ಲವ್ ಅಲ್ಲಿ ಬಿದ್ದ ಮಿಲ್ಕಿ ಬ್ಯೂಟಿ ವೈಷ್ಣವಿ ಗೌಡ- ಪ್ರೀತಿ ಶುರುವಾಗಿದ್ದು ಹೀಗೆ
ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ನಟಿ ವೈಷ್ಣವಿ ಗೌಡ ಮದುವೆ ಆಗುತ್ತಿರುವ ಸುದ್ದಿ ಅಭಿಮಾನಿಗಳಿಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸದ್ದಿಲ್ಲದ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ ಮದುವೆಯಾಗುತ್ತಿರುವ ಹುಡುಗ ಅನುಕೂಲ್ ಮಿಶ್ರಾ ಕರ್ನಾಟಕದವರಲ್ಲ. ಕನ್ನಡ ಮಾತನಾಡಲು ಕೂಡ ಅವರಿಗೆ ಬರುವುದಿಲ್ಲ. ಅಪ್ಪಟ ಕನ್ನಡತಿಗೆ ಯಾಕಿಂತ ಹುಡುಗ ಸಿಕ್ಕರು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಇದು ನಿಜಕ್ಕೂ ಅರೆಂಜ್ ಮ್ಯಾರೇಜಾ ಅಥವಾ ಲವ್ ಮ್ಯಾರೇಜಾ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಕನ್ನಡದ ಕಿರುತೆರೆಯ ನಟಿ ವೈಷ್ಣವಿ ಗೌಡ ಅವರು ಇತ್ತೀಚಿಗೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಮದುವೆ ಬಗ್ಗೆ ಹಲವು ಕನಸನ್ನು ಹೊಂದಿದ ಸಂಪ್ರದಾಯಸ್ತ ಹುಡುಗಿ ವೈಷ್ಣವಿ ಗೌಡ ಕನ್ನಡ ಬಾರದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ವೈಷ್ಣವಿ ಅವರು ಹಿಂದೊಮ್ಮೆ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮೋಸ ಹೋಗಿದ್ದರು. ಅದಾದ ಬಳಿಕ ಅನುಕೂಲ್ ಮಿಶ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ವೈಷ್ಣವಿ ಗೌಡ ಮದುವೆ ಮಾಡಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆಯಾದರೂ ಹುಡುಗ ಕನ್ನಡಿಗ ಅಲ್ಲ ಅನ್ನೋ ವಿಚಾರ ಕೂಡ ಅಷ್ಟೇ ಬೇಸರ ತಂದಿದೆ. ಅಲ್ಲದೆ ವೈಷ್ಣವಿ ಯಾವುದೇ ಸುಳಿವೂ ಕೂಡ ನೀಡದೆ ನಿಶಿತಾರ್ಥ ಮಾಡಿಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.
ಯಾಕೆಂದರೆ ಮದುವೆ ಆಗುತ್ತಿರುವ ಹುಡುಗ ಸೀರಿಯಲ್ ಅಥವಾ ಸಿನಿಮಾ ಇಂಡಸ್ಟ್ರಿಯವರಲ್ಲ. ಹೀಗಾಗಿ ಈ ನಂಟು ಯಾವ ರೀತಿ ಬೆಸೆಯಿತು ಅನ್ನೋದು ಗೊತ್ತಾಗುತ್ತಿಲ್ಲ. ಸಾಮಾನ್ಯವಾಗಿ ತಂದೆ-ತಾಯಿ ಹುಡುಗನನ್ನು ಹುಡುಕುತ್ತಿದ್ದರೆ ಪಕ್ಕಾ ಕನ್ನಡದವರನ್ನು ಹುಡುಕುತ್ತಾರೆ. ಅವರದ್ದೇ ಆದ ಜಾತಿ ಹುಡುಗನನ್ನು ಹುಡುಕುತ್ತಾರೆ. ಆದರೆ ಅನುಕೂಲ್ ಮಿಶ್ರಾ ಕರ್ನಾಟಕದವರೂ ಅಲ್ಲ, ಗೌಡರೂ ಕೂಡ ಅಲ್ಲ. ಹೀಗಾಗಿ ಇದು ಪಕ್ಕಾ ಲವ್ ಮ್ಯಾರೇಜ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಅನುಕೂಲ್ ಮಿಶ್ರಾ ಉತ್ತರಪ್ರದೇಶದವರು. ಜೊತೆಗೆ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೊಂದಿಷ್ಟು ಜನ ಅನುಕೂಲ್ ಏರ್‌ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದರು. ಇದು ಅನುಕೂಲ್ ಅವರಿಗೆ ಬೇಸರ ತರಿಸಿದೆ. ಆದರೆ ಇದಕ್ಕೆ ಸ್ಪಷ್ಟಣೆ ನೀಡಿದ ವೈಷ್ಣವಿ ಗೌಡ ವಿಡಿಯೋದಲ್ಲಿ ಅನುಕೂಲ್ ಮಿಶ್ರಾ ಏರ್‌ಪೋರ್ಟ್ ಅಲ್ಲಿ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು.
ಇನ್ನೂ ವೈಷ್ಣವಿ ಗೌಡ ಅವರ ತಾಯಿ ಕೂಡ ಕೆಲವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ವೈಷ್ಣವಿಗೆ ಹಿಂದೆ ಆಗಿದ್ದು ಎಂಗೇಜ್‌ಮೆಂಟ್ ಅಲ್ಲ ಅದು ಕೇವಲ ಹೂವು ಮುಡಿಸುವ ಶಾಸ್ತ್ರ ಅಷ್ಟೇ. ಈಗ ಆಗಿದ್ದು ಎಂಗೇಜ್‌ಮೆಂಟ್. ಇದು ವೈಷ್ಣವಿಯ ಮೊದಲ ಎಂಗೇಜ್‌ಮೆಂಟ್, ತಪ್ಪಾಗಿ ಏನೋ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಮಾಡಿಕೊಂಡಿರುವುದೇ ಸುದ್ದಿಯಾಗಿದೆ. ಕೆಲವೊಂದಿಷ್ಟು ಜನ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. 'ವೈಷ್ಣವಿ ದುಡ್ಡು ಹಿಂದೆ ಹೋಗಿದ್ದಾಳೆ. ದುಡ್ಡಿಗೋಸ್ಕರ್ ಆಕೆ ಮದುವೆ ಮಾಡಿಕೊಳ್ಳುತ್ತಿದ್ದಾಳೆ' ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಇವರಿಬ್ಬರನ್ನು ನೋಡಿದರೆ ಇದು ಅರೆಂಜ್ ಮ್ಯಾರೇಜ್ ಅನಿಸುತ್ತಿಲ್ಲ. ಬದಲಿಗೆ ಇದು ಲವ್ ಮ್ಯಾರೇಜ್ ಅನಿಸುತ್ತಿದೆ ಅಂತಲೂ ಕಾಮೆಂಟ್ ಮಾಡುತ್ತಿದ್ದಾರೆ.
ಮೊದಲೇ ನೋವಿನಲ್ಲಿ ಇದ್ದ ಸಂದರ್ಭದಲ್ಲಿ ಅನುಕೂಲ್ ವೈಷ್ಣವಿಗೆ ಪರಿಚಯ ಆಗಿರಬಹುದು ಎನ್ನಲಾಗುತ್ತಿದೆ. ಸ್ನೇಹ ಪ್ರೀತಿಯಾಗಿ ಬದಲಾಗಿರಬಹುದು ಎನ್ನಲಾಗುತ್ತಿದೆ. ಆದರೆ ಇದಕ್ಕೆಲ್ಲಾ ವೈಷ್ಣವಿ ಅವರೇ ಉತ್ತರ ಕೊಡಬೇಕಿದೆ.












Click it and Unblock the Notifications