Amruthadhare: ಭೂಮಿಕಾಗೆ ವಿಚಿತ್ರ ಕಾಯಿಲೆ, ಸೃಜನ್ ವಿಲನ್ ?! ಹೊಸ 2 ಟ್ವಿಸ್ಟ್ ನಿರೀಕ್ಷೆ
Amruthadhare: ಕನ್ನಡದ ಪ್ರಸಿದ್ಧ ಹಾಗೂ ಜನ ಮೆಚ್ಚಿದ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ / Amruthadhare ಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಶುರುವಾಗಿದೆ. ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದಾರೆ. ಆದರೆ ಈಗ ಒಂದು ಮಗು ಮಾತ್ರ ಇದೆ. ಆದರೆ ಇದೀಗ ಭೂಮಿಕಗೆ ವಿಚಿತ್ರ ಕಾಯಿಲೆ ಅಥವಾ ವಿಚಿತ್ರವಾದ ಆರೋಗ್ಯ ಸಮಸ್ಯೆ ಇದೆ ಎನ್ನುವಂತೆ ಪ್ರೋಮೋ ವಿಡಿಯೋದಲ್ಲಿ ತೋರಿಸಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲಾ ಸೀರಿಯಲ್‌ನಲ್ಲೂ ಮಕ್ಕಳನ್ನು ಕೊಲ್ಲುವ ಅಥವಾ ಮಗು ಜನಿಸುವುದಕ್ಕೂ ಮುಂಚೆಯೇ ಅವಘಡಗಳು ಸಂಭವಿಸುವುದನ್ನು ತೋರಿಸಲಾಗುತ್ತಿತ್ತು. ಅಮೃತಧಾರೆಯಲ್ಲೇ ಮಲ್ಲಿ ಗರ್ಭಿಣಿ ಆಗಿರುವಾಗಲೇ ಅಪಘಾತವಾಗಿ ಮಗು ಸಾವನ್ನಪ್ಪಿತ್ತು. ಇದೀಗ ಎರಡು ಟ್ವಿಸ್ಟ್‌ಗಳು ಈ ಸೀರಿಯಲ್‌ನಲ್ಲಿ ಇದೆ.
ಅಮೃತಧಾರೆಯಲ್ಲಿ ಭೂಮಿಕಾಗೆ ವಿಚಿತ್ರ ಆರೋಗ್ಯ ಸಮಸ್ಯೆ ಇರುವಂತೆ ತೋರಿಸಲಾಗಿದೆ. ಇದರೊಂದಿಗೆ ಮತ್ತೊಂದು ವಿಲನ್ ಎಂಟ್ರಿ ಮಾಡಿಸಬೇಡಿ ಅಂತಲೂ ಪ್ರೇಕ್ಷಕರು ಹೇಳುತ್ತಿದ್ದಾರೆ. ಈಚೆಗೆ ಅಮೃತಧಾರೆಯಲ್ಲಿ ಸೃಜನ್ & ಸುಧಾ ಅವರ ವಿವಾಹವಾಗಿದೆ. ಭೂಮಿಕಾ ಹಾಗೂ ಗೌತಮ್ ಮುಂದೆ ನಿಂತು ಇವರಿಬ್ಬರ ವಿವಾಹವನ್ನು ಮಾಡಿಸಿದ್ದಾರೆ. ಇಷ್ಟು ದಿನ ಮನೆಯವರ ಒಳಿತಿಗಾಗಿ ಹಾಗೂ ಸುಧಾ ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದ ಸೃಜನ್‌ನ ಎಲ್ಲಿ ಮುಂದೆ ವಿಲನ್ ಆಗಿ ತೋರಿಸ್ತಾರೋ ಎನ್ನುವ ಭಯ ಪ್ರೇಕ್ಷಕರಲ್ಲಿ ಶುರುವಾಗಿದೆ. ನಿರ್ದೇಶಕರು ಏನಾದರೂ ಟ್ವಿಸ್ಟ್ ಕೊಡಬಹುದು ಅಂತಾ ಈ ಧಾರಾವಾಹಿಯ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

ಅಲ್ಲ ಸೃಜನ್ ಕೂಡ ಶಕುಂತಲಾ ಕಡೆ ಇಂದ ಬಂದಿದ್ರೆ ಏನ್ ಕಥೆ ಮದುವೆ ಏನೋ ಆಯ್ತು ಮಂದೇನು ಅಂತ ಪ್ರೇಕ್ಷಕರು ಹೇಳ್ತಿದ್ದಾರೆ. ತುಂಬಾ ಚೆನ್ನಾಗಿ ಮೂಡಿ ಬರ್ತಿದೆ. ಇದೇ ರೀತಿ ಮುಂದುವರಿಸಿ, ಸೃಜನ್‌ನ ವಿಲನ್ ಮಾಡಬೇಡಿ. ಈಗಾಗಲೇ ಈ ಸೀರಿಯಲ್‌ನಲ್ಲಿ ತುಂಬಾ ಜನ ವಿಲನ್‌ಗಳು ಇದ್ದಾರೆ ಅಂತಲೂ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ. ಇದರ ನಡುವೆ ಭೂಮಿಕ ಆರೋಗ್ಯದಲ್ಲಿ ಏರುಪೇರಾಗುವಂತೆಯೂ ತೋರಿಸಲಾಗಿದೆ. ಭೂಮಿಗೆ ಸತ್ಯ ಹೇಳೋಕೆ ಹೊರಟ ಗೌತಮ್ ನಿರ್ಧಾರನಾ ಬದಲಾಯಿಸುತ್ತಾ ಡಾಕ್ಟರ್ ಮಾತುಗಳು ಎನ್ನುವ ಪ್ರೋಮೋವನ್ನು ತೋರಿಸಲಾಗಿದೆ. ಈ ಪ್ರೋಮೋದಲ್ಲಿ ಮಗುವಿನ ಬಗ್ಗೆ ಭೂಮಿಕಾ ತೀರ ಗಂಭೀರವಾಗಿ ರಿಯಾಕ್ಟ್ ಮಾಡಿರುವುದು ಇದೆ.
ಸುಳ್ಳಿನ ಮೇಲೆ ಸುಳ್ಳು ಹೇಳುವುದಕ್ಕಿಂತಲೂ ಭೂಮಿಕಾ ಬಳಿ ಅವಳಿ ಮಕ್ಕಳು ಜನಿಸಿದ್ದಾರೆ ಎಂದು ಹೇಳಿ ಬಿಡುತ್ತೇನೆ ಎಂದು ಗೌತಮ್ ಮುಂದಾಗಿರುವಾಗಲೇ ಭೂಮಿಕಾ ಭಯ ಬಿದ್ದಿರುವುದನ್ನು ತೋರಿಸಲಾಗಿದೆ. ಮಗುವಿಗೆ ಇಂಜೆಕ್ಷನ್ ಕೊಡುವುದಕ್ಕೂ ಅಯ್ಯೋ ಬೇಡ... ಡ್ರಾಪ್ಸ್ ಆಗಲ್ವಾ ಅಂತ ಕೇಳಿದ್ದಾರೆ. ಮಗುವಿನ ಬಗ್ಗೆ ಇಷ್ಟೊಂದು ಪ್ಯಾನಿಕ್ ಆಗಿರುವ ವಿಚಾರವನ್ನು ಡಾಕ್ಟರ್ ಅವರು ಗೌತಮ್ ಮುಂದೆ ಹೇಳಿದ್ದಾರೆ. ಸೂಕ್ಷ್ಮ ವಿಚಾರಗಳನ್ನು ತಿಳಿಸಬೇಡಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅಂತ ಸಲಹೆ ನೀಡಿರುವುದು ವಿಡಿಯೋದಲ್ಲಿದೆ.
ನಿಮ್ಮ ಹೆಂಡತಿಗೆ ವಯಸ್ಸಾದ ಮೇಲೆ ಮಗುವಾಗಿರುವುದರಿಂದ ಈ ರೀತಿ ವರ್ತಿಸುತ್ತಿದ್ದಾರೆ. ಮಕ್ಕಳೆಂದ ಮೇಲೆ ತಾಯಂದಿರು ಮುತುವರ್ಜಿ ವಹಿಸುವುದು ಸಾಮಾನ್ಯ ಆದರೆ ಭೂಮಿಕಾ ಅವರು ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂಬರ್ಥದಲ್ಲಿ ಡಾಕ್ಟರ್ ಹೇಳಿರುವುದು ಪ್ರೋಮೋದಲ್ಲಿ ಇದೆ.
ನಾಮಕರಣದ ಸಂಭ್ರಮ: ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ - ಭೂಮಿಕಾ ಅವರ ಪುಟಾಣಿ ರಾಜನಿಗೆ ನಾಮಕರಣದ ಸಂಭ್ರಮ ಶುರುವಾಗಿದೆ. ಭಾಗ್ಯಮ್ಮ ಅವರು ಮುದ್ದು ಮಗುವನ್ನು ಮುದ್ದಿಸುತ್ತಿರುವ ವಿಡಿಯೋ ಇದರಲ್ಲಿ ಇದೆ. ಮಗುವಿನ ಕಾಳಜಿ ಮಾಡುವುದನ್ನು ನೋಡಿ ಗೌತಮ್ ಅಮ್ಮ ಮೊದಲಿನಂತಾದರೆ ಎಷ್ಟು ಚಂದ ಅಂತಾ ಹೇಳಿದ್ದಾರೆ.












Click it and Unblock the Notifications