Toxic: ಜೈ ಟಾಕ್ಸಿಕ್‌, ಯಶ್‌ ನಮ್ಮೂರ ಹೆಮ್ಮೆಯ ನಟ: ಟೀಸರ್‌ಗೆ ಯೋಗರಾಜ್‌ ಭಟ್‌ ಮೆಚ್ಚುಗೆ

Toxic Teaser: "ಟಾಕ್ಸಿಕ್‌" ಸಿನಿಮಾದ ಮತ್ತೊಂದು ಟೀಸರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಈ ಬಹುನಿರೀಕ್ಷಿತ ಚಿತ್ರಕ್ಕೆ ದೇಶ-ವಿದೇಶಗಳ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್‌ನಲ್ಲಿ ಯಶ್‌ ಅವರ ಹೊಸ ಅವತಾರ ಹಾಗೂ ಹಾಲಿವುಡ್‌ ಮಟ್ಟದ ಮೇಕಿಂಗ್‌ ಸಿನಿಪ್ರೇಮಿಗಳನ್ನು ಆಕರ್ಷಿಸಿವೆ.

ಟಾಕ್ಸಿಕ್‌ ಇದೊಂದು ಅಸಾಧಾರಣ ಹೆಜ್ಜೆ

ಟೀಸರ್‌ ಆರಂಭದಿಂದಲೇ ಯಶ್‌ ಅವರ ಪಾತ್ರ ಹಾಗೂ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಆ್ಯಕ್ಷನ್‌ ಸನ್ನಿವೇಶಗಳು, ಸ್ಟೈಲಿಷ್‌ ಲುಕ್‌, ಹಿನ್ನೆಲೆ ಸಂಗೀತ ಹಾಗೂ ಸಿನೆಮಾಟೋಗ್ರಫಿ ಎಲ್ಲವೂ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ನಿರೂಪಿಸುತ್ತಿದೆ. ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ಅವರು ಟಾಕ್ಸಿಕ್‌ ಟೀಸರ್‌ ಕುರಿತು ಪ್ರತಿಕ್ರಿಯಿಸಿ, "ಟಾಕ್ಸಿಕ್‌ ಇದೊಂದು ಅಸಾಧಾರಣ ಹೆಜ್ಜೆ. ನಮ್ಮೂರ ಹೆಮ್ಮೆಯ ನಟನ ಅಭೂತಪೂರ್ವ, ಸಾಹಸಮಯ ಜಾಗತಿಕ ಜರ್ನಿ ಚಿತ್ರದ ತುಣುಕಿನಲ್ಲೇ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಜೈ ಕನ್ನಡ, ಜೈ ದೇಶ, ಜೈ ಜಗತ್ತು, ಜೈ ಜನತೆ, ಜೈ ಟಾಕ್ಸಿಕ್‌" ಎಂದು ಶ್ಲಾಘಿಸಿದ್ದಾರೆ.

Toxic Teaser

ಸಖತ್ ಕ್ರೇಜಿ ಎಂದ ರಿಷಬ್‌

ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, "ಟಾಕ್ಸಿಕ್‌, ಇದು ಸಖತ್ ಕ್ರೇಜಿಯಾಗಲಿದೆ!!! ನಮ್ಮ ಪ್ರಿಯ ರಾಕಿಂಗ್ ಸ್ಟಾರ್‌ಗೆ ಅಪಾರ ಪ್ರೀತಿ ಹಾಗೂ ಹೃತ್ಪೂರ್ವಕ ಶುಭಾಶಯಗಳು" ಎಂದು ಯಶ್‌ಗೆ ಶುಭ ಹಾರೈಸಿದ್ದಾರೆ. ಅವರ ಈ ಸಂದೇಶ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ. ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 3 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಟ್ರೆಂಡಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಾಮೆಂಟ್‌ ಸೆಕ್ಷನ್‌ನಲ್ಲಿ ಅಭಿಮಾನಿಗಳು "ಗ್ಲೋಬಲ್‌ ಸ್ಟಾರ್‌ ಯಶ್‌", "ಕೆಜಿಎಫ್ ನಂತರ ಮತ್ತೊಂದು ಬ್ಲಾಕ್‌ಬಸ್ಟರ್‌ ಖಚಿತ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇನ್ನು ಟೀಸರ್‌ ಆರಂಭವಾಗುವುದೇ ರಹಸ್ಯಮಯ ವಾತಾವರಣದಲ್ಲಿ, ಕತ್ತಲೆಯ ನಡುವೆ ಗನ್‌ಫೈಟ್‌ ಮತ್ತು ಆ್ಯಕ್ಷನ್‌ ಸನ್ನಿವೇಶಗಳು ಇವೆಲ್ಲವೂ ಯಶ್‌ ಅಭಿಮಾನಿಗಳ ಗಮನ ಸೆಳೆದಿದೆ. ಯಶ್‌ ಅವರ ಲುಕ್‌ ಹಿಂದೆಂದಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದು, ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಯಶ್‌ ಅವರ ಹಿಂದಿನ ಯಶಸ್ಸುಗಳಿಂದ ನಿರೀಕ್ಷೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಚಿತ್ರವೂ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಬರೆಯಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.

ಟೀಸರ್‌ನಿಂದಾಗಿ ಈ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ತಲುಪಿಸುವ ಉದ್ದೇಶ ಸ್ಪಷ್ಟವಾಗುತ್ತಿದೆ. ಕಥೆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರದಿದ್ದರೂ, ಟೀಸರ್‌ನ ದೃಶ್ಯಗಳು ಚಿತ್ರದ ಕಥೆ ವಿಭಿನ್ನವಾಗಿರಬಹುದೆಂಬ ಸೂಚನೆ ನೀಡುತ್ತಿವೆ. ಮಾರ್ಚ್‌ 19ಕ್ಕೆ ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್‌ ಆಗುತ್ತಿದ್ದು, ಟೀಸರ್‌ ಸೃಷ್ಟಿಸಿರುವ ಹೈಪ್‌ ನೋಡಿದರೆ ಟಾಕ್ಸಿಕ್‌ ಕನ್ನಡ ಚಿತ್ರರಂಗದ ಮತ್ತೊಂದು ಮಹತ್ವದ ಅಧ್ಯಾಯವಾಗಲಿದೆ ಎಂಬ ನಿರೀಕ್ಷೆಯೂ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+