‘ಕರಿಮಣಿ ಮಾಲೀಕ’ ವೈರಲ್ ಹುಡುಗ ಗುರುಕಿರಣ್ ಸ್ಟುಡಿಯೋಗೆ ಬಂದೇ ಬಿಟ್ಟ!

ಎಲ್ಲಿ ಕೇಳಿದರೂ ಬರೀ 'ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ...' ಅಂತಾ ಉಪೇಂದ್ರ ಸಿನಿಮಾದ ಹಾಡೇ ಕೇಳಿಬರುತ್ತಿದೆ. ರೀಲ್ಸ್ ನೋಡಿ ಅದೇ, ಸೋಷಿಯಲ್ ಮೀಡಿಯಾ ಓಪನ್ ಮಾಡಿ ಅದೇ. ಬರೀ ಕರಿಮಣಿ ಮಾಲೀಕ ನೀನಲ್ಲ ಸಾಂಗ್ ನಮ್ಮ ನಿಮ್ಮ ಕಿವಿಗೆ ಬೀಳುತ್ತಲೇ ಇದೆ. ಆದರೆ ಹೀಗೆ ಈ ಸಾಂಗ್ ವೈರಲ್ ಆಗಲು ಕಾರಣ ಆಗಿದ್ದ ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಕನಕ ಇದೀಗ 'ಕರಿಮಣಿ ಮಾಲೀಕ'ನ ಭೇಟಿ ಆಗಿದ್ದಾರೆ!

ಹೌದು, ಉತ್ತರ ಕರ್ನಾಟಕ ಮೂಲದ ಕನಕ, 'ಉಪೇಂದ್ರ' ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಸಾಲನ್ನು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ರು. ಹೀಗೆ ತನಗೆ ಕೈಕೊಟ್ಟಿದ್ದ ಹುಡುಗಿ ಬಗ್ಗೆ ಕನಕ, ತನ್ನ ನೋವು ತೋಡಿಕೊಂಡಿದ್ದರು. ಇದೀಗ ಕನಕನ ಈ ಒರಿಜಿನಲ್ ಡೈಲಾಗ್ ಹಾಗೂ ಏನಿಲ್ಲ ಏನಿಲ್ಲ ಸಾಂಗ್ ವೈರಲ್ ಆಗುತ್ತಿದೆ. ಅಭಿಮಾನಿಗಳ ಬಾಯಲ್ಲಿ ಮತ್ತೆದೆ ಹಳೆಯ ಹಾಡು ಗುನುಗುವ ರೀತಿ ಮಾಡಿದೆ. ಹೀಗೆ ಫ್ಯಾನ್ಸ್ ಏನಿಲ್ಲ ಏನಿಲ್ಲ ಹಾಡು ಮತ್ತೆ ಎಂಜಾಯ್ ಮಾಡುವ ಸಮಯದಲ್ಲೇ, ವೈರಲ್ ಹುಡುಗ ಕನಕ 'ಕರಿಮಣಿ ಮಾಲೀಕ' ಗುರುಕಿರಣ್ ಅವರನ್ನ ಭೇಟಿ ಮಾಡಿ ಮಾತನಾಡಿದ್ದಾರೆ, ಅದು ಎಲ್ಲಿ ಗೊತ್ತೆ?

Upendra Kannada Movie Song Viral Video Boy Meets The Gurukiran

ಕರಿಮಣಿ ಮಾಲೀಕ + ಕನಕ!

ಅಂದಹಾಗೆ ಈಗ 'ಕರಿಮಣಿ ಮಾಲೀಕ' ಹಾಡಿನ ವೈರಲ್ ಹುಡುಗ ಕನಕ ಬೆಂಗಳೂರಿನಲ್ಲಿ ಗುರುಕಿರಣ್ ಅವರನ್ನ ಭೇಟಿ ಮಾಡಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆ ಮೂಲದ ಈ ಯುವಕ ಇದೀಗ ಬೆಂಗಳೂರಿಗೆ ಬಂದು ಗುರುಕಿರಣ್ ಅವರ ಸ್ಟೂಡಿಯೋಗೆ ಭೇಟಿ ನೀಡಿದ್ದು ಮಾತುಕತೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ 'ಕರಿಮಣಿ ಮಾಲೀಕ' ವೈರಲ್ ಹುಡುಗನಿಗೆ ಕನ್ನಡಿಗರು ಕೂಡ ಆಶೀರ್ವಾದ ಮಾಡುತ್ತಿದ್ದಾರೆ.

'ಏನಿಲ್ಲ ಏನಿಲ್ಲ' ಹವಾ ಜೋರು

ಉಪೇಂದ್ರ ಸಿನಿಮಾ ರಿಲೀಸ್ ಆಗಿ ಎಷ್ಟೋ ವರ್ಷಗಳೇ ಕಳೆದಿವೆ, ಆದ್ರೂ ಆ ಸಿನಿಮಾ ಈಗ ಕೂಡ ತನ್ನ ಖದರ್ ಮರೆತಿಲ್ಲ. ಅದರಲ್ಲೂ ಏನಿಲ್ಲ ಏನಿಲ್ಲ ಹಾಡು ಇಂದಿಗೂ ಸೂಪರ್. 'ಏನಿಲ್ಲ ಏನಿಲ್ಲ' ಹಾಡು ವೈರಲ್ ಆಗಿದ್ದೇ ತಡ, ಸೋಷಿಯಲ್ ಮೀಡಿಯಾ ತುಂಬಾ ಇದೇ ಹಾಡು ಧೂಳೆಬ್ಬಿಸಿದೆ. ರೀಲ್ಸ್ ಸ್ಟಾರ್ಸ್ ಕೂಡ ಹಾಡಿಗೆ ಈಗ ತುಟಿ ಪೋಣಿಸಿ ರೀಲ್ಸ್ ಮಾಡುತ್ತಾ 'ಏನಿಲ್ಲ ಏನಿಲ್ಲ' ಹಾಡಿನ ಸಂಭ್ರಮದಲ್ಲಿ ಕೈಜೋಡಿಸಿದ್ದಾರೆ. ಈ ಮೂಲಕ, ಬರೋಬ್ಬರಿ 25 ವರ್ಷ ನಂತರ ಮತ್ತೊಮ್ಮೆ ಈಗ, ಉಪೇಂದ್ರ ಅವರ ಸಿನಿಮಾ ಹಾಡು ಫುಲ್ ವೈರಲ್ ಆಗುತ್ತಿದೆ.

‘ಏನಿಲ್ಲ ಏನಿಲ್ಲ’ ಹಾಡಿನ ಲಿರಿಕ್ಸ್ಏನಿಲ್ಲ ಏನಿಲ್ಲನಿನ್ನ ನನ್ನ ನಡುವೆ ಏನಿಲ್ಲಏನೇನಿಲ್ಲಏನಿಲ್ಲ ಏನಿಲ್ಲನಿನ್ನ ನನ್ನ ನಡುವೆ ಏನಿಲ್ಲನಿಜದಂತಿರುವ ಸುಳ್ಳಲ್ಲಸುಳ್ಳುಗಳೆಲ್ಲ ನಿಜವಲ್ಲಸುಳ್ಳಿನ ನಿಜವೂ ಸುಳ್ಳಲ್ಲಏನಿಲ್ಲ ಏನಿಲ್ಲಏನೇನಿಲ್ಲಕಳೆದ ದಿನಗಳಲೇನೂ ಇಲ್ಲನೆನಪುಗಳಲಿ ಏನೇನಿಲ್ಲಉತ್ತರ.. ದಕ್ಷಿಣ.. ಸೇರಿಸೋ ದಿಂಬಲಿ ನೀನಿಲ್ಲಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲಕೆದಕಿದರೆ ಏನೇನಿಲ್ಲಏನಿಲ್ಲ ಏನಿಲ್ಲನಿನ್ನ ನನ್ನ ನಡುವೆ ಏನಿಲ್ಲಏನೇನಿಲ್ಲಮನಸಿನೊಳಗೆ ಖಾಲಿ ಖಾಲಿನೀ ಮನದೊಳಗೆ ಇದ್ದರೂಮಲ್ಲಿಗೆ ಸಂಪಿಗೆ ತರದೇ ಹೋದರೂ ನೀ ನನಗೆಓ ನಲ್ಲ, ನೀನಲ್ಲಕರಿಮಣಿ ಮಾಲೀಕ ನೀನಲ್ಲಕರಿಮಣಿ ಮಾಲೀಕ ನೀ.. ನಲ್ಲಏನಿಲ್ಲ ಏನಿಲ್ಲನಿನ್ನ ನನ್ನ ನಡುವೆ ಏನಿಲ್ಲನಿಜದಂತಿರುವ ಸುಳ್ಳಲ್ಲಸುಳ್ಳುಗಳೆಲ್ಲ ನಿಜವಲ್ಲಏನಿಲ್ಲ ಏನಿಲ್ಲನಿನ್ನ ನನ್ನ ನಡುವೆ ಏನಿಲ್ಲಏನೇನಿಲ್ಲಗುರುಕಿರಣ್ ಅವರು ಹೇಳಿದ್ದೇನು?ಹೀಗೆ ಉಪೇಂದ್ರ ಸಿನಿಮಾದ ಹಾಡು ಮತ್ತೊಮ್ಮೆ ಧೂಳೆಬ್ಬಿಸಿದೆ. ಹಾಗೇ ಉತ್ತರ ಕರ್ನಾಟಕ ಪ್ರತಿಭೆ ಕನಕನಿಗೆ ಹೊಸ ಜೀವನ ಕೂಡ ಸಿಕ್ಕಿದೆ. ಇದೀಗ ಗುರುಕಿರಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕನಕ, ತನ್ನ ಸಂತಸ ಹಂಚಿಕೊಂಡಿದ್ದಾನೆ. ಹಾಗೇ ಖುಷಿಯಲ್ಲಿ ಈ ವೈರಲ್ ಹುಡುಗ ಎಮೋಷನಲ್ ಆಗಿದ್ದಾಗ ಗುರುಕಿರಣ್ ಅವರು ಸಮಾಧಾನ ಮಾಡಿದ್ದಾರೆ. ಜೊತೆಗೆ ಆತನ ಎಮೋಷನಲ್ ಕಹಾನಿಗೆ ಕೂಡ ಸಮಾಧಾನದ ಉತ್ತರ ನೀಡಿದ್ದಾರೆ.

'ಏನಿಲ್ಲ ಏನಿಲ್ಲ' ಹಾಡಿನ ಲಿರಿಕ್ಸ್

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ

ಏನೇನಿಲ್ಲ

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ

ನಿಜದಂತಿರುವ ಸುಳ್ಳಲ್ಲ

ಸುಳ್ಳುಗಳೆಲ್ಲ ನಿಜವಲ್ಲ

ಸುಳ್ಳಿನ ನಿಜವೂ ಸುಳ್ಳಲ್ಲ

ಏನಿಲ್ಲ ಏನಿಲ್ಲ

ಏನೇನಿಲ್ಲ

Upendra Kannada Movie Song Viral Video Boy Meets The Gurukiran

ಕಳೆದ ದಿನಗಳಲೇನೂ ಇಲ್ಲ

ನೆನಪುಗಳಲಿ ಏನೇನಿಲ್ಲ

ಉತ್ತರ.. ದಕ್ಷಿಣ.. ಸೇರಿಸೋ ದಿಂಬಲಿ ನೀನಿಲ್ಲ

ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ

ಕೆದಕಿದರೆ ಏನೇನಿಲ್ಲ

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ

ಏನೇನಿಲ್ಲ

ಮನಸಿನೊಳಗೆ ಖಾಲಿ ಖಾಲಿ

ನೀ ಮನದೊಳಗೆ ಇದ್ದರೂ

ಮಲ್ಲಿಗೆ ಸಂಪಿಗೆ ತರದೇ ಹೋದರೂ ನೀ ನನಗೆ

ಓ ನಲ್ಲ, ನೀನಲ್ಲ

ಕರಿಮಣಿ ಮಾಲೀಕ ನೀನಲ್ಲ

ಕರಿಮಣಿ ಮಾಲೀಕ ನೀ.. ನಲ್ಲ

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ

ನಿಜದಂತಿರುವ ಸುಳ್ಳಲ್ಲ

ಸುಳ್ಳುಗಳೆಲ್ಲ ನಿಜವಲ್ಲ

ಏನಿಲ್ಲ ಏನಿಲ್ಲ

ನಿನ್ನ ನನ್ನ ನಡುವೆ ಏನಿಲ್ಲ

ಏನೇನಿಲ್ಲ

ಗುರುಕಿರಣ್ ಅವರು ಹೇಳಿದ್ದೇನು?

ಹೀಗೆ ಉಪೇಂದ್ರ ಸಿನಿಮಾದ ಹಾಡು ಮತ್ತೊಮ್ಮೆ ಧೂಳೆಬ್ಬಿಸಿದೆ. ಹಾಗೇ ಉತ್ತರ ಕರ್ನಾಟಕ ಪ್ರತಿಭೆ ಕನಕನಿಗೆ ಹೊಸ ಜೀವನ ಕೂಡ ಸಿಕ್ಕಿದೆ. ಇದೀಗ ಗುರುಕಿರಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕನಕ, ತನ್ನ ಸಂತಸ ಹಂಚಿಕೊಂಡಿದ್ದಾನೆ. ಹಾಗೇ ಖುಷಿಯಲ್ಲಿ ಈ ವೈರಲ್ ಹುಡುಗ ಎಮೋಷನಲ್ ಆಗಿದ್ದಾಗ ಗುರುಕಿರಣ್ ಅವರು ಸಮಾಧಾನ ಮಾಡಿದ್ದಾರೆ. ಜೊತೆಗೆ ಆತನ ಎಮೋಷನಲ್ ಕಹಾನಿಗೆ ಕೂಡ ಸಮಾಧಾನದ ಉತ್ತರ ನೀಡಿದ್ದಾರೆ.

ಇನ್ನು ನಟ ಉಪೇಂದ್ರ ಅವರು 'ಎ' ಸಿನಿಮಾ ನಂತರ, 'ಉಪೇಂದ್ರ' ಸಿನಿಮಾ ಹೀಗೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಹೀಗಾಗಿ 2000ನೇ ಕಾಲಘಟ್ಟಕ್ಕೆ ಎಂಟ್ರಿ ಕೊಡೋಕೆ ಮೊದಲು ಕನ್ನಡ ಸಿನಿಮಾ ರಂಗ, ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಈ ಮೂಲಕ ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರು ಸಿನಿಮಾ ರಂಗದಲ್ಲಿ ಹಲ್‌ಚಲ್ ಎಬ್ಬಿಸಿದ್ದರು. ಅಲ್ಲದೆ ಮತ್ತೊಂದು ಸೂಪರ್ ಹಿಟ್ ಸಿನಿಮಾವನ್ನ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಾಗೂ ಪ್ರೇಕ್ಷಕರಿಗೆ ನೀಡಿದ್ದರು ನಟ ಉಪೇಂದ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+