Darshan Thoogudeepa: ದರ್ಶನ್ ತೂಗುದೀಪ್ ಜೈಲಿಗೆ ಹೋದ ನಂತರ ರಕ್ಷಿತ್ ಶೆಟ್ಟಿಗೂ ಕಂಟಕ?
ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಇದೀಗ ಜೈಲು ಸೇರಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ದರ್ಶನ್ ತೂಗುದೀಪ್ ಬಂಧನದ ಸುದ್ದಿ ದೊಡ್ಡ ಆಘಾತ ನೀಡಿದೆ. ಹೀಗಿದ್ದಾಗ ರಕ್ಷಿತ್ ಶೆಟ್ಟಿ ಅವರಿಗೂ ಬಂಧನದ ಭೀತಿ ಕಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ನಟ ರಕ್ಷಿತ್ ಶೆಟ್ಟಿ ಇದೀಗ ಕೋರ್ಟ್ ಮೊರೆ ಹೋಗಿದ್ದಾರಂತೆ! ಯಾಕೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ರೀತಿ ಆತಂಕದ ವಾತಾವರಣ ಎದುರಾಗಿದೆ. ಯಾಕಂದ್ರೆ ಕನ್ನಡ ಸಿನಿಮಾ ರಂಗದ ನಟ & ನಟಿಯರಿಗೆ ಒಂದಲ್ಲ ಒಂದು ರೀತಿಯ ಕಂಟಕ ಎದುರಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ನಟ ದರ್ಶನ್ ತೂಗುದೀಪ್ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ ನಂತರ ತಲ್ಲಣ ಸೃಷ್ಟಿ ಆಗಿದೆ. ಇದೇ ಸಮಯದಲ್ಲಿ ಸಿಂಪಲ್ ಸ್ಟಾರ್ ಎಂಬ ಬಿರುದು ಪಡೆದ ನಟ ರಕ್ಷಿತ್ ಶೆಟ್ಟಿ ಕೂಡ ಸಮಸ್ಯೆ ಸುಳಿಗೆ ಸಿಲುಕಿದ್ದು, ಪೊಲೀಸರಿಂದ ಬಂಧನದ ಭೀತಿ ಎದುರಿಸುತ್ತಿದ್ದಾರೆ!

ರಕ್ಷಿತ್ ಶೆಟ್ಟಿಗೆ ಬಂಧನ ಭೀತಿ?
ಅಂದಹಾಗೆ ರಕ್ಷಿತ್ ಶೆಟ್ಟಿ ಅವರಿಗೆ ಇದೀಗ ಕಂಟಕ ಎದುರಾಗಲು ಕಾರಣ ಆಗಿರುವುದು ಏನು ಅಂದ್ರೆ ಕಾಪಿ ರೈಟ್ಸ್. ಅಷ್ಟಕ್ಕೂ ಕಾಪಿ ರೈಟ್ಸ್ ಉಲ್ಲಂಘನೆ ಆರೋಪ ಹೊತ್ತಿರೋ ರಕ್ಷಿತ್ ಶೆಟ್ಟಿ ಅವರಿಗೆ ಬಂಧನದ ಭೀತಿ ಕಾಡುತ್ತಿದೆ. ಇದೇ ಕಾರಣಕ್ಕೆ ರಕ್ಷಿತ್ ಅವರು ನಿರೀಕ್ಷಣಾ ಜಾಮೀನು ಕೋರಿ ಈಗ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಗಾಂಧಿ ನಗರದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾದಲ್ಲಿ ಅನುಮತಿ ಇಲ್ಲದೇ 2 ಹಾಡು ಬಳಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೇ ವಿಚಾರವಾಗಿ, ಇದೀಗ ಯಶವಂತಪುರ ಪೊಲೀಸ್ ಠಾಣೆಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅವರ ನಿರ್ಮಾಣ ಸಂಸ್ಥೆ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಈ ಕಾರಣಕ್ಕೆ, ಈಗ ರಕ್ಷಿತ್ ಶೆಟ್ಟಿ ಅವರಿಗೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೋರ್ಟ್ ಈ ಬಗ್ಗೆ ಹೇಳಿರುವುದು ಏನು? ಮುಂದೆ ಓದಿ.
ರಕ್ಷಿತ್ ಭವಿಷ್ಯ ಜುಲೈ 24ಕ್ಕೆ ನಿರ್ಧಾರ?
ಸಿಂಪಲ್ ಸ್ಟಾರ್ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ನಟ ರಕ್ಷಿತ್ ಶೆಟ್ಟಿ ಈಗ ನಿರೀಕ್ಷಣ ಜಾಮೀನು ಕೋರಿ ಬೆಂಗಳೂರು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬ್ಯಾಚಲರ್ಸ್ ಪಾರ್ಟಿ ಸಿನಿಮಾಗಾಗಿ ಅನಧಿಕೃತವಾಗಿ ಈ ಹಾಡನ್ನು ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಇದಾಗಿದೆ. ರಕ್ಷಿತ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಲಾಗಿದ್ದು, ಜುಲೈ 24ಕ್ಕೆ ಸೆಷನ್ಸ್ ಕೋರ್ಟ್ ವಿಚಾರಣೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಕೇಸ್ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದೆ.
ದರ್ಶನ್ ಗ್ಯಾಂಗ್‌ನಲ್ಲಿ ವಾರ್ ಶುರು?
ಹೌದು, ಜೈಲಿಗೆ ಸೇರಿದ ಕೋಪದಲ್ಲಿ ಇರುವ ನಟ ದರ್ಶನ್ ತೂಗುದೀಪ್ ಇದೀಗ ತನ್ನದೇ ಗ್ಯಾಂಗ್‌ನ ಸದಸ್ಯರ ವಿರುದ್ಧ ರೊಚ್ಚಿಗೆದ್ದಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಹೀಗೆ ನಾನು ಜೈಲಿಗೆ ಬರಲು ನೀನೇ ಕಾರಣ ಅಂತಾ, A14 ಆರೋಪಿ ಆಗಿರುವ ಪ್ರದೋಷ್ ಬಗ್ಗೆ ಅಸಮಾಧಾನ ಹೊರ ಹಾಕಿರುವ ನಟ ದರ್ಶನ್ ರೊಚ್ಚಿಗೆದ್ದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಅಲ್ಲದೆ ಇದೇ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿ, ಮತ್ತೆ ಮೊದಲಿನ ರೀತಿಯಲ್ಲೇ ಸಿಟ್ಟು ಹೊರಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟ ದರ್ಶನ್ ತೂಗುದೀಪ್, ಬದಲಾಗಿ ಜೈಲಿನಿಂದ ಹೊರಗೆ ಬರ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತರ ಆರೋಪಿಗಳು ಕೂಡ ದರ್ಶನ್ ವರ್ತನೆಗೆ ಅಸಮಾಧಾನ ಹೊರಹಾಕಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications