Updendra: 'ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು..ರಾಘವೇಂದ್ರ: ಉಪೇಂದ್ರ
ಬೆಂಗಳೂರು, ಆಗಸ್ಟ್ 15: ಗುರು ರಾಘವೇಂದ್ರ ದೇವರ ಆರಾಧನೆ ಮತ್ತೋತ್ಸವ ಇತ್ತೀಚೆಗೆ ಜರುಗಿತು. ನೆನ್ನೆ ಗುರುವಾರ ರಾಯರ ದಿನವಾಗಿದ್ದರಿಂದ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬ ರಾಯರ ಆರಾಧನೆಯಲ್ಲಿ ತೊಡಗಿತ್ತು. ಆಗಸ್ಟ್ 14ರಂದು ನಟ ಉಪೇಂದ್ರ ಅವರೂ ಸಹ ನಟಿಸಿರುವ 'ಕೂಲಿ' ಸಿನಿಮಾ ರಿಲೀಸ್. ಸೂಪರ್ ಸ್ಟಾರ್ ರಜಿನಿಕಾಂತ್ ಅವರೊಂದಿಗೆ ಈ ಸಿನಿಮಾದಲ್ಲಿ ಉಪೇಂದ್ರ ಅವರು ನಟಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫುಲ್ ಮಾಕ್ಸ್ ನೀಡಿದ್ದಾರೆ.
ಗುರು ರಾಘವೇಂದ್ರ ಅವರ ಆರಾಧನೆ ಹಿನ್ನೆಲೆಯಲ್ಲಿ ಖುದ್ದು ಉಪೇಂದ್ರ ಅವರೇ ಡಾ.ರಾಜಕುಮಾರ್ ಅವರು 'ದೇವತಾ ಮನುಷ್ಯ' ಚಿತ್ರದ 'ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು... ರಾಘವೇಂದ್ರ' ಎಂಬ ದೇವರ ಹಾಡನ್ನು ಹಾಡುವ ಮೂಲಕ ಉಪೇಂದ್ರ ಅವರು ಗುರು ರಾಯರನ್ನು ನೆನೆದಿರುವ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗುತ್ತಿದೆ. ಬಹುತೇಕ ಸಾಲುಗಳನ್ನು ಅವರು ಹಾಡಿದ್ದಾರೆ. ಇದು ಅವರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ.

ನಟನಾಗಿ, ನಿರ್ದೇಶಕನಾಗಿ ನಟ ಉಪೇಂದ್ರ ಅವರು ಅಪಾರ ಅಭಿಮಾನಿ ಸಂಪಾದಿಸಿದ್ದಾರೆ. ಇದೀಗ ಗಾಯಕರಾಗಿಯು ತಮ್ಮ ಫ್ಯಾನ್ಸ್‌ಗೆ ಇಷ್ಟವಾಗಿದ್ದಾರೆ. ಹಾರ್ಮೋನಿಯಂ ನುಡಿಸುತ್ತಾ ತಬಲಾ ವಾದಕರು, ಭಜನೆ ಸಹಿತ ಗುರು ರಾಘವೇಂದ್ರರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಅದರ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ಗುರುವಾರ ಮಂತ್ರಾಲಯ ಮಾತ್ರವಲ್ಲದೇ ನಾಡಿನ ಬೇರೆ ಬೇರೆ ಕಡೆಗಳಲ್ಲಿ, ಮಠ ಮಾನ್ಯಗಳಲ್ಲಿ ಭಕ್ತವೃಂದ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಕೆಲವು ಸೆಲೆಬ್ರೆಟಿಗಳು ರಾಯರನ್ನು ನೆನೆದಿದ್ದಾರೆ.
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ - ಉಪೇಂದ್ರ @nimmaupendra #DarshanBailJudgement ರಾಯರ ನಂಬಿ @dasadarshan #ರಾಯರಿದ್ದಾರೆ pic.twitter.com/QNLiJeM1ol
— ಸನಾತನ (@sanatan_kannada) August 14, 2025
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ: ಉಪೇಂದ್ರ
ಇತ್ತೀಚೆಗೆ ಡಾ.ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಮೈಸೂರಿನ ಅಭಿಮಾನ ಸ್ಟಡಿಯೋದಲ್ಲಿ ತೆರವುಗೊಳಿಸಲಾಗಿತ್ತು. ಇದಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದವು. ಕೇವಲ ಅಭಿಮಾನಿ ಸಂಘಗಳು ಮಾತ್ರವಲ್ಲದೇ, ಸೆಲೆಬ್ರೆಟಿಗಳು ಸಹ ಪ್ರತಿಕ್ರಿಯಿಸಿದ್ದರು. ಈ ವೇಳೆ ನಟ ಉಪೇಂದ್ರ ಅವರು ತಮ್ಮದೇ ಸ್ಟೈಲಿನಲ್ಲಿ ''ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ'' ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
''ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ಎಂದೆಂದಿಗೂ ಶಾಶ್ವತವಾಗಿದ್ದಾರೆ'' ಎಂದು ಹೇಳಿದ್ದರು. ಈ ಮೂಲಕ ಮೈಸೂರಿನ ಘಟನೆಯನ್ನು ಅವರು ಖಂಡಿಸಿದ್ದಾರೆ. ವಿಷ್ಣು ಅವರು ಸದಾ ನಮ್ಮಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.












Click it and Unblock the Notifications