‘ತಗಡು ಯಾರು ಗುರೂ?’ ಅಂತಾ ದರ್ಶನ್‌ಗೆ ಪ್ರಶ್ನೆ ಕೇಳುತ್ತಿದ್ದಾರೆ ಇವರು!
ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರಿದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ರೇಣುಕಾಸ್ವಾಮಿ ಭೀಕರ ಹತ್ಯೆ ಬಳಿಕ ದರ್ಶನ್ ವಿರುದ್ಧ ಸ್ಫೋಟಕ ಆರೋಪಗಳು ಎಲ್ಲೆಲ್ಲೂ ಕೇಳಿಬಂದಿವೆ. ಹೀಗಿದ್ದಾಗ ಉಮಾಪತಿ ಶ್ರೀನಿವಾಸ್ ಗೌಡ ಈಗ ಕೊಲೆ ಆರೋಪಿ ದರ್ಶನ್‌ನ ವಿರುದ್ಧ ಅಖಾಡ ಪ್ರವೇಶ ಮಾಡಿದ್ದು, ಕನ್ನಡಿಗರು 'ಈಗ ತಗಡು ಯಾರು ಗುರೂ?' ಅಂತಾ ದರ್ಶನ್‌ಗೆ ಪ್ರಶ್ನೆ ಕೇಳುತ್ತಿದ್ದಾರೆ.
ದರ್ಶನ್ ಯಾರ ಜೊತೆ ಜಗಳ ಮಾಡಿಕೊಂಡಿಲ್ಲ ಹೇಳಿ? ಆತನ ಗಂಟಲಿಗೆ ಎಣ್ಣೆ ಬಿದ್ದರೆ ಸಾಕು ಆತ ರಾಕ್ಷಸ ಆಗ್ತಾನೆ ಅಂತಾರೆ ನಟ ದರ್ಶನ್ ಅಲಿಯಾಸ್ ಕೊಲೆ ಆರೋಪಿ ಆಗಿರುವ ದರ್ಶನ್ ಪರಿಚಯಸ್ಥರು. ಕುಡಿದು ಮನಸ್ಸಿಗೆ ಬಂದಂತೆ ಆಡುವ ಈತ, ತನ್ನ ಜೊತೆಗೆ ಇರುವವರನ್ನು ಕೂಡ ಹಲ್ಲೆ ಮಾಡಿ ಥಳಿಸುತ್ತಾನೆ. ದರ್ಶನ್ ಒಬ್ಬ ಕುಡುಕ ಎಂಬ ಆರೋಪಗಳು ಇದ್ದು, ಈ ಆರೋಪಗಳ ನಡುವೆ ಇದೀಗ ದರ್ಶನ್ ಜೊತೆಗೆ ಹಲವು ವರ್ಷಗಳ ಕಾಲ ಇದ್ದ ಕನ್ನಡ ಸಿನಿಮಾ ರಂಗದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸ್ಫೋಟಕ ಆರೋಪ ಮಾಡಿದ್ದಾರೆ. ಹಾಗೇ ನಿರ್ಮಾಪಕ ಉಮಾಪತಿಗೆ ತಗಡು ಎಂದಿದ್ದ ದರ್ಶನ್‌ಗೆ ಜನ ಪ್ರಶ್ನೆ ಕೇಳುತ್ತಿದ್ದಾರೆ.

'ಈಗ ತಗಡು ಯಾರು ದರ್ಶನ್?'
ಕನ್ನಡದ ಹಿಟ್ ಸಿನಿಮಾ 'ರಾಬರ್ಟ್' ಮೂವಿ ಒಟ್ಟಿಗೆ ಮಾಡಿದ್ದ ಕೊಲೆ ಆರೋಪಿಯಾದ ದರ್ಶನ್ & ನಿರ್ಮಾಪಕ ಉಮಾಪತಿ ಗೌಡ, ಸಿಕ್ಕಾಪಟ್ಟೆ ಆತ್ಮೀಯತೆ ಕೂಡ ಹೊಂದಿದ್ದರು. ಹೀಗಿದ್ದಾಗಲೇ ದರ್ಶನ್ & ಉಮಾಪತಿ ನಡುವೆ 2 ವರ್ಷಗಳ ಹಿಂದೆ ದೊಡ್ಡ ಜಗಳ ಆಗಿತ್ತು. ಆಗ ನಿರ್ಮಾಪಕ ಉಮಾಪತಿಗೆ ನಟ ದರ್ಶನ್ & ಗ್ಯಾಂಗ್ ಬಾಯಿಗೆ ಬಂದಂತೆ ಮಾತನಾಡಿತ್ತು ಕೆಲವು ತಿಂಗಳ ಹಿಂದೆ ಸ್ವತಃ ಸೋ ಕಾಲ್ಡ್ ಡಿ-ಬಾಸ್ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೆ 'ತಗಡು' ಎಂದು ಕರೆದಿದ್ದ. ಇದು ಈಗ ದೊಡ್ಡ ಬೆಂಕಿ ಹೊತ್ತಿಸಿದೆ.
'ತಗಡು' & 'ಗುಮ್ಮಿಸಿಕೊಳ್ತೀಯಾ?'
ಕೆಲ ದಿನಗಳ ಹಿಂದೆ 'ಕಾಟೇರ' ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್, ಉಮಾಪತಿ ವಿರುದ್ಧ 'ತಗಡು' & 'ಗುಮ್ಮಿಸಿಕೊಳ್ತೀಯಾ?' ಪದ ಬಳಸಿದ್ದರು. ನಿರ್ಮಾಪಕ ಉಮಾಪತಿ ವಿರುದ್ಧ ಗರಂ ಆಗಿದ್ದ ಕೊಲೆ ಆರೋಪಿ ದರ್ಶನ್, ನೇರವಾಗಿ ವಾಗ್ದಾಳಿ ನಡೆಸುತ್ತಾ 'ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂತಹ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಅಂತಾ ಕೊಲೆ ದರ್ಶನ್, ಉಮಾಪತಿಗೆ ಕೇಳಿದ್ದರು.
ದರ್ಶನ್ ಆಡಿದ್ದ ಈ ಮಾತು ಫುಲ್ ವೈರಲ್ ಆಗಿ, ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ನಟ ದರ್ಶನ್ ಕೊಲೆ ಆರೋಪ ಹೊತ್ತು ಜೈಲಿಗೆ ಹೋಗಿದ್ದಾನೆ. ಇಂತಹ ಸ್ಥಿತಿಯಲ್ಲಿ 'ಈಗ ತಗಡು ಯಾರು ದರ್ಶನ್?' ಅಂತಾ ಪ್ರಶ್ನೆ ಕೇಳುತ್ತಿದ್ದಾರೆ ನೆಟ್ಟಿಗರು. ಅಲ್ಲದೆ ಹೆಚ್ಚು ಉರಿಯಬಾರದು, ಎಲ್ಲರ ಮೇಲೆ ಕೈಮಾಡಿ ಹಲ್ಲೆ ಮಾಡಬಾರದು ಅಂತಾ ಕೂಡ ದರ್ಶನ್‌ಗೆ ನೆಟ್ಟಿಗರು ಬುದ್ಧಿ ಹೇಳುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ & ಗ್ಯಾಂಗ್‌ಗೆ ಸರಿಯಾಗಿ ಬುದ್ಧಿ ಕಲಿಸಿ ಅಂತಾ ಕೂಡ ಆಗ್ರಹಿಸುತ್ತಿದ್ದಾರೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ಈಗ ದರ್ಶನ್‌ಗೆ ಜೈಲೂಟ ಗ್ಯಾರಂಟಿ ಆಗಿದೆ.
ಡಿ-ಗ್ಯಾಂಗ್‌ಗೆ ಮಾನಸಿಕ ವಿಕೃತಿ?
ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ರೀತಿ ನೋಡಿದರೆ, ಈ ಗ್ಯಾಂಗ್ ಮಾನಸಿಕ ವಿಕೃತಿ ಹೊಂದಿದೆಯಾ? ಎಂಬ ಅನುಮಾನ ಮೂಡಿದೆ ಯಾಕಂದ್ರೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಸಂಗತಿ ಗೊತ್ತಾಗಿದೆ. ರೇಣುಕಾಸ್ವಾಮಿ ಚರ್ಮಕ್ಕೆ, ತಲೆಗೆ ಹಾಗೂ ಮರ್ಮಾಂಗಕ್ಕೆ ಭಾರಿ ಗಾಯ ಮಾಡಲಾಗಿದೆ. ಹಾಗೇ ಮರ್ಮಾಂಗದ ಚರ್ಮ ಸುಲಿದು ಟಾರ್ಚರ್ ಕೊಟ್ಟಿದ್ದಾರೆ. ಈ ಮೂಲಕ ವಿಕೃತವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಈ ವಿಕೃತರ ಗ್ಯಾಂಗ್. ಹೀಗಾಗಿಯೇ ಪೊಲೀಸರು ಈ ಗ್ಯಾಂಗ್‌ಗೆ ವಿಕೃತ ಮನಸ್ಥಿತಿ ಇದೆಯಾ? ಎಂಬ ಆಂಗಲ್ ಮೂಲಕವೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಇವರಿಂದ ಇನ್ನೂ ಯಾರು, ಯಾರೆಲ್ಲಾ ಸಮಸ್ಯೆ ಎದುರಿಸಿದ್ದಾರೆ? ಅನ್ನೋದನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ಮುಂದೆ ಐತೆ ಮಾರಿ ಹಬ್ಬ?
ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.
ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications