Darshan Thoogudeepa: ದರ್ಶನ್ ಪರ ನಿಂತ ನಂದಕಿಶೋರ್‌ಗೆ ‘ಶಟಪ್’ ಎಂದ ಪಬ್ಲಿಕ್ ಟಿವಿ ರಂಗಣ್ಣ
ದರ್ಶನ್ ತೂಗುದೀಪ್ ವಿಚಾರ ಈಗ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ ಸೌಂಡ್ ಮಾಡುತ್ತಿದೆ. ಅದರಲ್ಲೂ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ಆಗಿ ಕಂಬಿ ಎಣಿಸುವ ವ್ಯಕ್ತಿಗೆ ಸಿಗರೇಟು ಸಿಕ್ಕಿದ್ದು ಹೇಗೆ? ಅಂತಾ ದೊಡ್ಡ ಚರ್ಚೆ ಶುರುವಾಗಿದೆ. ಇದೇ ಸಮಯದಲ್ಲಿ ನಟ ದರ್ಶನ್ ಪರ ಸುಧೀರ್ ಮಗ ನಂದಕಿಶೋರ್ ಮಾತನಾಡಿದ್ದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಪಬ್ಲಿಕ್ ಟಿವಿ ರಂಗಣ್ಣ ಅವರು, ನ್ಯೂಸ್ ಓದುವಾಗ ಲೈವ್‌ನಲ್ಲೇ 'ಶಟಪ್' ಎಂದಿದ್ದಾರೆ. ಬಾಯಿ ಮುಚ್ಚು ಅಂತಾ ನಂದಕಿಶೋರ್‌ಗೆ ಆಗ್ರಹಿಸಿರುವ ಪಬ್ಲಿಕ್ ಟಿವಿ ರಂಗಣ್ಣ ಅವರು, ಪೊಲೀಸರಿಗೆ ಸಲಹೆ ಒಂದನ್ನ ಕೂಡ ನೀಡಿದ್ದಾರೆ!
ದರ್ಶನ್ ತೂಗುದೀಪ್ & ಗ್ಯಾಂಗ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಮನಸ್ಸಿಗೆ ಬಂದ ರೀತಿ ಬದುಕುತ್ತಿದ್ದು, ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಹಣ ನೀಡಿ ಹೀಗೆ ಬೇಕಾದಂತೆ ವ್ಯವಸ್ಥೆ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಈ ವಿಚಾರವಾಗಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೂ ಮುಜುಗರ ಆಗಿರುವ ಹಿನ್ನೆಲೆ ದರ್ಶನ್ ತೂಗುದೀಪ್ & ಗ್ಯಾಂಗ್ ಬೇರೆ ಕಡೆ ಶಿಫ್ಟ್ ಮಾಡಲು ಪ್ಲಾನ್ ಮಾಡಲಾಗಿದೆ. ಹೀಗೆ ದರ್ಶನ್ ತೂಗುದೀಪ್ ಅವರು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆಗೆ, ಸಿಗರೇಟು ಸೇದುತ್ತಾ, ಟೀ ಕುಡಿದ ಫೋಟೋಗೆ ಹಿರಿಯ ನಟ ಸುಧೀರ್ ಮಗ ನಂದಕಿಶೋರ್ ರಿಯಾಕ್ಷನ್ ಕೊಟ್ಟಿದ್ದರು. ನಂದಕಿಶೋರ್ ಪ್ರತಿಕ್ರಿಯೆ ನೀಡುವ ಅಬ್ಬರದಲ್ಲಿ ದರ್ಶನ್ ತೂಗುದೀಪ್ ಪರ ಮಾತನಾಡಿದ್ದಕ್ಕೆ, ಹಿರಿಯ ಪತ್ರಕರ್ತ ಪಬ್ಲಿಕ್ ಟಿವಿ ರಂಗಣ್ಣ ಅವರು ಗರಂ ಆಗಿದ್ದಾರೆ!

ಪಬ್ಲಿಕ್ ಟಿವಿ ರಂಗಣ್ಣ ಗರಂ!
ಹಿರಿಯ ನಟ ಸುಧೀರ್ ಅವರು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಅಲ್ಲದೆ ಕೋಟ್ಯಂತರ ಕನ್ನಡ ಅಭಿಮಾನಿಗಳ ಮನಸ್ಸು ಕೂಡ ಗೆದ್ದರು. ಅದೇ ರೀತಿ, ಸುಧೀರ್‌ರ ಮಕ್ಕಳಾದ ನಂದಕಿಶೋರ್ & ತರುಣ್ ಸುಧೀರ್ ಕನ್ನಡ ಸಿನಿಮಾ ರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ದರ್ಶನ್ ತೂಗುದೀಪ್ ಅವರ ಜೊತೆಗೆ ಉತ್ತಮ ಒಡನಾಟ ಕೂಡ ಇಟ್ಟುಕೊಂಡಿದ್ದಾರೆ. ಹೀಗಿದ್ದಾಗ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ಸಿಗರೇಟು ಸೇದುತ್ತಾ ಟೀ ಕುಡಿದ ಫೋಟೋಗೆ ಪ್ರತಿಕ್ರಿಯೆ ನೀಡಿದ್ದರು. ಇದನ್ನು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ನೋಡಿದ ಪಬ್ಲಿಕ್ ಟಿವಿ ರಂಗಣ್ಣ ಅವರು, ನಂದಕಿಶೋರ್‌ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
ಪೊಲೀಸರ ಬಳಿ ರಂಗಣ್ಣ ಅವರ ಮನವಿ!
ದರ್ಶನ್ ತೂಗುದೀಪ್ ಅವರು ಪರಪ್ಪನ ಅಗ್ರಹಾರ ಜೈಲಿನ ಒಳಗೆ ಸಿಗರೇಟು ಸೇದುತ್ತಿರುವ ಫೋಟೋ 'ಎಐ' ಮೂಲಕ ಕ್ರಿಯೇಟ್ ಮಾಡಿರಬಹುದಾದ ನಕಲಿ ಫೋಟೋ ಇರಬಹುದು, ಎಂದು ನಿರ್ದೇಶಕ & ದರ್ಶನ್ ಅವರ ಆಪ್ತ ನಂದಕಿಶೋರ್ ಹೇಳಿಕೆ ನೀಡಿದ್ದರು. ಆಗಲೇ, 'ಶಟಪ್' ಅಂದರೆ 'ಬಾಯಿ ಮಚ್ಚಿ' ಎಂಬ ಅರ್ಥದಲ್ಲಿ ಮಾತನಾಡಿದ ಪಬ್ಲಿಕ್ ಟಿವಿ ರಂಗಣ್ಣ ಅವರು, ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿದ ಫೋಟೋ ಲೀಕ್ ಆಗಿರುವ ಪ್ರಕರಣದಲ್ಲಿ, ನಿರ್ದೇಶಕ & ದರ್ಶನ್ ಅವರ ಆಪ್ತ ನಂದಕಿಶೋರ್ ಅವರನ್ನು ಕೂಡ ಸಾಕ್ಷಿ ಮಾಡಿಕೊಂಡು ವಿಚಾರಣೆ ನಡೆಸಬೇಕು ಎಂದು ಪೊಲೀಸರ ಬಳಿ ಒತ್ತಾಯಿಸಿದ್ದಾರೆ.
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications