Darshan Thoogudeepa: ದರ್ಶನ್ ತೂಗುದೀಪ್‌ಗೆ ಆಘಾತ ನೀಡಿದ್ದು 2 ಫೋಟೋ, 1 ವಿಡಿಯೋ ಅಷ್ಟೇ!
ಬಾಸ್.. ಬಾಸ್.. ಡಿ-ಬಾಸ್.. ಅಂತಾ ಅಭಿಮಾನಿಗಳಿಂದ & ಕೋಟ್ಯಂತರ ಜನರಿಂದಲೂ ಜೈಕಾರ ಹಾಕಿಸಿಕೊಂಡಿದ್ದ ದರ್ಶನ್ ತೂಗುದೀಪ್ ಇದೀಗ, ಬಳ್ಳಾರಿ ಜೈಲಿಗೆ ಹೋಗುವುದು ಪಕ್ಕಾ ಆಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೆಮ್ಮದಿಯಾಗಿ ಇದ್ದ ದರ್ಶನ್ ತೂಗುದೀಪ್ & ಗ್ಯಾಂಗ್, ಜೈಲಿನಲ್ಲೇ ಸಿಗರೇಟು, ಎಣ್ಣೆ, ಬಿರಿಯಾನಿ ಅಂತಾ ಮಜಾ ಮಡ್ತಾ ಇತ್ತು ಎಂಬ ಆರೋಪ ಇದೆ. ಈ ಆರೋಪದ ನಡುವೆ ಇದೀಗ ಬಳ್ಳಾರಿ ಜೈಲಿಗೆ ದರ್ಶನ್ & ಗ್ಯಾಂಗ್ ಶಿಫ್ಟ್ ಆಗಿದೆ. ಆದರೆ ದರ್ಶನ್ ಅವರು ಹೀಗೆ ಸಂಕಷ್ಟಕ್ಕೆ ಸಿಲುಕಲು ಕಾರಣ ಆಗಿದ್ದೇ ಆ 2 ಫೋಟೋ ಮತ್ತು 1 ವಿಡಿಯೋ!
ಕನ್ನಡ ಸಿನಿಮಾ ರಂಗ ಮಾತ್ರವಲ್ಲ ಕರ್ನಾಟಕದ ತುಂಬಾ ದರ್ಶನ್ ಅವರ ಕೇಸ್ ಅಬ್ಬರಿಸಿದೆ. ದರ್ಶನ್ ತೂಗುದೀಪ್ & ಗ್ಯಾಂಗ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಮನಸ್ಸಿಗೆ ಬಂದ ರೀತಿ ಬದುಕುತ್ತಿದ್ದು, ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಹಣ ನೀಡಿ ಹೀಗೆ ಬೇಕಾದಂತೆ ವ್ಯವಸ್ಥೆ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದರಲ್ಲೂ ದರ್ಶನ್ ತೂಗುದೀಪ್ & ಬೆಂಗಳೂರಿನ ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆಯಾಗಿ ಕೂತು ಭರ್ಜರಿಯಾಗಿ ಧಮ್ ಎಳೆದು, ಟೀ ಕುಡಿದಿದ್ದರು. ಈ ಫೋಟೋ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ದೊಡ್ಡ ಸದ್ದು ಮಾಡಿತ್ತು. ಹೀಗಿದ್ದಾಗಲೇ ಸಿದ್ದರಾಮಯ್ಯ ಅವರ ಸರ್ಕಾರಕ್ಕೂ ಮುಜುಗರ ಆಗಿ, ಡಿ-ಗ್ಯಾಂಗ್ ಸದಸ್ಯರನ್ನ ಒದ್ದು ಈಗ ಓಡಿಸಲಾಗಿದೆ ಅಂತಿದ್ದಾರೆ ವಿರೋಧಿಗಳು.

2 ಫೋಟೋ ಮತ್ತು 1 ವಿಡಿಯೋ!
ದರ್ಶನ್ ತೂಗುದೀಪ್ & ಗ್ಯಾಂಗ್ ದಿಕ್ಕಾಪಾಲಾಗಿ ಓಡಿ ಹೋಗುವ ಪರಿಸ್ಥಿತಿ ಬಂದಿದೆ. ಯಾಕೆ ಅಂದ್ರೆ ಒಂದು ಕಡೆ ದರ್ಶನ್ ತೂಗುದೀಪ್ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ, ಹಾಗೇ ಇನ್ನುಳಿದ ಹತ್ತಾರು ಆರೋಪಿಗಳನ್ನು ಕೂಡ ಬೇರೆ ಬೇರೆ ಜೈಲುಗಳಿಗೆ ಕಳುಹಿಸಿದ್ದಾರೆ ಪೊಲೀಸರು. ಆದರೆ ಪವಿತ್ರಾ ಗೌಡ ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ, ಠಿಕಾಣಿ ಹೂಡಲಿದ್ದಾರೆ.
ಇಡೀ ಕೊಲೆ ಕೇಸ್ ಶುರುವಾಗಿದ್ದೇ ಪವಿತ್ರಾ ಗೌಡಳಿಂದ ಎಂಬ ಆರೋಪ ಇದೆ. ಹೀಗಿದ್ದಾಗಲೇ ಪವಿತ್ರಾ ಗೌಡ ಮಾತ್ರ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು, ಪವಿತ್ರಾ ಗೌಡ ಬೆನ್ನಿಗೆ ನಿಂತ ಪುರುಷರೆಲ್ಲರೂ ತಮ್ಮ ತಮ್ಮ ಕುಟುಂಬಗಳನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗುವ ಪರಿಸ್ಥಿತಿ ಬಂದಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನರು ಕಮೆಂಟ್ ಹಾಕುತ್ತಿದ್ದಾರೆ.
ದರ್ಶನ್ & ಪವಿತ್ರಾ ಗೌಡ ಫೋಟೋ..?
ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.












Click it and Unblock the Notifications