Manjunath: ಟ್ರೋಲ್ ಮಾಡೋರ ಬಣ್ಣ ಬಯಲು ಮಾಡಿದ ಉಗ್ರಂ ಮಂಜು

ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ಬಿಗ್‌ಬಾಸ್‌ ಮನೆಯಲ್ಲಿ ಇರುವಾಗಲೂ ಫೇಮಸ್ ಹೊರ ಬಂದ ಮೇಲೂ ಫೇಮಸ್ ಆಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಗೌತಮಿ ಹಾಗೂ ಮಂಜು ಅವರನ್ನು ಹೊರಗಡೆ ಆಂಟಿ-ಅಂಕಲ್ ಲವ್ ಸ್ಟೋರಿ ಅಂತೆಲ್ಲಾ ಟ್ರೋಲ್ ಮಾಡಲಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮಂಜು ತಮ್ಮನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಕಾರಣ ಹೇಳಿದ್ದಾರೆ. ಹಾಗಾದರೆ ಮಂಜು ಹೇಳಿದ್ದೇನು?

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಉಗ್ರಂ ಮಂಜು ಹಾಗೂ ಗೌತಮಿಗೆ ತಾವು ಸಾಕಷ್ಟು ಟ್ರೋಲ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಾತನಾಡಿದ ಮಂಜು, 'ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ನಾನು ಹಾಗೂ ಗೌತಮಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದೆವು. ಹೊರ ಬಂದ ಮೇಲೂ ಸಾಕಷ್ಟು ಟ್ರೋಲ್ ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಕಾರಣ ನಾನು ಸ್ಪಷ್ಟವಾಗಿ ಹೇಳಬೇಕು ಅಂದರೆ ಹೊಟ್ಟೆಪಾಡು. ಈ ರೀತಿ ಬರೆದರೆ ಯೂಸರ್ಸ್ ಜಾಸ್ತಿ ಆಗಬಹುದು, ಕಾಮೆಂಟ್ ಜಾಸ್ತಿ ಬರಬಹುದು, ಹಣ ಜಾಸ್ತಿ ಸಿಗಬಹುದು ಅಂತ ಮಾಡಿರುತ್ತಾರೆ. ಇಷ್ಟು ಬಿಟ್ಟರೆ ಇದರಲ್ಲಿ ಏನೂ ಕೂಡ ಇಲ್ಲ' ಎಂದು ಉಗ್ರಂ ಮಂಜು ಹೇಳಿದ್ದಾರೆ.

Trolling about us is for food - ugram manju

'ಒಬ್ಬರು ಒಂದು ಯೂಟ್ಯೂಬ್ ನಡೆಸುತ್ತಿರುತ್ತಾರೆ. ಅದರಿಂದ ಬರೋ ಯೂಸರ್ಸ್ ಅಲ್ಲಿ ಅವರ ಜೀವನ ನಡೆಸಬೇಕು. ಈ ರೀತಿ ಗಾಸಿಪ್ ಅಥವಾ ಸುಳ್ಳು ಸುದ್ದಿ ಹರಡಿದರೆ ಇದರಿಂದ ಸ್ವಲ್ಪ ಜನ ಬರುತ್ತಾರೆ. ಇದರಿಂದ ಅವರ ಹೊಟ್ಟೆ ತುಂಬುತ್ತೆ. ಸ್ವಲ್ಪ ಹಣ ಸಿಗುತ್ತೆ ಅನ್ನೋ ಕಾರಣ ಬಿಟ್ಟರೆ ಅದರಲ್ಲಿ ಸತ್ಯಾಂಶ ಇರೋದಿಲ್ಲ. ಯಾವುದು ಹೇಗೆ ತೋರಿಸಿದರೆ ಏನು ಆಗುತ್ತದೆ ಅನ್ನೋದು ತಿಳಿದಿರುತ್ತದೆ. ಕೊನೆಗೆ ಇದೆಲ್ಲಾ ಮಾಡೋದು ಊಟಕ್ಕಾಗಿ' ಎಂದು ಮಂಜು ಗಾಸಿಪ್ ಬಗ್ಗೆ ಮಾತನಾಡಿದ್ದಾರೆ.

ನಾವು ಏನೋ ಮಾತನಾಡಿರುತ್ತೇನೆ. ಆದರೆ ಅದನ್ನು ಹೇಗೆ ತೋರಿಸುತ್ತಾರೆ ಅನ್ನೋದು ಅದು ಅವರವರ ಇಚ್ಚೆಗೆ ಬಿಟ್ಟ ವಿಚಾರ. ಆದರೆ ಅದನ್ನು ನೆಗಿಟಿವ್ ಆಗಿ ತೋರಿಸಿದಾಗ ಬೇರೆಯವರಿಗೆ ಬೇಸರ ಆಗುತ್ತೆ ಅನ್ನೋ ಸಣ್ಣ ಕಲ್ಪನೆ ಕೂಡ ಇರೋದಿಲ್ಲ. ಸುಮಾರಷ್ಟು ಫನ್ನಿ ವಿಡಿಯೋ ಹಾಗೂ ಸುದ್ದಿಗಳನ್ನು ನೋಡಿ ನಾವೇ ನಗಾಡಿದ್ದೇವೆ. ಕೆಲವೊಂದು ಬೇಸರ ಕೂಡ ಆಗಿದೆ ಎಂದು ಮಂಜು ಬೇಸರ ವ್ಯಕ್ತಪಡಿಸಿದ್ದಾರೆ.

ಗೌತಮಿ ವಿಚಾರ ಕೇಳಿದರೆ ನನಗೇನು ಅನಿಸಲ್ಲ. ನನಗೆ ಏನ್ ಅನಿಸುತ್ತೋ ಅದನ್ನು ನಾನು ಹೇಳುತ್ತೇನೆ. ನೀವು ಅದನ್ನು ಹೇಗೆ ಬೇಕಾದರೂ ತೋರಿಸಬಹುದು. ಹೇಗೆ ಬೇಕಾದರೂ ಹೇಳಬಹುದು. ಬಿಗ್‌ಬಾಸ್‌ ಅನ್ನು ಎಲ್ಲರೂ ನೋಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಏನು ನಡೆಯುತ್ತಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಅದನ್ನು ನೀವು ನಿಮಗೆ ಹೇಗ್ ಬೇಕೋ ಹಾಗೆ ಟ್ರೋಲ್ ಮಾಡಿದರೆ ಏನ್ ಮಾಡ್ಲಿಕ್ ಆಗುತ್ತೆ ಎಂದು ಉಗ್ರಂ ಮಂಜು ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ಯಾರೂ ಕೂಡ ಪರ್ಫೆಕ್ಟ್‌ ಅಲ್ಲ. ಮಾತು ಬರುತ್ತೆ. ಬಾಯಿ ತಪ್ಪಿ ಬಂದಾಗ ಅದಕ್ಕೆ ಒಂದು ಕ್ಷಮೆ ಅಂತ ಇರುತ್ತದೆ. ಆದರೆ ಅದನ್ನೂ ಕೂಡ ಜನ ಟ್ರೋಲ್ ಮಾಡ್ತಾರೆ. ನಾವು ಹೇಳಿದ್ದನ್ನು ತಿರುಚಿ ತೋರಿಸುತ್ತಾರೆ ಅಂದರೆ ಇದಕ್ಕೆ ನಾವು ಏನು ಹೇಳಲು ಸಾಧ್ಯ ಎಂದು ಮಂಜು ಟ್ರೋಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಟಾಪ್ 5 ಸ್ಪರ್ಧಿಯಾಗಿ ಉಗ್ರಂ ಮಂಜು ಹೊರಬಂದಿದ್ದಾರೆ. ಆದರೆ ಹೊರಗಡೆ ಅವರ ಬಗ್ಗೆ ಟ್ರೋಲ್ ಮಾಡಿದ್ದಕ್ಕೆ ಸಾಕಷ್ಟು ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+