನಿಮಾ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಹಾಗಾದರೆ ಯಾವುದು ಗೊತ್ತೆ ಆ ಸಿನಿಮಾ?

ವಿಜಯ ರಾಘವೇಂದ್ರ & ಭಾವನಾ ಮೆನನ್‌ ನಟನೆಯ 'ಕೇಸ್‌ ಆಫ್ ಕೊಂಡಾಣ' ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ದೇವಿಪ್ರಸಾದ್‌ ಶೆಟ್ಟಿ ನಿರ್ದೇಶನದಲ್ಲಿ ಸಿನಿಮಾ ರೆಡಿಯಾಗಿದ್ದು ರಿಲೀಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರ ಜನವರಿ 26ರಂದು ತೆರೆಕಾಣಲಿದೆ. ಹೀಗಾಗಿ ಚಿತ್ರತಂಡ ಮಾಧ್ಯಮಗಳ ಎದುರು ಹಾಜರಾಗಿ ಮಾಹಿತಿ ಹಂಚಿಕೊಂಡಿದೆ. ಹಾಗಾದರೆ, ತಮ್ಮ ಮುಂದಿನ ಸಿನಿಮಾ ಬಗ್ಗೆ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಹೇಳಿದ್ದಾದರೂ ಏನು? ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

Vijay Raghavendra Spoke About His Upcoming Movie Case Of Kondana

ರಾತ್ರಿಯೇ ಶೂಟಿಂಗ್ ಮಾಡಿದ್ದೀವಿ!

ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ನಟ ವಿಜಯ್ ರಾಘವೇಂದ್ರ, ಹೊಸಬರ ತಂಡ ತಾಳ್ಮೆ ಇಂದ ಕಾದು ಸಂಭಾಷಣೆ ಕೊಟ್ಟಿದ್ದಾರೆ. ಜೋಗಿ ಸರ್ ಅವರಿಗೂ ಧನ್ಯವಾದ. ಸೀತಾರಾಮ್ ಬಿನೋಯ್ ಆದ ಮೇಲೆ ಇನ್ನೊಂದು ಹಂತ ಬೆಳೆಯಬೇಕು. ಕಥೆ ರೂಪದಲ್ಲಿ ಅಥವಾ ಅದನ್ನು ಪ್ರೆಸೆಂಟ್ ಮಾಡುವ ರೀತಿ ಬೆಳವಣಿಗೆಯನ್ನು ಕಥೆ ರೂಪದಲ್ಲಿ ತಂದಿದ್ದರು. ಕೇಸ್ ಕೊಂಡಾಣ ಶೇ. 80 ರಿಂದ 90ರಷ್ಟು ರಾತ್ರಿಯೇ ಶೂಟ್ ಮಾಡಿದ್ದು ವಿಶೇಷವಾಗಿತ್ತು ಎಂದು ಸಿನಿಮಾದ ಬಗ್ಗೆ ಅನುಭವ ಹಂಚಿಕೊಂಡರು.

ನಿರ್ಮಾಪಕ & ನಿರ್ದೇಶಕರು ಹೇಳಿದ್ದೇನು?

ನಿರ್ಮಾಪಕ ಸಾತ್ವಿಕ್ ಹೆಬ್ಬಾರ್, ಸೀತಾರಾಮ್ ಬಿನೋಯ್ ಮಾಡಿದ್ದು ಅನಿವಾರ್ಯದಿಂದ. ಡೈರೆಕ್ಟನ್ ವಿಭಾಗದಲ್ಲಿ ನಾನು ದೇವಿ ಪ್ರಸಾದ್ ಕೆಲಸ ಮಾಡುತ್ತಿದ್ದೇವು. ಸ್ವಾತಂತ್ರ್ಯವಾಗಿ ಸಿನಿಮಾ ಮಾಡಲು ಹೊರಟಾಗ ಆಗಿದ್ದು ಸೀತಾರಾಮ್ ಬಿನೋಯ್. ಈ ಚಿತ್ರಕ್ಕೆ ಜನ ಮೆಚ್ಚುಗೆ ಸಿಕ್ಕಿತ್ತು. ಇನ್ನೊಂದು ಹೆಜ್ಜೆ ಇಟ್ಟಾಗ ಆಗಿದ್ದು ಕೇಸ್ ಆಫ್ ಕೊಂಡಾಣ ಅಂತಾ ತಿಳಿಸಿದರು.

Vijay Raghavendra Spoke About His Upcoming Movie Case Of Kondana

ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಜೋಗಿ ಸರ್ ಜೊತೆಯಲ್ಲಿ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಹೆಮ್ಮೆ ಇದೆ. ವಿಜಯ್ ಸರ್ ಸೆಕೆಂಡ್ ಅವಕಾಶ ಕೊಟ್ಟರು. ಕಥೆ ಕೇಳಿ ಒಕೆ ಅಂದ್ರು. ಅಲ್ಲದೆ, ಸೀತಾರಾಮ್ ಬಿನೋಯ್ ತರ ಸಿನಿಮಾ ಇದಲ್ಲ. ಇದು ಮೂರು ನಾಲ್ಕು ಸ್ಟೋರಿ ಮೇಲೆ ಕಥೆ ಸಾಗುತ್ತದೆ. ಇದು ಐಮ್ಯಾಜಿನರಿ ಕಥೆ, ಹೈಪರ್ ಲಿಂಕ್ ಸಿನಿಮಾ ಅಂತಾ ಮಾಹಿತಿ ನೀಡಿದ್ರು.

'ಕೇಸ್ ಆಫ್ ಕೊಂಡಾಣ' ಹೇಗಿದೆ?

ವಿಜಯ ರಾಘವೇಂದ್ರ ಅವರು ಸಣ್ಣ ಬ್ರೇಕ್ ಬಳಿಕ ವಾಪಸ್ ಬರುತ್ತಿದ್ದಾರೆ. 'ಕೇಸ್ ಆಫ್ ಕೊಂಡಾಣ' ಇದೇ ಗಣರಾಜ್ಯೋತ್ಸವಕ್ಕೆ ರಿಲೀಸ್ ಆಗುತ್ತಿದೆ. ಇದಕ್ಕಾಗಿ ಈಗ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೀತಾರಾಮ್ ಬಿನೋಯ್ ಕ್ರೈಂ ಥ್ರಿಲ್ಲರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರು ಈಗ, ಮತ್ತೊಮ್ಮೆ ವಿಭಿನ್ನ ಕಥಾ ಹಂದರದ 'ಕೇಸ್ ಆಫ್ ಕೊಂಡಾಣ' ತೆರೆಗೆ ತರಲು ಸಜ್ಜಾಗಿದ್ದಾರೆ. ಅದರಲ್ಲೂ ಈ ತಿಂಗಳ ಅಂತ್ಯಕ್ಕೆ ಈ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

ಬೆಂಗಳೂರಿನಲ್ಲೇ ನಡೆಯುವ ಕಥೆ!

ಅಂದಹಾಗೆ ಈ ಚಿತ್ರವು ಸಂಪೂರ್ಣ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದ್ದು, ಆರಂಭದಲ್ಲಿ 3 ಕಥೆ ಪ್ರಯಾಣ ಮುಂದುವರಿಸುತ್ತಾ, ಕೊನೆಯಲ್ಲಿ ಹೇಗೆ ಎಲ್ಲವೂ ಒಂದೇ ಕಡೆಗೆ ಸೇರುತ್ತವೆ? ಅನ್ನೋದೆ ಈ ಸಿನಿಮಾದ ಸ್ಪೆಷಾಲಿಟಿ. ಚಿತ್ರದ ಶೇ. 80 ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆ ಆಗಿದೆ. ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಆ ರಾತ್ರಿ ನಡೆವ ಘಟನೆ ಏನು? ಎಂಬ ಎಲ್ಲಾ ಪ್ರಶ್ನೆಗೂ ಜನವರಿ 26ಕ್ಕೆ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+