Bigg Boss Kannada: ಚೈತ್ರಾ ಬಾಯಿಗೆ ಆಲೂಗಡ್ಡೆ ತುರುಕಿದ ಉಗ್ರಂ ಮಂಜು: ಭಾಷಣಗಾರ್ತಿ ಬಾಯಿ ಬಂದ್!
ಬಿಗ್ ಬಾಸ್ ಕನ್ನಡ ಸೀಜನ್ 11 ಎಂಟು ವಾರಗಳನ್ನು ಪೂರೈಸಿ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧೆ ಈಗೀಗ ರೋಚಕ ಹಂತಕ್ಕೆ ತಲುಪುತ್ತಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿಯೂ ಜೋರಾಗಿದೆ. ಈ ವರೆಗೂ ಜಗಳ, ಬೈದಾಟದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಉಗ್ರಂ ಮಂಜು ಕಳೆದ ವಾರ ತಮ್ಮ ಚಾಣಾಕ್ಯತನದ ಆಟದಿಂದ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆ ಮಂಜುಗೆ ಬಿಗ್ ಬಾಸ್ ಕಳೆಯಿಂದಲೂ ವಿಶೇಷ ಅಧಿಕಾರ ಸಿಕ್ಕಿದ್ದು, ತಮ್ಮ ಉಗ್ರ ಅವಾತಾರ ತೋರಿಸುತ್ತಿದ್ದಾರೆ.
ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಹೀಗಾಗಿ ಮನೆಯ ಕ್ಯಾಪ್ಟನ್ ಮಂಜು ಬಿಗ್ ಬಾಸ್ ಸಾಮ್ರಾಜ್ಯದ ಅಧಿಪತಿಯಾಗಿದ್ದಾರೆ. ಸಾಮ್ರಾಜ್ಯದ ಮಹಾರಾಜ ಮಂಜು ಎಂದು ಸ್ವತಃ ಬಿಗ್ ಬಾಸ್ ಘೋಷಿಸಿದ್ದಾರೆ. ರಾಜನಂತೆ ವೇಷ ತೊಟ್ಟಿರುವ ಮಂಜು ಇತರ ಸ್ಪರ್ಧಿಗಳಿಗೆ ಮನಬದಂತೆ ಆದೇಶ ನೀಡುತ್ತಿದ್ದಾರೆ.

ಮೊದಲಿಗೆ ಭಾಷಣಗಾರ್ತಿ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಬಾಯಿಗೆ ಆಲೂಗಡ್ಡೆ ತುರುಕುವಂತೆ ಆದೇಶ ಕೊಟ್ಟಿದ್ದು, ಉಸಿರು ಬರಬಾರದು ಅವರಿಂದ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಬಾಯಿಗೆ ಆಲೂಗಡ್ಡೆ ತುರುಕಿಕೊಂಡು ಕುಳಿತಿದಿದ್ದಾರೆ. ಇನ್ನು ಬಹುತೇಕ ಎಲ್ಲಾ ಸ್ಪರ್ಧಿಗಳಿಗೂ ಮಂಜು ಬಸ್ಕಿ ಹೊಡೆಸಿದ್ದಾರೆ. ಅಲ್ಲದೇ ಧನರಾಜ್‌ಗೆ ತಮ್ಮ ಸಿಂಹಾಸನದ ಕಾಲಿನ ಬಳಿ ಕೈ ಇಟ್ಟು ರಾಜನಿಗೆ ಬಹುಪರಾಕ್ ಕೂಗುವಂತೆ ಆದೇಶ ಕೊಟ್ಟಿದ್ದಾರೆ.
ಇನ್ನು ಮನೆಯ ಎಲ್ಲಾ ಸ್ಪರ್ಧಿಗಳಿಗೂ ಊಟ ನೀಡದ ಕ್ಯಾಪ್ಟನ್ ಮಂಜು ತಾವೊಬ್ಬರೇ ಡೈನಿಂಗ್ ಟೇಬಲ್ ಮೇಲೆ ಕುಳಿತು ತಿಂಡಿ ತಿಂದಿದ್ದಾರೆ. ಮಂಜು ವರ್ತನೆ ಕಂಡು ಇತರ ಸ್ಪರ್ಧಿಗಳು ಏನೂ ಹೇಳದಿದ್ದರೂ ಚೈತ್ರಾ ಕುಂದಾಪುರ ನಾನು ಇದನ್ನು ಖಂಡಿಸುತ್ತೇನೆ ಎಂದಿದ್ದು, ಧನರಾಜ್ ಅವರು ಹೇಳಿದೆಲ್ಲಾ ಕೇಳಲು ಏನು ಅಂದುಕೊಂಡಿದ್ದಾರೆ ಎಂದು ತಮ್ಮ ಗೆಳೆಯ ಹನುಮಂತನ ಬಳಿ ಹೇಳಿಕೊಂಡಿದ್ದಾರೆ. ಇಂದಿನ ಸಂಚಿಕೆಯ ಈ ಪ್ರೋಮೋ ವೈರಲ್ ಆಗುತ್ತಿದ್ದು, ಸಂಚಿಕೆಯಲ್ಲಿ ಕ್ಯಾಪ್ಟನ್ ಮಂಜು ಉಗ್ರ ಅವತಾರ ಹೇಗಿದೆ ಎನ್ನುವುದನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.












Click it and Unblock the Notifications