Trivikram-Bhavya Gowda: ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಆ ರಾತ್ರಿ ನಡೆದ ಸತ್ಯ ಬಿಚ್ಚಿಟ್ಟ ಚೈತ್ರಾ
ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಕೇಲವ 15 ದಿನಗಳು ಉಳಿದಿದೆ. ಬಿಗ್ ಫಿನಾಲೆ ತಲುಪಲು ಹಲವು ಸ್ಪರ್ಧಿಗಳು ರೆಡಿಯಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ನಡುವಿನ ಸ್ನೇಹಕ್ಕಿಂತ ಹೆಚ್ಚಿನ ಬಾಂಧವ್ಯವಿದೆ.
ಕಳೆದ ಡಿಸೆಂಬರ್ 20ರ ಎಪಿಸೋಡ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್, ಭವ್ಯಾಗೆ ಬಿಗ್ ಬಾಸ್ ಮನೆಯಲ್ಲಿಯೇ 'ಐ ಲವ್ ಯೂ' ಎಂದು ಹೇಳಿದ್ದಾರೆ. ಇಬ್ಬರ ನಡುವಿನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗಿದೆ.

ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಸ್ಪರ್ಧಿಗಳು ಅನ್ನುವುದಕ್ಕಿಂತ ಉತ್ತಮ ಬಾಂಧವ್ಯ ಹೊಂದಿದ್ದು, ಕ್ಲೋಸ್ ಆಗಿ ಇದ್ದಾರೆ. ಇನ್ನೂ ಕಳೆದ ಭಾನುವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಚೈತ್ರ ಕುಂದಾಪುರ ಅವರು ಅವರಿಬ್ಬರ ಪ್ರೇಮದ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.
ಈ ವಾರ ಎಲಿಮಿನೇಟ್ ಆಗಿ ಹೊರ ಬಂದಿರುವ ಚೈತ್ರಾ ಕುಂದಾಪುರ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿ, ಬಿಗ್ ಬಾಸ್ ಮನೆಯಲ್ಲಿ ನಡೆದ ಹಲವು ವಿಚಾರಗಳ ಕುರಿತು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. 'ಭವ್ಯಾ ಮತ್ತು ತ್ರಿವಿಕ್ರಮ್ ಬಗ್ಗೆ ನಾನು ಮಾತನಾಡುವುದು ಎಷ್ಟು ಸರಿ ತಪ್ಪು ಅನ್ನೋದು ನನಗೆ ಗೊತ್ತಿಲ್ಲ ಆದರೆ ಇದು ಅವರ ಹೊರಗಿನ ಬದುಕಿನ ಬಗ್ಗೆ ದೊಡ್ಡ ಪ್ರಶ್ನೆಯಾಗುತ್ತದೆ. ಇದು ಟೆಲಿಕಾಸ್ಟ್ ಆಗಿಲ್ಲ ಅನ್ಸುತ್ತೆ ಎಂದು ಚೈತ್ರಾ ಕುಂದಾಪುರ ಅವರು ತಿಳಿಸಿದ್ದಾರೆ.
ಇನ್ನೂ ಭವ್ಯಾ ಜೊತೆ ತ್ರಿವಿಕ್ರಮ್ ಏನ್ ಮಾತನಾಡಿದ್ದರು ಅದಾದ ಮೇಲೆ ಇಡೀ ರಾತ್ರಿ ನಾನು ತ್ರಿವಿಕ್ರಮ್ ಮಾತನಾಡಿದ್ದೀವಿ. ಅಕ್ಕ ನಾನು ಇಷ್ಟು ದಿನಗಳ ನಂತರ ಭವ್ಯಾಗೆ ಹೇಳಿದ್ದೀನಿ ಆಟಕ್ಕೆ ಅಡ್ಡ ಆಗಬಾರದು ಅನ್ನೋ ಕಾರಣಕ್ಕೆ ಅಡ್ಡ ಆಗಬಾರದು ಕೂಡ. ಮನೆಯಿಂದ ಆಚೆ ಹೋದ ಮೇಲೆ ನಾನು ಸ್ವಲ್ಪ ಸಮಯ ಕೊಡುತ್ತೀನಿ.
ಅಲ್ಲಿಂದ ಆಚೆ ಏನಾಗುತ್ತೆ ಗೊತ್ತಿಲ್ಲ. ಕೆಲವೊಂದು ವಿಚಾರಗಳನ್ನು ನಾವು ಚರ್ಚೆ ಮಾಡಿದ್ದೀವಿ ಆದರೆ ಅದು ವೈಯಕ್ತಿಕ ಜೀವನದ ಬಗ್ಗೆ ಆಗಿರುವ ಕಾರಣ ಅದರ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ ಎಂದು ಬಿಗ್ ಬಾಸ್ ಮನೆಯಲ್ಲಿ ಸಂಗತಿಯನ್ನ ಚೈತ್ರಾ ಕುಂದಾಪುರ ಅವರು ಖಾಸಗಿ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ.
ಇದು ಅವಶ್ಯಕತೆ ಇದ್ಯಾ ಈಗ? ಎಂದು ತ್ರಿವಿಕ್ರಮ್‌ನ ಹಲವು ಸಲ ಪ್ರಶ್ನೆ ಮಾಡಿದ್ದೀನಿ. ಆಗ ತ್ರಿವಿಕ್ರಮ್ ಹೇಳಿದ್ದು ಏನು ಅಂದ್ರೆ ಈಗ ನಾನು ಹೇಳಿಲ್ಲ ಅಂದ್ರೆ ಆಟಕ್ಕೆ ಬಳಸಿಕೊಂಡೆ ಅನ್ನೋ ಮಾತುಗಳು ಬರುತ್ತದೆ ಹೀಗಾಗಿ ಹೇಳಿದ್ದೀನಿ. ಇದರ ಮೇಲೆ ಅವರಿಗೆ ಉಳಿದಿದ್ದು.
ತ್ರಿವಿಕ್ರಮ್ ಒಂದು ಕಲ್ಲು ಬಂಡೆ ಇದ್ದಂತೆ ಯಾವತ್ತೂ ಏನೂ ಹೇಳಿಕೊಳ್ಳುವುದಿಲ್ಲ ಹಾಗೂ ನಿರೀಕ್ಷೆ ಮಾಡುವುದಿಲ್ಲ. ನನ್ನ ಕಡೆಯಿಂದ 100% ಕೊಡ್ತೀನಿ ಹಾಗೆ ಅವರಿಂದ 100% ಬರ್ಬೇಕು ಅಂತ ನಾನು ನಿರೀಕ್ಷೆ ಮಾಡುವುದಿಲ್ಲ. ಭವ್ಯಾ ಒಪ್ಪಿಕೊಂಡಿದ್ದಾರಾ ಅನ್ನೋದು ನನಗೆ ಗೊತ್ತಿಲ್ಲ ಆದರೆ ಇದು ಅವರ ವೈಯಕ್ತಿಕ ವಿಚಾರಕ್ಕೆ ಬಂದಿದ್ದು. ತ್ರಿವಿಕ್ರಮ್ ತುಂಬಾ ಮೆಚ್ಯೂರಿಟಿ ಇರುವ ವ್ಯಕ್ತಿ ಆದರೆ ಈ ವಿಚಾರದ ಬಗ್ಗೆ ಭವ್ಯಾ ಜೊತೆ ಮಾತನಾಡಲು ಸಮಯ ಸಿಗಲಿಲ್ಲ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.












Click it and Unblock the Notifications