ದರ್ಶನ್ ‘ಡಿ-ಬಾಸ್’ ಪಟ್ಟಕ್ಕೆ ಕುತ್ತು: ಶೀಘ್ರದಲ್ಲೇ ದರ್ಶನ್ ಹೆಸರಿನ ಹಿಂದೆ ‘ರೌಡಿ’ ಸೇರ್ಪಡೆ?
ದರ್ಶನ್ ತೂಗುದೀಪ್ & ಗ್ಯಾಂಗ್ ಯಾವಾಗ ಕೊಲೆ ಆರೋಪದಲ್ಲಿ ಜೈಲಿಗೆ ಸೇರ್ಪಡೆ ಆಗಿತ್ತೋ ಆ ಕ್ಷಣದಿಂದಲೇ ದರ್ಶನ್ ಕಟ್ಟಿದ್ದ ಸಾಮ್ರಾಜ್ಯ ಪೀಸ್ ಪೀಸ್ ಆಗುತ್ತಿದೆ. ಅದರಲ್ಲೂ, ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ತಲೆಗೆ ತೂತು ಮಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಕೈ-ಕಾಲಿಗೆ ಸಿಗರೇಟ್ ಮೂಲಕ ಸುಟ್ಟು, ಬೆನ್ನಿಗೆ ಬರೆ ಹಾಕಿ, ಮರ್ಮಾಂಗಕ್ಕೆ ಕಾಲಿನಲ್ಲಿ ಒದ್ದು ಡಿ-ಗ್ಯಾಂಗ್ ಕೊಲೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತೋ ಅದೇ ಕ್ಷಣದಿಂದ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯಲು ಆಗ್ರಹ ಕೇಳಿಬಂದಿತ್ತು. ಇದೀಗ ಪೊಲೀಸರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ದರ್ಶನ್ ಮಾಡಿರುವ ಕೃತ್ಯಗಳು ಒಂದಾ? ಎರಡಾ? ನಟನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡಬೇಕಿದ್ದ ದರ್ಶನ್ ತೂಗುದೀಪ್, ಬರೀ ಜಗಳ & ಬಡಿದಾಟ ಅಂತಾ ಹಾಳಾಗಿದ್ದಾನೆ ಅನ್ನೋದು ಆತನ ಸ್ನೇಹಿತರು & ಬಂಧುಗಳ ಆರೋಪ. ಅದರಲ್ಲೂ ದರ್ಶನ್ & ಗ್ಯಾಂಗ್ ಹೀಗೆ ಪೊಲೀಸರ ಮೇಲೆ ಕೂಡ ಹಲ್ಲೆ ಮಾಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದು ದರ್ಶನ್ & ಗ್ಯಾಂಗ್‌ನ ಪ್ರಜಾಪ್ರಭುತ್ವ ವಿರೋಧಿ ವರ್ತನೆ ತೋರಿಸುತ್ತಿದೆ. ಹೀಗಿದ್ದಾಗಲೇ ದರ್ಶನ್ ಕೊಲೆ ಆರೋಪದಲ್ಲಿ ಜೈಲಿಗೆ ಸೇರುವುದು ಪಕ್ಕಾ ಆಗಿರುವಾಗ, ದರ್ಶನ್‌ಗೆ 'ರೌಡಿ' ಪಟ್ಟ ಕಟ್ಟಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ ನೋಡಬಾರದಂತೆ!
ದರ್ಶನ್ ಅವರ ಅಭಿಮಾನಿಗಳು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿರುವ ಪೋಸ್ಟ್ ಈಗ ಫುಲ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ, ದರ್ಶನ್ ಡೆವಿಲ್ ಸಿನಿಮಾ ರಿಲೀಸ್ ಆಗುವ ತನಕ ಯಾವುದೇ ಕನ್ನಡ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಬೇಡಿ ಎಂಬ ಸಂದೇಶ ನೀಡಿದ್ದಾರೆ ದರ್ಶನ್ ಅವರ ಫ್ಯಾನ್ಸ್ ಎಂದು ಆರೋಪ ಮಾಡಲಾಗಿದೆ. ಇದೀಗ ಸೋಷಿಯಲ್ ಮೀಡಿಯಾ, ಈ ಪೋಸ್ಟ್‌ನ ಶೇರ್ ಮಾಡುತ್ತಿದ್ದು ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಈ ಬಗ್ಗೆ ಹಲವು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿವೆ.
ನಾನು ಇಷ್ಟು ದಿನ ಯಾಕೆ ಕನ್ನಡ ಫಿಲ್ಮ್ ಗಳು ಯಾಕೆ ಬೆಳಿತ ಇಲ್ಲ ಅಂತ ಆದ್ರೆ ಈ ಪೋಸ್ಟ್ ನೋಡ್ಸ್ಮೇಲೆ ಗೊತ್ತಾಯು ಇದು ಎಲ್ಲ ಸ್ಲಂ #Darshan ಫ್ಯಾನ್ಸ್ ಗಳು ಷಂಡ ಕೆಲ್ಸಾ ಅಂತ
— ಕನ್ನಡಿಗ ❤️🧡 (@Shreyas46789943) June 21, 2024
ದರ್ಶನ್ ಸೂಳೆ ಮಗ ಅವ್ನು ಫ್ಯಾನ್ಸ್ ಷಂಡ ಸೂಳೆಮಕ್ಳು #Darshan #Dboss #ShandaDarshan #Darshanslamfans #kannada #Kfi pic.twitter.com/uxSyKj224R
ಪವಿತ್ರಾ ಗೌಡ ಟಾರ್ಚರ್‌ಗೆ ದರ್ಶನ್ ಸುಸ್ತು!
ದರ್ಶನ್‌ಗೆ ಪವಿತ್ರಾ ಗೌಡ ಸಾಕಷ್ಟು ಟಾರ್ಚರ್ ಕೊಟ್ಟಿದ್ದರಂತೆ. ಅದರಲ್ಲೂ, ದರ್ಶನ್ ಹೆಂಡತಿ ವಿಜಯಲಕ್ಷ್ಮೀ ಏನೇ ಮಾಡಿದರೂ ಅದನ್ನು ತಾನೂ ಮಾಡಬೇಕು ಎಂಬ ಹಠ ಪವಿತ್ರಾ ಗೌಡಗೆ ಇತ್ತು. ಈ ಹಠ ಕೊನೆಗೆ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಈ ರೀತಿ, ಹಲವು ವಿಚಾರದಲ್ಲಿ ದರ್ಶನ್ ಬಾಳಲ್ಲಿ ಪವಿತ್ರಾ ಗೌಡ ಒತ್ತಡ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ವಿಜಯಲಕ್ಷ್ಮೀ ದರ್ಶನ್ 'ರೇಂಜ್ ರೋವರ್' ಕಾರು ಖರೀದಿ ಮಾಡಿದಾಗ ಪವಿತ್ರಾ ಗೌಡ ತನಗೂ ಆ ರೀತಿ 'ರೇಂಜ್ ರೋವರ್' ಬೇಕು ಅಂತಾ ಹಠ ಹಿಡಿದಿದ್ದರಂತೆ. ಹಾಗೇ, ವಿಜಯಲಕ್ಷ್ಮೀ ದರ್ಶನ್ ಯಾವುದೇ ಆಭರಣ & ಚಿನ್ನ ಖರೀದಿ ಮಾಡಲಿ, ಸೀರೆ ಖರೀದಿ ಮಾಡಲಿ ಅಂತಹ ವಸ್ತುಗಳೇ ನಂಗೂ ಬೇಕು ಅಂತಾ ದರ್ಶನ್‌ಗೆ ಪವಿತ್ರಾ ಗೌಡ ಟಾರ್ಚರ್ ಕೊಡ್ತಿದ್ದರು ಅಂತಾ ಆರೋಪ ಮಾಡಲಾಗಿದೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.
ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications