Singri Gowda Passes Away: ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ
Singri Gowda Passes Away: ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನರಾಗಿದ್ದಾರೆ. ನಿನ್ನೆ (ಜನವರಿ 4) ರಾತ್ರಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೆಂಚುರಿ ಗೌಡ ಅವರು ಜನವರಿ 4ರ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೇಗೌಡನ ಕೊಪ್ಪಲು ಗ್ರಾಮದಲ್ಲಿ ನಿಧನರಾಗಿದ್ಧಾರೆ ಎಂದು ತಿಳಿದುಬಂದಿದೆ.

ತಿಥಿ ಸಿನಿಮಾದ ಮೂಲಕ ಸೆಂಚುರಿ ಗೌಡ ಎಂದು ಸಂಗ್ರೇಗೌಡ ಖ್ಯಾತಿ ಪಡೆದಿದ್ದರು. ಇಂದು ಕೊಪ್ಪಲಿನಲ್ಲಿ ಸೆಂಚುರಿ ಗೌಡ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಇದೇ ತಿಥಿ ಸಿನಿಮಾ ಮೂಲಕ ಖ್ಯಾತಿ ಆಗಿದ್ದ ಗಡ್ಡಪ್ಪ ಅವರು ಕೂಡ ನಿಧನರಾಗಿದ್ದರು.
ಹಲವು ಪ್ರಶಸ್ತಿ ಗೆದ್ದ ತಿಥಿ ಸಿನಿಮಾ: 100 ವರ್ಷ ವಯಸ್ಸು ದಾಟಿದರೂ ಸಹ ಅವರು ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಸಿನಿ ಪ್ರೇಮಿಗಳ ಮನ ಗೆದ್ದಿದ್ದರು. 2015ರಲ್ಲಿ ಬಿಡುಗಡೆ ಆಗಿದ್ದ ಇವರ ತಿಥಿ ಸಿನಿಮಾ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆ ಪಡೆದುಕೊಂಡಿದೆ.
ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಅವರು 2025ರ ನವೆಂಬರ್ 12ರಂದು ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿದ ನಿಧನರಾಗಿದ್ದರು. ಇವರು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು.
ಗಡ್ಡಪ್ಪ ಅವರಿಗೆ ಹಿಂದೆಯೇ ಪಾರ್ಶ್ವ ವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯ ಆಗಿರಲಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣ ಇರಲಿಲ್ಲ. ಅಷ್ಟೇ ಅಲ್ಲದೆ ಹೃದಯ ಕಾಯಿಲೆ ಸಂಬಂಧಿ ಕಾಯಿಲೆ ಹಾಗೂ ಇತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿದ್ದವು. ಆದರೆ, ಇದೀಗ ಅವರು ನಿಧನ ಹೊಂದಿದ ಕೇವಲ ಕೆಲವೇ ತಿಂಗಳಲ್ಲಿ ಅವರ ಜೊತೆ ನಟನೆ ಮಾಡಿದ್ದ ಸೆಂಚುರಿ ಗೌಡ ಸಗ ನಿಧನ ಹೊಂದಿದ್ದಾರೆ.












Click it and Unblock the Notifications