'ಟಾಕ್ಸಿಕ್‌'ಗೆ ಹೆದರಲ್ಲ, ಅದೇ ದಿನ ನಮ್ಮ 'ಧುರಂದರ್‌-2' ರಿಲೀಸ್‌ ಆಗುತ್ತೆ: ಚಿತ್ರತಂಡ

ನಟ ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಜೊತೆ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು 'ಧುರಂಧರ್-2' ಬಿಡುಗಡೆಯನ್ನು ಮುಂದೂಡಲಾಗುತ್ತದೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಡಿದ್ದವು. ಆದರೆ ಇದೀಗ ಆ ಎಲ್ಲ ಊಹಾಪೋಹಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಧುರಂಧರ್-2 ಅದೇ ದಿನಾಂಕದಂದೇ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ.

ಬಾಲಿವುಡ್‌ ನಟ ರಣವೀರ್ ಸಿಂಗ್ ಅಭಿನಯದ ಭರ್ಜರಿ ಹಿಟ್ ಸಿನಿಮಾ 'ಧುರಂಧರ್' ಸೀಕ್ವೆಲ್ ಕುರಿತ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಟಾಕ್ಸಿಕ್‌ ಕ್ರೇಜ್‌ ಕೂಡ ಜೋರಾಗಿದೆ. ಎರಡೂ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆ ಇರುವುದರಿಂದ ಒಂದೇ ದಿನ ಸಿನಿಮಾ ರಿಲೀಸ್‌ ಆಗಿ ಕ್ಲ್ಯಾಶ್‌ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ತೆರೆಕಂಡ ಧುರಂದರ್‌ ಬಾಕ್ಸಾಫೀಸ್‌ನಲ್ಲಿ ಭಾರೀ ಸದ್ದು ಮಾಡಿದ್ದರಿಂದ ಸೀಕ್ವೆಲ್‌ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಆದರೆ ಯಶ್‌ ಅಭಿನಯದ ಸಿನಿಮಾ ಹಲವು ವರ್ಷಗಳ ಬಳಿಕ ತೆರೆಕಾಣುತ್ತಿದ್ದು, ಇತ್ತೀಚಿನ ಟೀಸರ್‌ ಕೂಡ ಹುಚ್ಚೆಬ್ಬಿಸಿದೆ.

Toxic vs Dhurandhar 2 Box Office Clash Confirmed No Change In Release Date

ಈ ದಿನಾಂಕವೇ ಅಂತಿಮ

ಇದರ ಬೆನ್ನಲ್ಲೇ ಧುರಂದರ್‌ ಸಿನಿಮಾ ರಿಲೀಸ್‌ ದಿನಾಂಕ ಬದಲಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಮಾರ್ಚ್ 19ರಂದೇ ಧುರಂಧರ್-2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ದಿನಾಂಕ ಅಂತಿಮವಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ನಿರ್ದೇಶಕ ಆದಿತ್ಯ ಧರ್ ಅವರ ಮೂಲಗಳು ಸ್ಪಷ್ಟಪಡಿಸಿವೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

ಮಾರ್ಚ್ 19ಕ್ಕೆ ಧುರಂಧರ್-2 ರಿಲೀಸ್ ಡೇಟ್ ಶೇ.100ರಷ್ಟು ಫೈನಲ್ ಆಗಿದ್ದು, ಮುಂದೂಡುವ ಪ್ರಶ್ನೆಯೇ ಇಲ್ಲ. ಟಾಕ್ಸಿಕ್ ಜೊತೆ ಕ್ಲ್ಯಾಶ್ ಆಗುತ್ತಿದೆ ಎಂಬ ಕಾರಣಕ್ಕೆ ಸಿನಿಮಾ ಮುಂದೂಡಲಾಗುತ್ತದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು. ಧುರಂಧರ್ ಚಿತ್ರವನ್ನು ತುಳಿಯುವ ಉದ್ದೇಶದಿಂದ ಕೆಲವರು ಉದ್ದೇಶಪೂರ್ವಕವಾಗಿ ಈ ರೀತಿಯ ವದಂತಿಗಳನ್ನು ಹರಡುತ್ತಿದ್ದಾರೆ. ಮೊದಲ ಭಾಗ ಬಿಡುಗಡೆಯ ಸಮಯದಲ್ಲೂ ಇದೇ ರೀತಿಯ ಸುಳ್ಳು ಸುದ್ದಿಗಳು ಹರಡಿದ್ದವು ಎಂದು ಹೇಳಿಕೊಂಡಿದೆ.

ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಧುರಂಧರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಸಾಧನೆ ಮಾಡಿತ್ತು. ಚಿತ್ರವು ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಭಾರೀ ಪ್ರತಿಕ್ರಿಯೆ ಪಡೆದುಕೊಂಡು, 2025ರ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತ್ತು. ಜಾಗತಿಕವಾಗಿ ₹1283 ಕೋಟಿ ಗಳಿಕೆ ಮಾಡಿದ್ದು, ಭಾರತದಲ್ಲಿ ₹989.9 ಕೋಟಿ ಹಾಗೂ ವಿದೇಶಗಳಲ್ಲಿ ₹293.6 ಕೋಟಿ ಗಳಿಕೆ ಕಂಡಿತ್ತು.

ಈ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಧುರಂಧರ್-2 ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಇತ್ತ ಯಶ್ ಅಭಿನಯದ ಟಾಕ್ಸಿಕ್ ಕೂಡ ದೇಶಾದ್ಯಂತ ಭಾರೀ ಹೈಪ್ ಸೃಷ್ಟಿಸಿದ್ದು, ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪೈಪೋಟಿಗೆ ಕಾರಣವಾಗಲಿದೆ. ಆದರೆ ಟಾಕ್ಸಿಕ್‌ಗೆ ಹೆದರಲ್ಲ ಎಂಬ ಸಂದೇಶದೊಂದಿಗೆ ಧುರಂಧರ್-2 ತಂಡ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಮಾರ್ಚ್ 19ರಂದು ಸಿನಿಪ್ರೇಕ್ಷಕರಿಗೆ ಎರಡು ಬಿಗ್ ಸಿನಿಮಾಗಳ ನಡುವಿನ ಭರ್ಜರಿ ಸಮರ ನೋಡಲು ಅವಕಾಶ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+