Vijay Raghavendra: ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ರಾಘವೇಂದ್ರ

ಚಿನ್ನಾರಿಮುತ್ತ ಖ್ಯಾತಿಯ ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಅವರು ಎರಡನೇ ಮದುವೆಯಾಗಲಿದ್ದಾರೆ ಎಂಬ ವಿಚಾರ ಕೇಳಿಬಂದಿತ್ತು. ಸೋಷಿಯಲ್‌ ಮೀಡಿಯಾಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದರು. ಇದರಿಂದ ಅವರು ಭಾರಿ ನೊಂದಿದ್ದರು. ಆದರೆ ಕೆಲ ದಿನಗಳಿಂದ ವಿಜಯ್‌ ರಾಘವೇಂದ್ರ ಎರಡನೇ ಮದುವೆಗೆ ನಿರ್ಧರಿಸಿದ್ದು, ಖ್ಯಾತ ನಟಿಯನ್ನು ವಿವಾಹವಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ವಿಜಯ್‌ ರಾಘವೇಂದ್ರ ಕೊನೆಗೂ ಮೌನ ಮುರಿದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಲವರು ವಿಜಯ್‌ ರಾಘವೇಂದ್ರ ಅವರು ಎರಡನೇ ಮದುವೆಯಾಬೇಕು ಎಂದು ಸಲಹೆ ನೀಡುತ್ತಿದ್ದರು. ಆದರೆ ಇನ್ನೂ ಕೆಲವರು ನಟಿ ಮೇಘನಾ ರಾಜ್‌ ಅವರೊಂದಿಗೆ ವಿಜಯ್‌ ರಾಘವೇಂದ್ರ ಎರಡನೇ ಮದುವೆ ಆಗಲಿದ್ದಾರೆ ಎಂಬ ಗಾಸಿಪ್‌ ಹಬ್ಬಿಸಿದ್ದರು. ಈ ಎಲ್ಲದರ ಬಗ್ಗೆ ನಟ ವಿಜಯ್‌ ರಾಘವೇಂದ್ರ ಪ್ರತಿಕ್ರಿಯಿಸಿದ್ದು, ತಮ್ಮ ಮುಂದಿನ ನಿರ್ಧಾರ ಏನು? ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

vijay-raghavendra-clarifies-no-second-marriage-not-with-meghana-raj

'ಈ ವದಂತಿಗಳ ಬಗ್ಗೆ ನಾನು ಮೊದಲಿಗೆ ಸ್ಪಷ್ಟೀಕರಣ ಕೊಡುವುದು ನನಗೆ ಇಷ್ಟವಿಲ್ಲ. ಇಂತಹ ವಿಚಾರಗಳಿಂದ ತುಂಬಾ ಹಿಂಸೆಯಾಗುತ್ತೆ, ಒಂದು ಹಂತದಲ್ಲಿ ತುಂಬಾ ಕೋಪ ಕೂಡ ಬರುತ್ತೆ. ಯಾಕೆ ಅಂದ್ರೆ ಪ್ರತಿಯೊಬ್ಬರೂ ಕೂಡ ನನ್ನ ಜೀವನದ ಬಗ್ಗೆ ಮುಂದೆ ಹೇಗೆ? ಅನ್ನುವ ಕಾಳಜಿ ತೋರುತ್ತಾರೆ. ಆ ರೀತಿ ಅವರು ಪ್ರೀತಿ ಕೊಡುತ್ತಾರೆ. ಆದರೆ ಈ ರೀತಿ ಸುದ್ದಿಯಾಗಿ ಹಬ್ಬಿದಾಗ ಕುಟುಂಬಗಳ ಮೇಲೆ ತೀವ್ರ ಪರಿಣಾಮ ಬೀರುತ್ತೆ' ಎಂದು ಯೂಟ್ಯೂಬ್‌ ಚಾನಲ್‌ವೊಂದರ ಜೊತೆ ನಟ ವಿಜಯ್‌ ಬೇಸರ ಹಂಚಿಕೊಂಡಿದ್ದಾರೆ.

'ಎರಡು ಕುಟುಂಗಳಿವೆ, ನನ್ನ ಮಗ ಇದ್ದಾನೆ, ನಾನು ಎರಡನೇ ಮದುವೆ ಬಗ್ಗೆ ಯಾವುದೇ ಮಾತು ಆಡುತ್ತಿಲ್ಲ. ಇದರ ಹಿಂದೆ ಯಾವ ಸತ್ಯವೂ ಇಲ್ಲ. ಅದು ನಟಿ ಮೇಘನಾ ಆಗಿರಬಹುದು, ಇನ್ಯಾರೇ ಆಗಿರಬಹುದು. ಆ ವದಂತಿಗಳ ಹಿಂದೆ ಯಾವುದೇ ಸತ್ಯ ಇಲ್ಲ. ಅದು ನಡೆಯುವುದೂ ಇಲ್ಲ. ನನ್ನ ಬದುಕಿನಲ್ಲಿ ಈಗ ಮತ್ತೊಂದು ಮದುವೆ ಅನ್ನೋದಾಗಲಿ, ಇನ್ನೊಬ್ಬರನ್ನ ನನ್ನ ಬದುಕಲ್ಲಿ ಬರಮಾಡಿಕೊಳ್ಳುವುದೂ ಇಲ್ಲ. ಅದು ಇನ್ನು ಆಗದೇ ಇರುವ ಕೆಲಸ' ಎಂದು ವಿಜಯ್‌ ಕ್ಲಾರಿಟಿ ಕೊಟ್ಟಿದ್ದಾರೆ.

ವಿಜಯ್ ರಾಘವೇಂದ್ರ ಅವರು ಸ್ಪಂದನಾ ಅವರನ್ನ ಪ್ರೀತಿ ಮಾಡಿ ಮದುವೆಯಾಗಿದ್ದರು. ಇವರಿಗೆ ಒಬ್ಬ ಪುತ್ರ ಕೂಡ ಇದ್ದಾನೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿವರಾದ ಅವರು ಸ್ಪಂದನಾ ಬೆಂಗಳೂರಿನಲ್ಲಿಯೇ ಸೆಟಲ್ ಆಗಿದ್ದರು. ಅವರ ತಂದೆ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್. ಸ್ಪಂದನಾ ವಿಜಯ್‌ ರಾಘವೇಂದ್ರ ಅವರು 2023ರಲ್ಲಿ ಬ್ಯಾಂಕಾಕ್‌ಗೆ ತೆರಳಿದ್ದರು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಬಳಿಕ ಒಂಟಿಯಾಗಿದ್ದ ವಿಜಯ್‌ ರಾಘವೇಂದ್ರ ಅವರು ಪತ್ನಿಯ ನೆನಪಿನಲ್ಲೇ ಭಾವುಕರಾಗುತ್ತಿದ್ದರು.

vijay-raghavendra-clarifies-no-second-marriage-not-with-meghana-raj

ಮೇಘನಾ ರಾಜ್‌ ಹೆಸರು ತಳುಕು

ನಟಿ ಮೇಘನಾ ರಾಜ್‌ ಅವರು ಕೂಡ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದರು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಇವರ ಎರಡನೇ ಮದುವೆ ಬಗ್ಗೆಯೂ ವದಂತಿ ಹರಡಿತ್ತು. ಅತ್ತ ವಿಜಯ್‌ ರಾಘವೇಂದ್ರ ಅವರ ಹೆಸರನ್ನು ಎಳೆದು ತಂದು, ಮೇಘನಾ ರಾಜ್‌ ಅವರೊಂದಿಗೆ ಎರಡನೇ ಮದುವೆ ಎಂದು ಗಾಸಿಪ್‌ ಹಬ್ಬಿಸಿದ್ದರು. ಈ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ್ದ ಮೇಘನಾ ರಾಜ್‌ ಕೂಡ ಇದು ಸುಳ್ಳು ಎಂದಿದ್ದರು. ಈ ಮೂಲಕ ಮೇಘನಾ, ವಿಜಯ್‌ ಇಬ್ಬರೂ ಸಹ ಎರಡನೇ ಮದುವೆ ವದಂತಿಗಳಿಗೆ ಬ್ರೇಕ್‌ ಹಾಕಿದ್ದಾರೆ.

ಮೇಘನಾ ರಾಜ್‌ ಅವರು ತಮ್ಮ ಜೀವನದಲ್ಲಿ ಎರಡನೇ ಮದುವೆ ಅನ್ನುವ ಅಧ್ಯಾಯವೇ ಇಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರು. ಸದ್ಯ ತಮ್ಮ ಮಗನನ್ನು ಮುದ್ದಾಗಿ ಬೆಳೆಸುತ್ತಿದ್ದಾರೆ. ಆದರೂ ಅವರ ಎರಡನೇ ಮದುವೆ ವದಂತಿಗಳು ಮುಂದುವರಿಯುತ್ತಲೇ ಇವೆ. ಇತ್ತ ವಿಜಯ್‌ ರಾಘವೇಂದ್ರ ಅವರು ಕೂಡ ತಮ್ಮ ಪತ್ನಿಯನ್ನು ಕಳೆದುಕೊಂಡ ನೋವಿನಲ್ಲೇ ಇದ್ದರೂ ಎರಡನೇ ಮದುವೆ ಎನ್ನುವ ವಿಚಾರ ಪ್ರಸ್ತಾಪವಾಗುತ್ತಲೇ ಇದೆ. ಇಬ್ಬರೂ ಕೂಡ ಗಾಸಿಪ್‌ಗಳನ್ನು ನಗುತ್ತಲೇ ನಿರಾಕರಿಸಿದ್ದಾರೆ. ಎರಡನೇ ಮದುವೆ ಅನ್ನೋದು ನಡೆಯದ ವಿಚಾರ ಎಂದು ಇಬ್ಬರೂ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+